ಮೇಕ್‌ಮೈಟ್ರಿಪ್ ಈಕ್ವಿಟಿ ಮತ್ತು ಬಾಂಡ್ ಕೊಡುಗೆಗಳ ಮೂಲಕ $3.1 ಬಿಲಿಯನ್ ಸಂಗ್ರಹಿಸಿದೆ. ಇದು ಏಷ್ಯಾ-ಪೆಸಿಫಿಕ್ ಪ್ರದೇಶಗಳು 2022 ರಿಂದ ಈಕ್ವಿಟಿ ಫಾಲೋ-ಆನ್ ಮತ್ತು ಕನ್ವರ್ಟಿಬಲ್ ನೋಟ್‌ಗಳ ಅತಿದೊಡ್ಡ ಏಕಕಾಲಿಕ ಸಂಗ್ರಹಣೆಯಾಗಿದೆ ಎಂದು ಮಾರ್ಗನ್ ಸ್ಟಾನ್ಲಿಯ ಹೂಡಿಕೆ ಬ್ಯಾಂಕಿಂಗ್ ಮುಖ್ಯಸ್ಥ ಕಮಲ್ ಯಾದವ್ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಜೂ.17 ರಂದು ವಹಿವಾಟು ಅಂತ್ಯದ ಬಳಿಕ ಮೇಕ್ ಮೈ ಟ್ರಿಪ್ ಏಕಕಾಲಿಕ ನೋಂದಾಯಿತ ಪ್ರಾಥಮಿಕ ಇಕ್ವಿಟಿ ಫಾಲೋ-ಆನ್ ಮತ್ತು 144A ಕನ್ವರ್ಟಿಬಲ್ ಬಾಂಡ್ (ಪೋಸ್ಟ್-ಶೂ) ಬೆಲೆ $3.1 ಬಿಲಿಯನ್ ಆಗಿದೆ.
18,400,000 ಸಾಮಾನ್ಯ ಇಕ್ವಿಟಿ ಷೇರುಗಳ ಪ್ರಾಥಮಿಕ ಇಕ್ವಿಟಿ ಫಾಲೋ-ಆನ್ ಆಫರಿಂಗ್ ನ್ನು ಪ್ರತಿ ಷೇರಿಗೆ $90ಗೆ ಬೆಲೆ ನಿಗದಿಪಡಿಸಲಾಗಿದೆ' ಎಂದು ಯಾದವ್ ಹೇಳಿದ್ದಾರೆ.
ನಿಧಿಸಂಗ್ರಹದಿಂದ ಬರುವ ಆದಾಯವನ್ನು ಟ್ರಿಪ್.ಕಾಮ್ ಗ್ರೂಪ್ ಲಿಮಿಟೆಡ್ ಹೊಂದಿರುವ ಪಾಲನ್ನು ಮರಳಿ ಖರೀದಿಸಲು ಬಳಸಲಿದೆ, ಈ ಪ್ರಕ್ರಿಯೆ ಯಶಸ್ವಿಯಾದಲ್ಲಿ, ಮೇಕ್ ಮೈ ಟ್ರಿಪ್ ಗ್ರೂಪ್ ನಲ್ಲಿ ಚೀನೀ ಕಂಪನಿಗಳ ಪಾಲನ್ನು ಪ್ರಸ್ತುತ ಇರುವ 45.34 ಪ್ರತಿಶತದಿಂದ 20 ಪ್ರತಿಶತಕ್ಕಿಂತ ಕಡಿಮೆ ಮಾಡುತ್ತದೆ.