ಬೆಂಗಳೂರು: ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ನೇಮಕಗೊಂಡಿದ್ದಾರೆ.
ದೇಶ ಅತ್ಯಂತ ವಿಶ್ವಸಾರ್ಹ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡಾ ಅಂತಾರಾಷ್ಟ್ರೀಯ ಮಟ್ಟದಲ್ಲೂ ತನ್ನ ಛಾಪು ಮೂಡಿಸಿದೆ. ಸಚಿನ್ ತೆಂಡೂಲ್ಕರನ್ನು ಬ್ಯಾಂಕ್‌ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡುವ ಮೂಲಕ ಇನ್ನಷ್ಟು ವೇಗವಾಗಿ ತನ್ನ ಬೆಳವಣಿಗೆಯನ್ನು ಕಾಣಲಿದೆ. ಈ ಮೂಲಕ ಜಗತ್ತಿನಾದ್ಯಂತ ಬ್ಯಾಂಕ್ ಆಫ್ ಬರೋಡಾ ತನ್ನ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗಿದೆ. ಸಚಿನ್ ಜೊತೆ ಈ ಒಡಂಬಡಿಕೆ ಮಾಡಿಕೊಂಡಿರುವ ಬ್ಯಾಂಕ್ ಆಫ್ ಬರೋಡಾ ಇದನ್ನು “ಪ್ಲೇ ದಿ ಮಾಸ್ಟರ್ ಸ್ಟ್ರೋಕ್” ಎಂದು ಕರೆದಿದೆ.
ಶತಮಾನಗಳ ಇತಿಹಾಸ ಹೊಂದಿರುವ ಬ್ಯಾಂಕ್ ಆಗಿ ಲಕ್ಷಾಂತರ ಜನರ ವಿಶ್ವಾಸವನ್ನು ಬ್ಯಾಂಕ್ ಆಫ್ ಬರೋಡಾ ಪಡೆದುಕೊಂಡಿದೆ.ಇದೀಗ ಸಚಿನ್ ತೆಂಡೂಲ್ಕರ್ ಅವರು ಬ್ಯಾಂಕ್‌ನ ಬ್ರಾಂಡ್ ಅಂಬಾಸಿಡರ್ ಆಗುವ ಮೂಲಕ ಬ್ಯಾಂಕ್ ಇನ್ನಷ್ಟು ಗ್ರಾಹಕರನ್ನು ಸೆಳೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ರಾಂಡ್ ಅಂಬಾಸಿಡರ್ ಆಗಿ ಸಚಿನ್ ತೆಂಡೂಲ್ಕರ್, ಹಲವು ಜಾಗೃತಿ ಕಾರ್ಯಕ್ರಮಗಳಲ್ಲಿ, ಗ್ರಾಹಕ ಮತ್ತು ಉದ್ಯೋಗಿಗಳ ಜೊತೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 17 ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಬ್ಯಾಂಕ್ ಆಫ್ ಬರೋಡಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಚಿನ್ ತೆಂಡೂಲ್ಕರ್ ಅವರಿಗೆ ಇರುವ ಕೀರ್ತಿ ಸಹಾಯವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ಸಚಿನ್ ಬ್ರ್ಯಾಂಡಿಂಗ್ ಪ್ರಚಾರಗಳು, ಗ್ರಾಹಕರ ಶಿಕ್ಷಣ ಮತ್ತು ಆರ್ಥಿಕ ಸಾಕ್ಷರತಾ ಕಾರ್ಯಕ್ರಮಗಳು ಮತ್ತು ವಂಚನೆ ತಡೆಗಟ್ಟುವಿಕೆ ಮತ್ತು ಜಾಗೃತಿ ಅಭಿಯಾನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬ್ಯಾಂಕ್ ಆಫ್ ಬರೋಡಾ 17 ದೇಶಗಳಲ್ಲಿ ತನ್ನ ಶಾಖೆಯನ್ನು ಹೊಂದಿದ್ದು, ಸಚಿನ್ ಬ್ಯಾಂಕ್ ಪ್ರಚಾರ ರಾಯಭಾರಿ ಆಗಿದ್ದರಿಂದ ಸಂಸ್ಥೆ ಹೆಚ್ಚಿನ ಎತ್ತರಕ್ಕೆ ಬೆಳೆಯಬಹುದಾಗಿದೆ.
ಮಾಸ್ಟರ್‌ಸ್ಟ್ರೋಕ್ ಖಾತೆಯನ್ನು ವಿಶೇಷವಾಗಿ ಪ್ರೀಮಿಯಂ ಸೇವೆಗಳನ್ನು ಬಯಸುವ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ಖಾತೆಯಲ್ಲಿ ತ್ರೈಮಾಸಿಕ ಸರಾಸರಿ ರೂ.10 ಲಕ್ಷವನ್ನು ಕಾಯ್ದುಕೊಂಡಲ್ಲಿ ಇವರು ಬ್ಯಾಂಕ್‌ನ ಸೇವೆಯನ್ನು ಆನಂದಿಸಬಹುದಾಗಿದೆ.
ಮಾಸ್ಟರ್‌ಸ್ಟ್ರೋಕ್ ಅಕೌಂಟ್ ಖಾತೆಯ ಮೂಲಕ ಬಾಕಿಗಳ ಮೇಲಿನ ಹೆಚ್ಚಿನ ಬಡ್ಡಿದರಗಳು, ಚಿಲ್ಲರೆ ಸಾಲಗಳ ಮೇಲಿನ ರಿಯಾಯಿತಿ ಬಡ್ಡಿದರಗಳು, BOB ವರ್ಲ್ಡ್ ಓಪ್ಯುಲೆನ್ಸ್ ವೀಸಾ ಇನ್ಫೈನೈಟ್ ಡೆಬಿಟ್ ಕಾರ್ಡ್ (ಮೆಟಲ್ ಆವೃತ್ತಿ) ಮತ್ತು ಜೀವಮಾನ-ಮುಕ್ತ ಎಟರ್ನಾ ಕ್ರೆಡಿಟ್ ಕಾರ್ಡ್ ನಂತಹ ಹತ್ತು ಹಲವು ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದೆ.