ಹೈದರಾಬಾದ್: ಅಜಯ್ ಸಿಂಗ್ ಒಡೆತನದ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆ, ಪ್ರಯಾಣಿಕರ ಕೊರತೆಯನ್ನು ಉಲ್ಲೇಖಿಸಿ, ಪ್ರಾರಂಭವಾದ ಎರಡು ತಿಂಗಳೊಳಗೆ ಹೈದರಾಬಾದ್‌ನಿಂದ ಅಯೋಧ್ಯೆ ತನ್ನ ನೇರ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಗುರುಗ್ರಾಮ್ ಮೂಲದ ವಿಮಾನಯಾನ ಸಂಸ್ಥೆಯು ಈ ವರ್ಷದ ಏಪ್ರಿಲ್ ನಲ್ಲಿ ಹೈದರಾಬಾದ್-ಅಯೋಧ್ಯೆ ಮಾರ್ಗದಲ್ಲಿ ವಾರಕ್ಕೆ ಮೂರು ಬಾರಿ ತಡೆರಹಿತ ವಿಮಾನ ಸೇವೆಗಳನ್ನು ಪ್ರಾರಂಭಿಸಿತ್ತು. ಆದರೆ "ಜೂನ್ 1 ರಿಂದ ಹೈದರಾಬಾದ್‌ನಿಂದ ಅಯೋಧ್ಯೆಗೆ ತನ್ನ ತಡೆರಹಿತ ವಿಮಾನ ಸೇವೆಗಳನ್ನು ಸ್ಪೈಸ್‌ಜೆಟ್ ಸ್ಥಗಿತಗೊಳಿಸಿದೆ" ಎಂದು ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ವಿಮಾನಯಾನ ಸಂಸ್ಥೆಯು ತೆಲಂಗಾಣ ರಾಜಧಾನಿಯಿಂದ ರಾಮ ಮಂದಿರ ಇರುವ ಅಯೋಧ್ಯೆಗೆ ವಾರಕ್ಕೆ ಮೂರು ಬಾರಿ ನೇರ ವಿಮಾನ ಸೇವೆ ನೀಡುತ್ತಿತ್ತು.
"ವಿಮಾನದ ವೇಳಾಪಟ್ಟಿಯನ್ನು ಕೇವಲ ವಾಣಿಜ್ಯ ಪರಿಗಣನೆಗಳು ಮತ್ತು ಬೇಡಿಕೆಯ ಆಧಾರದ ನಡೆಸಲಾಗುತ್ತದೆ" ಎಂದು ಸ್ಪೈಸ್ಜೆಟ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ ನಾವು ಇನ್ನೂ ಅಯೋಧ್ಯೆಯಿಂದ ಚೆನ್ನೈಗೆ ವಿಮಾನ ಸೇವೆ ಒದಗಿಸುತ್ತಿದ್ದೇವೆ" ಎಂದು ವಕ್ತಾರರು ಹೇಳಿದ್ದಾರೆ.