ಕೃತಕ ಬುದ್ದಿಮತ್ತೆ ಮತ್ತು ಉದ್ಯೋಗ
ಕೃತಕ ಬುದ್ದಿಮತ್ತೆ ಮತ್ತು ಉದ್ಯೋಗ TNIE
ವಾಣಿಜ್ಯ

ಭಾರತೀಯರಿಗೆ AI ಭವಿಷ್ಯದ ಮೇಲೆ ನಂಬಿಕೆ ಹೆಚ್ಚು, ಸಹೋದ್ಯೋಗಿಗಳಿಗಿಂತ ಚಾಟ್‌ಬಾಟ್‌ಗಳ ಮಾತಿಗೆ ಆದ್ಯತೆ!

Srinivasamurthy VN

ಬೆಂಗಳೂರು: ಭಾರತದಲ್ಲಿ ಕೃತಕ ಬುದ್ದಿಮತ್ತೆ ಎಷ್ಟು ಆಳವಾಗಿ ತಳವೂರುತ್ತಿದೆ ಎಂದರೆ ಭಾರತೀಯರಿಗೆ ತಮ್ಮ ವೃತ್ತಿಜೀವನದ ಕುರಿತ AIನ ಭವಿಷ್ಯದ ಮೇಲೆ ನಂಬಿಕೆ ಹೆಚ್ಚಿದ್ದು, ಸ್ವತಃ ತಮ್ಮ ಸಹೋದ್ಯೋಗಿಗಳಿಗಿಂತ ಚಾಟ್‌ಬಾಟ್‌ಗಳ ಮಾತನ್ನು ಕೇಳುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ದೈನಂದಿನ ಜೀವನದಲ್ಲಿ ಕೃತಕ ಬುದ್ಧಿಮತ್ತೆಯ (AI) ಪ್ರಭಾವದ ಕುರಿತು ಬಹುರಾಷ್ಟ್ರೀಯ ಕಂಪನಿಯೊಂದು ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆಯಲ್ಲಿ ಸುಮಾರು 2,000 ಕ್ಕೂ ಹೆಚ್ಚು ಭಾರತೀಯರನ್ನು ಬಳಸಿಕೊಳ್ಳಲಾಗಿತ್ತು. ಈ ಪೈಕಿ ಪ್ರತಿಕ್ರಿಯಿಸಿದವರಲ್ಲಿ 70% ರಷ್ಟು ಜನರು ತಮ್ಮ ಸಹೋದ್ಯೋಗಿಗಳು ಅಥವಾ ಪರಿಚಯಸ್ಥರ ಉತ್ತರಕ್ಕಿಂತ ಹೆಚ್ಚು AI ಚಾಟ್‌ಬಾಟ್‌ಗಳ ಉತ್ತರಗಳನ್ನು ನಂಬುತ್ತಾರೆ.

ಇದಲ್ಲದೆ, ಭಾರತೀಯರು ತಮ್ಮ "ಆದರ್ಶ ವೈಯಕ್ತಿಕ ವೃತ್ತಿ ಮಾರ್ಗ" ಕ್ಕಾಗಿ AI ನ ಶಿಫಾರಸನ್ನು ಅನುಸರಿಸುತ್ತಾರೆ, ಅದು ಅವರಿಗೆ ಅತ್ಯಂತ ಸಂತೋಷ ಮತ್ತು ಯಶಸ್ಸನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಸಮೀಕ್ಷೆಯನ್ನು ಡಿಸೆಂಬರ್ 2023 ರಲ್ಲಿ ನಡೆಸಲಾಗಿದ್ದು, ಮಾರ್ಚ್ 13 ರಂದು ಬಿಡುಗಡೆಯಾದ ವರದಿಯು ಸುಮಾರು 73% ಭಾರತೀಯರು ತಮ್ಮ ವೃತ್ತಿಜೀವನದ ಹಾದಿಯನ್ನು ಆರಿಸಿಕೊಳ್ಳುವಲ್ಲಿ ಮನುಷ್ಯರ ಮಾತಿಗಿಂತ ಹೆಚ್ಚು AI ನ ಭವಿಷ್ಯವನ್ನು ನಂಬುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಸಮೀಕ್ಷೆ ತೋರಿಸಿದೆ.

ಬಾಷ್‌ನ ಮೂರನೇ ವಾರ್ಷಿಕ ಟೆಕ್ ಕಂಪಾಸ್ ಸಮೀಕ್ಷೆಯು ಪ್ರಪಂಚದಾದ್ಯಂತ ಬದಲಾವಣೆಯ ಪ್ರಮುಖ ಚಾಲಕನಾಗಿ AI ಯ ಬೆಳೆಯುತ್ತಿರುವ ಪ್ರಸ್ತುತತೆಯನ್ನು ಎತ್ತಿ ತೋರಿಸಿದೆ. ಬ್ರೆಜಿಲ್, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್) ಮತ್ತು ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಸೇರಿದಂತೆ ಏಳು ದೇಶಗಳಲ್ಲಿ ಅಧ್ಯಯನವನ್ನು ನಡೆಸಲಾಯಿತು.

ಈ ಅಧ್ಯಯನವು ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಜಾಗತಿಕ ದೃಷ್ಟಿಕೋನಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ. ಜನರ ವರ್ತನೆಗಳು, ನಂಬಿಕೆಗಳು, ನಿರೀಕ್ಷೆಗಳು, ಕಾಳಜಿಗಳು ಮತ್ತು ದೇಶದ ಸನ್ನದ್ಧತೆಯನ್ನು ಇದು ಒಳಗೊಂಡಿತ್ತು ಎನ್ನಲಾಗಿದೆ.

35 ಪುಟಗಳ ವರದಿಯು 18-59 ವರ್ಷ ವಯಸ್ಸಿನ ಭಾರತೀಯರ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳನ್ನು ವಿವರಿಸಿದ್ದು, ಒಟ್ಟು 2,163 ವ್ಯಕ್ತಿಗಳು ರಾಬರ್ಟ್ ಬಾಷ್ GmbH ಪರವಾಗಿ ಮಾರುಕಟ್ಟೆ ಸಂಶೋಧಕರು Gesellschaft für Innovative Marktforschung mbH (GIM) ಮೂಲಕ ಆನ್‌ಲೈನ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಯಾದೃಚ್ಛಿಕ ಮಾದರಿಗಳು ಪ್ರದೇಶ, ಲಿಂಗ ಮತ್ತು ವಯಸ್ಸಿನ ವಿಷಯದಲ್ಲಿ ಆಯಾ ದೇಶಗಳ ಪ್ರತಿನಿಧಿಗಳಾಗಿವೆ.

ಭಾರತದಲ್ಲಿ, 80% ಮತ್ತು 73% ಜಾಗತಿಕವಾಗಿ ಜನರೇಟಿವ್ AI ಯ ಹೊರಹೊಮ್ಮುವಿಕೆ ಇಂಟರ್ನೆಟ್‌ನ ಪ್ರಸ್ತುತವಾದ ಏರಿಕೆ ಎಂದು ಪ್ರತಿಪಾದಿಸಿದ್ದಾರೆ ಮತ್ತು 81%ರಷ್ಟು ಪ್ರತಿಕ್ರಿಯಿಸಿದವರು ದೇಶವು AI ಕ್ರಾಂತಿಗೆ ಸಿದ್ಧವಾಗಿದೆ ಎಂದು ನಂಬಿದ್ದಾರೆ.

