ಗೋಲಿ ಸೋಡಾ 
ವಾಣಿಜ್ಯ

ಅಮೆರಿಕ, ಯುರೋಪ್, ಗಲ್ಫ್ ದೇಶಗಳಲ್ಲಿ ಭಾರತದ Goli Soda ಗೆ ಭಾರಿ ಬೇಡಿಕೆ!

ಗೋಲಿ ಸೋಡಾವನ್ನು ಗಲ್ಫ್ ಪ್ರದೇಶದ ಅತಿದೊಡ್ಡ ಚಿಲ್ಲರೆ ಸರಪಳಿಗಳಲ್ಲಿ ಒಂದಾದ ಲುಲು ಹೈಪರ್‌ಮಾರ್ಕೆಟ್‌ಗೆ ಸ್ಥಿರವಾದ ವಿತರಣೆಯನ್ನು ಖಚಿತಪಡಿಸಿದೆ...

ನವದೆಹಲಿ: ಭಾರತದ ಸಾಂಪ್ರದಾಯಿಕ ಪಾನೀಯ ಗೋಲಿ ಸೋಡಾ (Goli Soda)ಗೆ ಜಗತ್ತಿನ ವಿವಿಧ ದೇಶಗಳಲ್ಲಿ ಭಾರಿ ಬೇಡಿಕೆ ಎದುರಾಗಿದ್ದು, ಪ್ರಮುಖ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಲವಾದ ಗ್ರಾಹಕ ಪ್ರತಿಕ್ರಿಯೆಯನ್ನು ಕಾಣುತ್ತಿದೆ ಎನ್ನಲಾಗಿದೆ.

ಅಮೆರಿಕ, ಬ್ರಿಟನ್, ಯುರೋಪ್ ಮತ್ತು ಗಲ್ಫ್ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಭಾರತ ಗೋಲಿ ಸೋಡಾ ಪಾನೀಯಕ್ಕೆ ವ್ಯಾಪಕ ಬೇಡಿಕೆ ಇದ್ದು, ಇದಕ್ಕೆ ಕಾರ್ಯತಂತ್ರದ ವಿಸ್ತರಣೆ ಮತ್ತು ನವೀನ ಮರುಶೋಧನೆ ಕಾರಣ ಎಂದು ಭಾನುವಾರ ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.

ಫೇರ್ ಎಕ್ಸ್‌ಪೋರ್ಟ್ಸ್‌ನೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆಯಡಿಯಲ್ಲಿ, ಭಾರತವು ಗೋಲಿ ಪಾಪ್ ಸೋಡಾ ಎಂದು ಮರುನಾಮಕರಣಗೊಂಡ ಗೋಲಿ ಸೋಡಾವನ್ನು ಗಲ್ಫ್ ಪ್ರದೇಶದ ಅತಿದೊಡ್ಡ ಚಿಲ್ಲರೆ ಸರಪಳಿಗಳಲ್ಲಿ ಒಂದಾದ ಲುಲು ಹೈಪರ್‌ಮಾರ್ಕೆಟ್‌ಗೆ ಸ್ಥಿರವಾದ ವಿತರಣೆಯನ್ನು ಖಚಿತಪಡಿಸಿದೆ ಎಂದು ವಾಣಿಜ್ಯ ಸಚಿವಾಲಯದ ಅಂಗವಾದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ತಿಳಿಸಿದೆ.

"ಒಂದು ಕಾಲದಲ್ಲಿ ಮನೆಯ ಪ್ರಮುಖ ಪಾನೀಯವಾಗಿದ್ದ ಈ ಐಕಾನಿಕ್ ಪಾನೀಯವು ಅದರ ನವೀನ ಮರುಶೋಧನೆ ಮತ್ತು ಕಾರ್ಯತಂತ್ರದ ಅಂತರರಾಷ್ಟ್ರೀಯ ವಿಸ್ತರಣೆಯಿಂದ ಜಾಗತಿಕ ವೇದಿಕೆಯಲ್ಲಿ ಗಮನಾರ್ಹ ಪುನರಾಗಮನವನ್ನು ಮಾಡುತ್ತಿದೆ" ಎಂದು ಅದು ಹೇಳಿದೆ. ಅಂತೆಯೇ ಉತ್ಪನ್ನವು ಈಗಾಗಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಬಲವಾದ ಪ್ರವೇಶವನ್ನು ಮಾಡಿದೆ. ಪ್ರಮುಖವಾಗಿ ಅಮೆರಿಕ, ಬ್ರಿಟನ್, ಯುರೋಪ್ ಮತ್ತು ಗಲ್ಫ್ ದೇಶಗಳಿಗೆ ಯಶಸ್ವಿ ಪ್ರಾಯೋಗಿಕ ಸಾಗಣೆಗಳಲ್ಲಿ ಗೋಲಿಸೋಡಾ ಪಾನೀಯವನ್ನು ರವಾನೆ ಮಾಡಲಾಗಿದೆ.

ಮಾರುಕಟ್ಟೆಯಿಂದ ಕಣ್ಮರೆಯಾಗಿದ್ದ ದೇಶದ ಸಾಂಪ್ರದಾಯಿಕ ಪಾನೀಯ

ಇನ್ನು ಪೆಪ್ಸೆ, ಕೋಕೋ ಕೋಲಾ ದಂತಹ ಬಹುರಾಷ್ಟ್ರೀಯ ಪಾನೀಯ ಕಂಪನಿಗಳ ಪ್ರಾಬಲ್ಯದಿಂದಾಗಿ ಈ ಪಾನೀಯ ಬಹುತೇಕ ಕಣ್ಮರೆಯಾಗಿತ್ತು. ಆದರೆ ಇದೀಗ ಈ ಪಾನೀಯದ ಪುನರುಜ್ಜೀವನವು, ಜಾಗತಿಕ ಮಾರುಕಟ್ಟೆಗಳಲ್ಲಿ ಅಧಿಕೃತ, ಸ್ವದೇಶಿ ಆಹಾರ ಮತ್ತು ಪಾನೀಯ ಉತ್ಪನ್ನಗಳನ್ನು ಉತ್ತೇಜಿಸುವ ಮತ್ತು ರಫ್ತು ಮಾಡುವ ಭಾರತದ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ ಎಂದು ಅದು ಹೇಳಿದೆ.

"ಗೋಲಿ ಪಾಪ್ ಸೋಡಾವನ್ನು ಪ್ರತ್ಯೇಕಿಸುವುದು ಅದರ ನವೀನ ಪ್ಯಾಕೇಜಿಂಗ್ ಆಗಿದೆ. ಇದು ಭಾರತೀಯ ಗ್ರಾಹಕರು ಪ್ರೀತಿಯಿಂದ ನೆನಪಿಸಿಕೊಳ್ಳುವ ನಾಸ್ಟಾಲ್ಜಿಕ್ ಫಿಜಿ ಬರ್ಸ್ಟ್ ಅನ್ನು ಮರುಸೃಷ್ಟಿಸುವ ವಿಶಿಷ್ಟ ಪಾಪ್ ಓಪನರ್ ಅನ್ನು ಒಳಗೊಂಡಿದೆ. ಈ ಮರು ಬ್ರಾಂಡಿಂಗ್ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಆಕರ್ಷಿಸಿದೆ. ಪಾನೀಯವನ್ನು ಅತ್ಯಾಕರ್ಷಕ ಮತ್ತು ಟ್ರೆಂಡಿ ಉತ್ಪನ್ನವಾಗಿ ಇರಿಸಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಉತ್ಪನ್ನದ ಬೇಡಿಕೆಯು ಸ್ವದೇಶಿ ಭಾರತೀಯ ಸುವಾಸನೆಗಳು ಅಂತರರಾಷ್ಟ್ರೀಯ ದೈತ್ಯರೊಂದಿಗೆ ಸ್ಪರ್ಧಿಸಬಹುದು ಎಂಬುದನ್ನು ಸಾಬೀತುಪಡಿಸುತ್ತದೆ ಮತ್ತು ದೇಶೀಯ ರಫ್ತುಗಳಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ಅದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT