ಸರ್ಕಾರಿ ಇ- ಮಾರುಕಟ್ಟೆ
ಸರ್ಕಾರಿ ಇ- ಮಾರುಕಟ್ಟೆ online desk
ವಾಣಿಜ್ಯ

ಸರ್ಕಾರಿ ಇ-ಮಾರುಕಟ್ಟೆಯಿಂದ ಸರಕು ಖರೀದಿ 2024 ರಲ್ಲಿ ದ್ವಿಗುಣ, 4 ಲಕ್ಷ ಕೋಟಿ ರೂ. ಗೆ ಏರಿಕೆ

Srinivas Rao BV

ನವದೆಹಲಿ: ಸರ್ಕಾರಿ ಇ- ಮಾರುಕಟ್ಟೆಯಿಂದ ಸರಕು ಖರೀದಿ ಪ್ರಮಾಣ 2024 ರಲ್ಲಿ ದ್ವಿಗುಣಗೊಂಡಿದ್ದು, 4 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಮಾ.28, 2024 ವರೆಗಿನ ಅಂಕಿ-ಅಂಶಗಳು ಇದಾಗಿದೆ. ಸರ್ಕಾರಿ ಇಲಾಖೆಗಳಿಗೆ ಸರಕು ಸೇವೆಗಳನ್ನು ಪಡೆಯುವುದಕ್ಕೆ ಪಾದರ್ಶಕ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ 2016 ರಲ್ಲಿ ಈ ಜಿಇಎಂ ನ್ನು ಜಾರಿಗೆ ತರಲಾಗಿತ್ತು.

ಜಿಇಎಂ ನಲ್ಲಿ ಮಹಿಳಾ ಸ್ವಸಹಾಯಕ ಗುಂಪು, ಸ್ಟಾರ್ಟ್ ಅಪ್ ಹಾಗೂ ಎಂಎಸ್ಎಂಇಗಳಂತಹ ಸಣ್ಣ ಉದ್ಯಮಿಗಳು, ಸೇವೆ, ಸರಕುಗಳನ್ನು ಪೂರೈಸುತ್ತಾರೆ. 2016 ರಲ್ಲಿ ಪೋರ್ಟಲ್ ನಲ್ಲಿನ ವ್ಯಾಪಾರದ ಮೌಲ್ಯ422 ಕೋಟಿ ರೂಪಾಯಿಗಳಷ್ಟಿತ್ತು 2021-22 ರಲ್ಲಿ ಇದು 1.06 ಲಕ್ಷ ಕೋಟಿಗೆ ಏರಿಕೆಯಾಗಿತ್ತು. 2023 ರಲ್ಲಿ ಇಲ್ಲಿನ ವಹಿವಾಟು 2 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿತ್ತು.

ಮಾರ್ಚ್ 2024 ರವರೆಗಿನ ಈ GMV ಯ ಸುಮಾರು 50% ರಷ್ಟು ಸೇವೆಗಳ ಸಂಗ್ರಹಣೆಗೆ ಕಾರಣವಾಗಿದೆ, ಕಳೆದ ವರ್ಷಕ್ಕೆ ಹೋಲಿಸಿದರೆ 205% ಬೆಳವಣಿಗೆಯನ್ನು ದಾಖಲಿಸಿದೆ. ಜಿಇಎಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿಕೆ ಸಿಂಗ್ ಮಾತನಾಡಿ, ಪೋರ್ಟಲ್‌ನಿಂದ ಸೇವೆಗಳ ಸಂಗ್ರಹಣೆಯು FY23 ರಲ್ಲಿ 66,000 ಕೋಟಿಗಳಿಂದ ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ 2.05 ಲಕ್ಷ ಕೋಟಿ ರೂಪಾಯಿಗಳಿಗೆ ಜಿಗಿದಿದೆ. ವೇದಿಕೆಯಿಂದ 1.95 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಖರೀದಿಸಲಾಗಿದೆ. ಆಟೋಮೊಬೈಲ್‌ಗಳು, ಕಂಪ್ಯೂಟರ್‌ಗಳು ಮತ್ತು ಕಚೇರಿ ಪೀಠೋಪಕರಣಗಳು ಖರೀದಿಸಲಾಗಿರುವ ಕೆಲವು ಪ್ರಮುಖ ಉತ್ಪನ್ನ ವರ್ಗಗಳಾಗಿವೆ.

"ಸ್ಥಾಪಿತ ಸೇವಾ ಪೂರೈಕೆದಾರರ ಏಕಚಕ್ರಾಧಿಪತ್ಯವನ್ನು ಮುರಿಯುವಲ್ಲಿ ಜಿಇಎಂ ಯಶಸ್ವಿಯಾಗಿದೆ, ಸಣ್ಣ ದೇಶೀಯ ಉದ್ಯಮಿಗಳು ಯಾವುದೇ ಸಮಯದಲ್ಲಿ ಸರ್ಕಾರಿ ಟೆಂಡರ್‌ಗಳಲ್ಲಿ ಭಾಗವಹಿಸಲು ದಾರಿ ಮಾಡಿಕೊಟ್ಟಿದೆ" ಎಂದು ವಾಣಿಜ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

SCROLL FOR NEXT