ವಾಣಿಜ್ಯ

India-Pak ಕದನ ವಿರಾಮ: ಒಂದೇ ದಿನದಲ್ಲಿ 16 ಲಕ್ಷ ಕೋಟಿ ರೂ ಗಳಿಕೆ; ಇತಿಹಾಸ ಸೃಷ್ಟಿಸಿದ ಭಾರತೀಯ ಷೇರು ಮಾರುಕಟ್ಟೆ!

ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಇತಿಹಾಸ ಸೃಷ್ಟಿಸಿದೆ. 2021ರ ಫೆಬ್ರವರಿ ನಂತರ ಒಂದೇ ದಿನದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಅತಿದೊಡ್ಡ ಏರಿಕೆಯನ್ನು ದಾಖಲಿಸಿವೆ. ಎರಡೂ ಪ್ರಮುಖ ಸೂಚ್ಯಂಕಗಳು ಸುಮಾರು 4 ಪ್ರತಿಶತದಷ್ಟು ಜಿಗಿತವನ್ನು ಕಂಡಿದೆ.

ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಇತಿಹಾಸ ಸೃಷ್ಟಿಸಿದೆ. 2021ರ ಫೆಬ್ರವರಿ ನಂತರ ಒಂದೇ ದಿನದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಅತಿದೊಡ್ಡ ಏರಿಕೆಯನ್ನು ದಾಖಲಿಸಿವೆ. ಎರಡೂ ಪ್ರಮುಖ ಸೂಚ್ಯಂಕಗಳು ಸುಮಾರು 4 ಪ್ರತಿಶತದಷ್ಟು ಜಿಗಿತವನ್ನು ಕಂಡಿದ್ದು ಈ ಏರಿಕೆಯಿಂದಾಗಿ ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತು ದಾಖಲೆಯ 16 ಲಕ್ಷ ಕೋಟಿ ರೂ.ಗಳಷ್ಟು ಏರಿಕೆಯಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದ, ಅಮೆರಿಕ-ಚೀನಾ ವ್ಯಾಪಾರ ಮಾತುಕತೆಯಲ್ಲಿ ಪ್ರಗತಿ ಮತ್ತು ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಭಾವ್ಯ ಒಪ್ಪಂದದ ಸುದ್ದಿಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕತೆಯನ್ನು ತಂದಿವೆ. ಈ ಬೆಳವಣಿಗೆಗಳು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳನ್ನು ಕಡಿಮೆ ಮಾಡಿ ಹೂಡಿಕೆದಾರರ ವಿಶ್ವಾಸವನ್ನು ಪುನರುಜ್ಜೀವನಗೊಳಿಸಿವೆ.

ಸೆನ್ಸೆಕ್ಸ್-ನಿಫ್ಟಿ 'ಒಂದು ದಿನದ ಅತ್ಯುತ್ತಮ ಪ್ರದರ್ಶನ' ನೀಡಿದೆ. ಸೆನ್ಸೆಕ್ಸ್ 2,975 ಅಂಕಗಳ ಏರಿಕೆಯೊಂದಿಗೆ 82,430ಕ್ಕೆ ಮುಕ್ತಾಯವಾಯಿತು.

ನಿಫ್ಟಿ 917 ಅಂಕಗಳ ಜಿಗಿತವನ್ನು ಸಾಧಿಸಿ 24,925ಕ್ಕೆ ತಲುಪಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಶೇಕಡಾವಾರು ಲೆಕ್ಕದಲ್ಲಿ ಇದು ಎರಡನೇ ಅತಿದೊಡ್ಡ ಲಾಭವಾಗಿದೆ. ಇದಕ್ಕೂ ಮೊದಲು 2021ರ ಫೆಬ್ರವರಿ 1ರಂದು ಎರಡೂ ಸೂಚ್ಯಂಕಗಳು ಶೇಕಡಾ 4.7ಕ್ಕಿಂತ ಹೆಚ್ಚಿನ ಏರಿಕೆಯನ್ನು ದಾಖಲಿಸಿದ್ದವು.

