ಎಸ್ ಬಿಐ
ಎಸ್ ಬಿಐ 
ವಾಣಿಜ್ಯ

ಚುನಾವಣಾ ಬಾಂಡ್ ನಿಷೇಧ: ಮಾಹಿತಿ ನೀಡಲು ಗಡುವು ವಿಸ್ತರಿಸುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಎಸ್‌ಬಿಐ

Lingaraj Badiger

ನವದೆಹಲಿ: ಚುನಾವಣಾ ಬಾಂಡ್ ಗಳನ್ನು ನಿಷೇಧಿಸಿರುವ ಸುಪ್ರೀಂ ಕೋರ್ಟ್, ಮಾರ್ಚ್ 6 ರೊಳಗೆ ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿ ಚುನಾವಣಾ ಬಾಂಡ್‌ಗಳ ವಿವರಗಳ ನೀಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ)ಗೆ ಸೂಚಿಸಿದೆ. ಆದರೆ ವಿವರ ನೀಡಲು ಜೂನ್ 30 ರವರೆಗೆ ಗಡುವು ವಿಸ್ತರಿಸಬೇಕು ಎಂದು ಕೋರಿ ಎಸ್ ಬಿಐ ಸೋಮವಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.

ಉನ್ನತ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) "ಪ್ರತಿ ಸಿಲೋ" ದಿಂದ ಮಾಹಿತಿಯನ್ನು ಮರುಪಡೆಯುವುದು ಮತ್ತು ಒಂದು ಸಿಲೋದ ಮಾಹಿತಿಯನ್ನು ಇನ್ನೊಂದಕ್ಕೆ ಹೊಂದಿಸುವ ಪ್ರಕ್ರಿಯೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಪ್ರತಿಪಾದಿಸಿದೆ.

ದಾನಿಗಳ ಗುರುತನ್ನು ಅನಾಮಧೇಯವಾಗಿ ಇಡುವುದನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಚುನಾವಣಾ ಬಾಂಡ್‌ಗಳನ್ನು "ಡಿಕೋಡಿಂಗ್" ಮಾಡುವುದು ಮತ್ತು ನೀಡಿದ ದೇಣಿಗೆಗಳಿಗೆ ದಾನಿಗಳನ್ನು ಹೊಂದಿಸುವುದು ಸಂಕೀರ್ಣ ಪ್ರಕ್ರಿಯೆಯಾಗಿದೆ. ಹೀಗಾಗಿ ಮಾಹಿತಿ ನೀಡಲು ಜೂನ್ 30ರ ವರೆಗೆ ಸಮಯ ನೀಡುವಂತೆ ಎಸ್ ಬಿಐ ಕೇಳಿಕೊಂಡಿದೆ.

ರಾಜಕೀಯ ಪಕ್ಷಗಳು ನಗದಾಗಿ ಪರಿವರ್ತಿಸಿಕೊಂಡ ಪ್ರತಿಯೊಂದು ಚುನಾವಣಾ ಬಾಂಡ್ ಗಳ ಕುರಿತು ಎಸ್ ಬಿಐ ನಗದಿನ ದಿನಾಂಕ, ಮುಖಬೆಲೆ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಬಹಿರಂಗಗಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

SCROLL FOR NEXT