ನವದೆಹಲಿ: ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರಿಂದ ಬೇಡಿಕೆ ಕುಸಿತ ಕಂಡಿದ್ದರಿಂದ ಇಲ್ಲಿನ ಚಿನಿವಾರಪೇಟೆಯಲ್ಲಿ ಗುರುವಾರ ಚಿನ್ನದ ಬೆಲೆಯು ಭಾರಿ ಇಳಿಕೆ ಕಂಡಿದೆ.
ಸದ್ಯ ಚಿನ್ನದ ಬೆಲೆ 10 ಗ್ರಾಂಗೆ 222 ರೂ.ಗಳಷ್ಟು ಕಡಿಮೆಯಾಗಿದ್ದು, 84,345 ರೂ.ಗೆ ಮಾರಾಟವಾಗಿದೆ.
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಗುರುವಾರ ಚಿನ್ನದ ಬೆಳೆಯಲ್ಲಿ ಇಳಿಕೆಯಾಗಿದೆ. 10 ಗ್ರಾಂಗೆ 222 ರೂ. ಅಥವಾ ಶೇ 0.26 ರಷ್ಟು ಕಡಿಮೆಯಾಗಿದ್ದು, 84,345 ರೂ.ಗೆ ಮಾರಾಟವಾಗಿದೆ. ಈ ಅವಧಿಯಲ್ಲಿ ಒಟ್ಟು 17,761 ಕೆಜಿ ಚಿನ್ನ ಮಾರಾಟವಾಗಿದೆ.
ದುರ್ಬಲ ಜಾಗತಿಕ ಸೂಚ್ಯಂಕಗಳು ಚಿನ್ನದ ಬೆಲೆ ಕುಸಿತಕ್ಕೆ ಕಾರಣವೆಂದು ವಿಶ್ಲೇಷಕರು ಹೇಳಿದ್ದಾರೆ. ಜಾಗತಿಕವಾಗಿ, ನ್ಯೂಯಾರ್ಕ್‌ನಲ್ಲಿ ಪ್ರತಿ ಔನ್ಸ್‌ಗೆ ಚಿನ್ನ ಶೇ 0.58 ರಷ್ಟು ಕಡಿಮೆಯಾಗಿ 2,850.51 ಡಾಲರ್‌ಗೆ ತಲುಪಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 7,930 ರೂಪಾಯಿಗೆ ಮಾರಾಟವಾಗುತ್ತಿದೆ. 24 ಕ್ಯಾರೆಟ್‌ನ ಅಪರಂಜಿ ಚಿನ್ನದ ಬೆಲೆ 8,651 ರೂಪಾಯಿ ಇದೆ. 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 6,488 ರೂಪಾಯಿ ಇದೆ.
ಬೆಳ್ಳಿ ಬೆಲೆಯಲ್ಲೂ ಇಳಿಕೆ
ಗುರುವಾರ ಪ್ರತಿ ಕಿಲೋಗ್ರಾಂ ಬೆಳ್ಳಿಗೆ 1,125 ರೂ. ಕಡಿಮೆಯಾಗಿದ್ದು, 94,840 ರೂ.ಗೆ ಮಾರಾಟವಾಗಿದೆ.