ಚಿನ್ನ ಮತ್ತು ಬೆಳ್ಳಿ ಬೆಲೆ 
ವಾಣಿಜ್ಯ

Gold Rate: ಚಿನ್ನದ ಬೆಲೆ ಏರಿಕೆ; ಬೆಂಗಳೂರಿನಲ್ಲಿ ಹೊಸ ದರ ಇಂತಿದೆ!

ಗುರುವಾರ ಚಿನಿವಾರ ಪೇಟೆಯಲ್ಲಿ ಚಿನ್ನದ ದರದಲ್ಲಿ ಬರೊಬ್ಬರಿ 300 ರೂಗಳ ವರೆಗೂ ಏರಿಯಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಮಾಹಿತಿ ನೀಡಿದೆ.

ಮುಂಬೈ: ಹಬ್ಬಗಳ ಸರಣಿ ಮುಕ್ತಾಯದ ಬಳಿಕ ಕುಸಿದಿದ್ದ ಚಿನ್ನದ ದರ ಮತ್ತೆ ಏರಿಗತಿಯಲ್ಲಿ ಸಾಗಿದ್ದು, ಗುರುವಾರ ಹಳದಿ ಲೋಹದ ದರ ಅಲ್ಪ ಏರಿಕೆಯಾಗಿದೆ.

ಹೌದು.. ಗುರುವಾರ ಚಿನಿವಾರ ಪೇಟೆಯಲ್ಲಿ ಚಿನ್ನದ ದರದಲ್ಲಿ ಬರೊಬ್ಬರಿ 300 ರೂ ಗಳ ವರೆಗೂ ಏರಿಯಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಮಾಹಿತಿ ನೀಡಿದೆ.

ಶೇ. 99.9 ರಷ್ಟು ಶುದ್ಧತೆ ಅಂದರೆ 24 ಕ್ಯಾರಟ್ ಬಂಗಾರದ ಬೆಲೆಯಲ್ಲಿ ಪ್ರತೀ ಗ್ರಾಂಗೆ 33 ರೂ ಏರಿಕೆಯಾಗಿದೆ. ಅಂತೆಯೇ 22 ಕ್ಯಾರೆಟ್ ಚಿನ್ನದ ದರದಲ್ಲಿ 30 ರೂ ಮತ್ತು 18 ಕ್ಯಾರೆಟ್ ಚಿನ್ನದ ದರದಲ್ಲಿ 24 ರೂ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಪಟ್ಟಿ ಇಂತಿದ್ದು, 22 ಕ್ಯಾರೆಟ್ ನ ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 300 ರೂ ಏರಿಕೆಯಾಗಿ, 71,450 ರೂಗೆ ಏರಿಕೆಯಾಗಿದೆ. ಅಂತೆಯೇ 18 ಕ್ಯಾರೆಟ್ ನ ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 192 ರೂ ಏರಿಕೆಯಾಗಿ, 46,768 ರೂ ತಲುಪಿದೆ. ಅಂತೆಯೇ 24 ಕ್ಯಾರೆಟ್ ನ ಚಿನ್ನದ ದರದಲ್ಲಿ 330 ರೂ ಏರಿಕೆಯಾಗಿ 77,950 ರೂ ತಲುಪಿದೆ. ನಿನ್ನೆ ಈ ದರ 77,620 ರೂ ಗಳಷ್ಟಿತ್ತು.

ಬೆಳ್ಳಿ ದರದಲ್ಲಿ ಬದಲಾವಣೆ ಇಲ್ಲ

ಏತನ್ಮದ್ಯೆ ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ರೀತಿಯ ಬದಲಾವಣೆ ಕಂಡುಬಂದಿಲ್ಲ. ನಿನ್ನೆಯಂತೇ ಪ್ರತೀ ಕೆಜಿ ಬೆಳ್ಳಿ ದರ 92,000 ರೂ ನಷ್ಟಿದೆ ಎಂದು ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ​​ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ: ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ, Video!

ಫ್ಲೈದುಬೈ ದಾಳಿ 'ಭಯೋತ್ಪಾದಕ ಕೃತ್ಯ': ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ 'ನಿಜವಾದ ಹೀರೋ' UAE ಶ್ಲಾಘನೆ!

'ಒಂದೇ ಒಂದು ಪೋಸ್ಟ್ ಕೂಡ ಮಾಡಿಲ್ಲ: ಸ್ಮಿತ್ ಮಚ್ಚರ್ ವಿಚಾರದಲ್ಲಿ ರಾಹುಲ್ ಗಾಂಧಿಯ ಮೌನವನ್ನು ಪ್ರಶ್ನಿಸಿದ ಕಿಶನ್ ರೆಡ್ಡಿ!

ಭೂಕಬಳಿಕೆ ಆರೋಪದ ನಡುವೆ ಡಿಕೆಶಿ ಕುಟುಂಬಕ್ಕೆ ಸೇರಿದ 200 ಎಕರೆಗೂ ಹೆಚ್ಚಿನ ಭೂಮಿ ವೀಕ್ಷಿಸಿದ ಕುಮಾರಸ್ವಾಮಿ! ಹೇಳಿದ್ದೇನು?