ದಾಖಲೆಯ ಏರಿಕೆ ಕಂಡ ಚಿನ್ನದ ದರ 
ವಾಣಿಜ್ಯ

ಚಿನ್ನದ ಬೆಲೆ 1,000 ರೂ ಏರಿಕೆ; ಮೊದಲ ಬಾರಿ 82 ಸಾವಿರ ರೂ ಗಡಿ ದಾಟಿದ ಬಂಗಾರ!

ಶೇ. 99.9 ರಷ್ಟು ಶುದ್ಧತೆಯ ಹಳದಿ ಲೋಹ(24 ಕ್ಯಾರಟ್ ಬಂಗಾರದ ಬೆಲೆ)ವು ದೆಹಲಿಯಲ್ಲಿ 10 ಗ್ರಾಂಗೆ 1,000 ರೂ ಹೆಚ್ಚಾಗುವ ಮೂಲಕ 82,400 ರೂ.ಗೆ ಏರಿಕೆಯಾಗಿದೆ.

ನವದೆಹಲಿ: ದೀಪಾವಳಿ ಹಬ್ಬದ ಸಮಯದಲ್ಲೇ ಚಿನ್ನದ ಬೆಲೆ ಭರ್ಜರಿ ಏರಿಕೆಯಾಗಿದ್ದು, ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಬಂಗಾರದ ಬೆಲೆಯು 10 ಗ್ರಾಂಗೆ 1 ಸಾವಿರ ರೂಪಾಯಿ ಹೆಚ್ಚಾಗಿದೆ. ಇದರೊಂದಿಗೆ ಮೊದಲ ಬಾರಿಗೆ ಬಂಗಾರದ ಬೆಲೆಯು 82,000 ರೂಪಾಯಿ ಗಡಿ ದಾಟಿದೆ.

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ​​ಪ್ರಕಾರ, ಶೇ. 99.9 ರಷ್ಟು ಶುದ್ಧತೆಯ ಹಳದಿ ಲೋಹ(24 ಕ್ಯಾರಟ್ ಬಂಗಾರದ ಬೆಲೆ)ವು ದೆಹಲಿಯಲ್ಲಿ 10 ಗ್ರಾಂಗೆ 1,000 ರೂ ಹೆಚ್ಚಾಗುವ ಮೂಲಕ 82,400 ರೂ.ಗೆ ಏರಿಕೆಯಾಗಿದೆ.

ಶೇ. 99.5 ರಷ್ಟು ಶುದ್ಧತೆಯ ಬೆಲೆಬಾಳುವ ಲೋಹವು ಸ್ಥಳೀಯ ಮಾರುಕಟ್ಟೆಗಳಲ್ಲಿ 10 ಗ್ರಾಂಗೆ 1 ಸಾವಿರ ರೂಪಾಯಿ ಹೆಚ್ಚಾಗುವ ಮೂಲಕ ಸಾರ್ವಕಾಲಿಕ ಗರಿಷ್ಠ 82,000 ರೂಪಾಯಿಗೆ ತಲುಪಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ, ಅನಿಶ್ಚಿತ ರಾಜಕೀಯ ಪರಿಸ್ಥಿತಿಯಿಂದಾಗಿ ಮತ್ತು ದೀಪಾವಳಿಯ ಸಮಯದಲ್ಲಿ ಹೆಚ್ಚುತ್ತಿರುವ ಬೇಡಿಕೆ, ಯುದ್ಧ, ಹಣದುಬ್ಬರ, ಷೇರು ಮಾರುಕಟ್ಟೆಯ ಏರಿಳಿತಗಳೂ ಚಿನ್ನದ ಬೆಲೆಯಲ್ಲಿ ತೀವ್ರ ಜಿಗಿತಕ್ಕೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

Jharkhand: ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿಯಾಗಿ, ನೇಮಕಾತಿ ಪರೀಕ್ಷೆ ವಿವಾದ ಬಗೆಹರಿಸಿ: ಸಿಎಂ ಸೊರೆನ್‌ಗೆ ರಾಹುಲ್ ಗಾಂಧಿ ಮನವಿ

ದೂರು ನೀಡಲು ಕ್ಯೂಆರ್ ಕೋಡ್ ಬಿಡುಗಡೆ; ಹೋಟೆಲ್‌ಗಳ ಅಡುಗೆ ಕೋಣೆಗೆ ಸಿಸಿಟಿವಿ ಕಡ್ಡಾಯ, ಪಿಜಿ ಗಳಿಗೆ ಪ್ರತ್ಯೇಕ ಗೈಡ್‌ಲೈನ್ಸ್‌: ಖಾದರ್ ಮಹತ್ವದ ಘೋಷಣೆ

Rahul Gandhi ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಬ್ರೇಕ್! ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಯುರೋಪ್‌ನಲ್ಲಿ ಯುದ್ಧದ ಭೀತಿ: ಉಕ್ರೇನ್‌ನಲ್ಲಿರುವ ಭಾರತದ ಬಿಲಿಯನೇರ್‌ ಉದ್ಯಮಿಯ ಕಾರ್ಖಾನೆ ಮೇಲೆ ರಷ್ಯಾ ದಾಳಿ!