ಎಲ್ಲಾ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಮುಚ್ಚಲ್ಪಟ್ಟವು. ನಿಫ್ಟಿ ಐಟಿ ಮತ್ತು ರಿಯಾಲ್ಟಿ ಸೂಚ್ಯಂಕಗಳು ಕ್ರಮವಾಗಿ ಶೇ. 6 ಮತ್ತು ಶೇ. 7ರಷ್ಟು ಏರಿಕೆ ಕಂಡಿವೆ. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಷೇರುಗಳು ಶೇ. 4.1 ರಷ್ಟು ಲಾಭದೊಂದಿಗೆ ಮಾರುಕಟ್ಟೆಯನ್ನು ಮತ್ತಷ್ಟು ಬಲಪಡಿಸಿವೆ. ಆರಂಭಿಕ ಕುಸಿತದ ನಂತರ ಫಾರ್ಮಾ ಸೂಚ್ಯಂಕವು ಶೇಕಡಾ 0.15ರಷ್ಟು ಅಲ್ಪ ಲಾಭದೊಂದಿಗೆ ಮುಕ್ತಾಯಗೊಂಡಿತು.

ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು ರೂ. 416.52 ಲಕ್ಷ ಕೋಟಿಗಳಿಂದ ರೂ. 432.47 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅಂದರೆ ಕೇವಲ ಒಂದು ದಿನದಲ್ಲಿ 16 ಲಕ್ಷ ಕೋಟಿ ರೂ.ಗಳ ಹೆಚ್ಚಳವಾಗಿದೆ.

"ಐಟಿ, ರಿಯಾಲ್ಟಿ ಮತ್ತು ಲೋಹ ವಲಯಗಳು ಹೆಚ್ಚಿನ ಕೊಡುಗೆ ನೀಡಿವೆ. ಇದರೊಂದಿಗೆ, ವಿಶಾಲ ಮಾರುಕಟ್ಟೆಗಳು ಸಹ ಬಲವನ್ನು ತೋರಿಸಿವೆ ಎಂದು ರೆಲಿಗೇರ್ ಬ್ರೋಕಿಂಗ್‌ನ ಹಿರಿಯ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ. ತಾಂತ್ರಿಕವಾಗಿ ಈ ಏರಿಕೆ ಮಾರುಕಟ್ಟೆಯಲ್ಲಿ ಮುಂಬರುವ ಬುಲಿಶ್ ಪ್ರವೃತ್ತಿಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. ನಿಫ್ಟಿ 24,857 ರ ಸ್ವಿಂಗ್ ಗರಿಷ್ಠ ಮಟ್ಟವನ್ನು ದಾಟಿದೆ. ಈಗ ಅದು 25,200 ಕಡೆಗೆ ಚಲಿಸಬಹುದು ಎಂದು ವಿಶ್ಲೇಷಕರು ನಂಬಿದ್ದಾರೆ. ಕುಸಿತದ ಸಂದರ್ಭದಲ್ಲಿ, 24,400 ಮತ್ತು 24,600 ರ ನಡುವೆ ಬಲವಾದ ಬೆಂಬಲ ಕಂಡುಬರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Cash for query: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ; ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಲೋಕಪಾಲ ಅನುಮತಿ!

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶಾಲಾ ಶಿಕ್ಷಕ, BJP ನಾಯಕ ಪದ್ಮರಾಜನ್ ಗೆ ಸಾಯೋವರೆಗೂ ಜೈಲು!

ಬಿಹಾರದಲ್ಲಿ ಟೈಗರ್‌ ಅಬಿ ಜಿಂದಾ ಹೈ (ನೇರ ನೋಟ)

ನೌಗಮ್ ಠಾಣಾ ಸ್ಫೋಟ: ರಸಾಯನಶಾಸ್ತ್ರ ಮತ್ತು ನಿರ್ಲಕ್ಷ್ಯಗಳ ದುರಂತ ಸಂಗಮ

ಬಿಜೆಪಿಗೆ ಬಿಸಿ ತುಪ್ಪವಾದ ಚಿರಾಗ್ ಪಾಸ್ವಾನ್: ನಿತೀಶ್ ಅವರೇ ನಮ್ಮ ಸಿಎಂ; ನೂತನ ಸರ್ಕಾರ ಸೇರುತ್ತೇವೆ ಎಂದ ಕೇಂದ್ರ ಸಚಿವ! Video

SCROLL FOR NEXT