ಕುತೂಹಲಕಾರಿಯಾಗಿ ಈ ಹೊಸ ತಂತ್ರಜ್ಞಾನಗಳಾದ 5G ಮತ್ತು AI ಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ ಧನಾತ್ಮಕ ಪರಿಣಾಮ ಬೀರಲು ಅನೇಕರು ಹ್ಯೂಮನಾಯ್ಡ್ ಮತ್ತು ಸೇವಾ ರೋಬೋಟ್‌ಗಳು ಉದ್ಯೋಗಗಳ ಮೇಲೆ ಪರಿಣಾಮ ಬೀರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಶೇ.56% ರಷ್ಟು ಭಾರತೀಯರು AI ಗಾಗಿ ತಯಾರಿ ಮಾಡಲು ಮತ್ತು ಅದನ್ನು ಜವಾಬ್ದಾರಿಯುತವಾಗಿ ಕಾರ್ಯಗತಗೊಳಿಸಲು ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

“ಕೃತಕ ಬುದ್ದಿ ಮತ್ತೆ ಅಥವಾ AI ನಂತಹ ಉದಯೋನ್ಮುಖ ತಂತ್ರಜ್ಞಾನಗಳ ಕಡೆಗೆ ಭಾರತದ ಹೆಚ್ಚುತ್ತಿರುವ ಸ್ವೀಕಾರ ಮತ್ತು ಉತ್ಸಾಹವನ್ನು ಈ ಸಮೀಕ್ಷೆಯು ಪ್ರತಿಬಿಂಬಿಸುತ್ತದೆ. ಸುಸ್ಥಿರತೆ, ಚಲನಶೀಲತೆ, ಉತ್ಪಾದನೆ ಮತ್ತು ದೈನಂದಿನ ಜೀವನದಂತಹ ವೈವಿಧ್ಯಮಯ ವಲಯಗಳಲ್ಲಿ AI-ಚಾಲಿತ ಪರಿಹಾರಗಳ ಮೇಲೆ ಭಾರತ ಉತ್ಸುಕವಾಗಿದೆ.

Bosch ನಲ್ಲಿ, ನಾವು AI ಯ ಸಾಮರ್ಥ್ಯವನ್ನು ಗುರುತಿಸುತ್ತೇವೆ ಮತ್ತು ಪ್ರತಿಯೊಬ್ಬರಿಗೂ ಸುರಕ್ಷಿತ ಅನುಭವವನ್ನು ನೀಡಲು ಜವಾಬ್ದಾರಿಯುತವಾಗಿ ಅದನ್ನು ಕಾರ್ಯಗತಗೊಳಿಸಲು ಬದ್ಧರಾಗಿದ್ದೇವೆ ಎಂದು ಭಾರತದ ಬಾಷ್ ಗ್ರೂಪ್ ನ ಅಧ್ಯಕ್ಷ ಮತ್ತು ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಗುರುಪ್ರಸಾದ್ ಮುದ್ಲಾಪುರ್ ತಿಳಿಸಿದ್ದಾರೆ.

ಜಾಗತಿಕ ಸೂಚ್ಯಂಕವು ಭಾರತದಲ್ಲಿ ಜೀವನವನ್ನು ಹೆಚ್ಚು ಆರಾಮದಾಯಕವಾಗಿಸುವುದರಲ್ಲಿ (49%) AI ಯ ಉತ್ತಮ ಪ್ರಯೋಜನಗಳನ್ನು ತೋರಿಸುತ್ತದೆ ಎಂದು ಅಧ್ಯಯನವು ಸೂಚಿಸಿದೆ. ಅಲ್ಲದೆ ಉದಯೋನ್ಮುಖ ತಂತ್ರಜ್ಞಾನಗಳು ತಮ್ಮ ಕೆಲಸವನ್ನು 59% ಸುಲಭಗೊಳಿಸಲು ಮತ್ತು ಉತ್ತಮ ಕೆಲಸದ ಫಲಿತಾಂಶಗಳನ್ನು (54%) ಉತ್ತೇಜಿಸಲು ಸಹಾಯ ಮಾಡುತ್ತದೆ.

SCROLL FOR NEXT