ಚಿನ್ನದ ದರದಲ್ಲಿ ಏರಿಕೆ 
ವಾಣಿಜ್ಯ

Gold rate: ಸಾರ್ವಕಾಲಿಕ ದಾಖಲೆ; ಚಿನ್ನದ ಬೆಲೆ ಒಂದೇ ದಿನ 1,313 ರೂ ಹೆಚ್ಚಳ; 1 ತಿಂಗಳಲ್ಲಿ 8 ಸಾವಿರ ರೂ ಏರಿಕೆ!

ಭಾರತದಲ್ಲಿ ಚಿನ್ನದ ದರ ಮತ್ತೆ ಗಗನಕ್ಕೇರಿದ್ದು, ಇಂದು ಒಂದೇ ದಿನ ಚಿನ್ನದ ದರದಲ್ಲಿ ಬರೊಬ್ಬರಿ 1, 313 ರೂ ಹೆಚ್ಚಳವಾಗಿದೆ.

ಮುಂಬೈ: ಭಾರತೀಯರ ನೆಚ್ಚಿನ ಬಂಗಾರದ ಬೆಲೆ ಮತ್ತೆ ಗಗನಕ್ಕೇರಿದ್ದು, ಇಂದು ಒಂದೇ ದಿನ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಮಟ್ಟ ತಲುಪಿದೆ.

ಹೌದು.. ಭಾರತದಲ್ಲಿ ಚಿನ್ನದ ದರ ಮತ್ತೆ ಗಗನಕ್ಕೇರಿದ್ದು, ಇಂದು ಒಂದೇ ದಿನ ಚಿನ್ನದ ದರದಲ್ಲಿ ಬರೊಬ್ಬರಿ 1, 313 ರೂ ಹೆಚ್ಚಳವಾಗಿದೆ. ನಿನ್ನೆ 10 ಗ್ರಾಂ ಚಿನ್ನದ ಬೆಲೆ 83, 010ರೂ ಇದ್ದ ಚಿನ್ನದ ದರ ಇಂದು ಏಕಾಏಕಿ 84 ಸಾವಿರ ಗಡಿ ದಾಟಿದೆ. ಇಂದು ಒಂದೇ ದಿನ 1, 313 ರೂ ಹೆಚ್ಚಳವಾಗಿ 10 ಗ್ರಾಂ ಚಿನ್ನದ ದರ ಬರೊಬ್ಬರಿ 84, 313 ರೂಗೆ ಏರಿಕೆಯಾಗಿದೆ.

1 ತಿಂಗಳಲ್ಲಿ 8 ಸಾವಿರ ರೂ ಏರಿಕೆ!

ಇನ್ನು ಕಳೆದ ಒಂದು ತಿಂಗಳಲ್ಲಿ ಚಿನ್ನದ ದರದಲ್ಲಿ ಬರೊಬ್ಬರಿ 8 ಸಾವಿರ ರೂ ಏರಿಕೆಯಾಗಿದೆ. ಕಳೆದ 36 ದಿನಗಳಲ್ಲಿ ಚಿನ್ನದ ದರ 8, 161ರೂಗಳಷ್ಚು ಏರಿಕೆಯಾಗಿದೆ.

ಬಜೆಟ್ ಬಳಿಕದ ನಿರೀಕ್ಷೆ ಕೂಡ ಹುಸಿಯಾಯ್ತು

ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Central financial Minister Nirmala Sitharaman) ಮಂಡಿಸಿದ 2024-25ರ ಬಜೆಟ್ ನಂತರ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 15 ರಿಂದ ಶೇಕಡಾ 6ಕ್ಕೆ ಇಳಿಸಲಾಗಿತ್ತು. ಇದರಿಂದಾಗಿ ಮುಂಬರುವ ತಿಂಗಳುಗಳಲ್ಲಿ ಚಿನ್ನದ ಬೆಲೆ ಇಳಿಯುವ ಸಾಧ್ಯತೆ ಇತ್ತು. ಆದರೆ ತಕ್ಷಣದ ಪರಿಣಾಮವಾಗಿ, ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ, ಇದು ಆಭರಣ ಪ್ರಿಯರನ್ನು ನಿರಾಸೆಗೊಳಿಸಿದೆ.

ಇಂದಿನ ದರ ಪಟ್ಟಿ ಇಂತಿದೆ

ಸದ್ಯ ಭಾರತದಲ್ಲಿ (in India) 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 78,100 ಆಗಿದ್ದು, 24 ಕ್ಯಾರೆಟ್ ಅಪರಂಜಿ ಚಿನ್ನದ ದರ 85,200 ರೂ ಆಗಿದೆ. 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ದರ 7,810ರೂಗೆ ಏರಿಕೆಯಾಗಿದ್ದು, 10 ಗ್ರಾಂ ದರ 78,100 ರೂಗಳಾಗಿದೆ. ಅಂತೆಯೇ 24 ಕ್ಯಾರೆಟ್ ನ 1 ಗ್ರಾಂ ಅಪರಂಜಿ ಚಿನ್ನದ ದರ 8,520ರೂಗೆ ಏರಿಕೆಯಾಗಿದ್ದು, 10 ಗ್ರಾಂ ದರ 85,200 ರೂಗಳಾಗಿದೆ. ಅಂತೆಯೇ 18 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 63,900 ರೂಗೆ ಏರಿಕೆಯಾಗಿದೆ.

ಬೆಳ್ಳಿ ದರ ಇಳಿಕೆ

ಇನ್ನು ಚಿನ್ನದ ದರ ಗಗನದತ್ತ ಮುಖ ಮಾಡಿದ್ದರೂ ಬೆಳ್ಳಿ ದರದಲ್ಲಿ ಮಾತ್ರ ಕೊಂಚ ಇಳಿಕೆಯಾಗಿದೆ. ಪ್ರಸ್ತುತ ಒಂದು ಕಿಲೋಗ್ರಾಂ ಬೆಳ್ಳಿಯ ದರ 98,500 ಆಗಿದ್ದು, ಒಟ್ಟಾರೆಯಾಗಿ 1,000 ಇಳಿಕೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT