ಹೊಸ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕ್ 
ವಾಣಿಜ್ಯ

ಇನ್ನುಮುಂದೆ ಫ್ಲಿಪ್‌ಕಾರ್ಟ್‌ನಲ್ಲೂ ಸಿಗುತ್ತೆ ರಾಯಲ್ ಎನ್‌ಫೀಲ್ಡ್ 350 ಸಿಸಿ ಬೈಕ್‌!

ರಾಯಲ್ ಎನ್‌ಫೀಲ್ಡ್, ತನ್ನ 350 ಸಿಸಿಯ ಎಲ್ಲಾ ಮಾದರಿಯ ಬೈಕ್ ಗಳನ್ನು ಮಾರಾಟ ಮಾಡಲು ಇ-ಕಾಮರ್ಸ್ ಮಾರುಕಟ್ಟೆಯಾದ ಫ್ಲಿಪ್‌ಕಾರ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದೆ.

ಮುಂಬೈ: ವಾಲ್‌ಮಾರ್ಟ್ ಮಾಲೀಕತ್ವದ ಇ–ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌ ಇಂಡಿಯಾ, ರಾಯಲ್ ಎನ್‌ಫೀಲ್ಡ್ ಪ್ರಿಯರಿಗೆ ಶುಕ್ರವಾರ ಸಿಹಿ ಸುದ್ದಿ ನೀಡಿದ್ದು, ಇನ್ನುಮುಂದೆ ರಾಯಲ್ ಎನ್‌ಫೀಲ್ಡ್ 350 ಸಿಸಿ ಬೈಕ್‌ ಅನ್ನು ಫ್ಲಿಪ್‌ಕಾರ್ಟ್‌ನಲ್ಲೂ ಖರೀದಿಸಬಹುದು ಎಂದು ಹೇಳಿದೆ.

ರಾಯಲ್ ಎನ್‌ಫೀಲ್ಡ್, ತನ್ನ 350 ಸಿಸಿಯ ಎಲ್ಲಾ ಮಾದರಿಯ ಬೈಕ್ ಗಳನ್ನು ಮಾರಾಟ ಮಾಡಲು ಇ-ಕಾಮರ್ಸ್ ಮಾರುಕಟ್ಟೆಯಾದ ಫ್ಲಿಪ್‌ಕಾರ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದೆ.

ರಾಯಲ್ ಎನ್‌ಫೀಲ್ಡ್ ಕಂಪನಿಯ 350 ಸಿಸಿ ಶ್ರೇಣಿ - ಬುಲೆಟ್ 350, ಕ್ಲಾಸಿಕ್ 350, ಹಂಟರ್ 350, ಗೋವಾನ್ ಕ್ಲಾಸಿಕ್ 350 ಮತ್ತು ಹೊಸ ಮೀಟಿಯರ್ 350 ಅನ್ನು ಸೆಪ್ಟೆಂಬರ್ 22 ರಿಂದ ಬೆಂಗಳೂರು, ಗುರುಗ್ರಾಮ್, ಕೋಲ್ಕತ್ತಾ, ಲಖನೌ ಮತ್ತು ಮುಂಬೈ ಈ ಐದು ನಗರಗಳಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ನಗರಗಳಲ್ಲಿ ತಮ್ಮ ಆದ್ಯತೆಯ ರಾಯಲ್ ಎನ್‌ಫೀಲ್ಡ್ ಅಧಿಕೃತ ಡೀಲರ್ ಗಳು, ಗ್ರಾಹಕರಿಗೆ ಬೈಕ್ ಗಳನ್ನು ಪೂರೈಸುತ್ತಾರೆ ಎಂದು ಕಂಪನಿ ಹೇಳಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ತಮ್ಮ ನೆಚ್ಚಿನ ರಾಯಲ್ ಎನ್‌ಫೀಲ್ಡ್ 350 ಸಿಸಿ ಮೋಟಾರ್‌ಸೈಕಲ್ ಅನ್ನು ಖರೀದಿಸಲು ಆಯ್ಕೆ ಮಾಡುವ ಗ್ರಾಹಕರು ಸೆಪ್ಟೆಂಬರ್ 22, 2025 ರಿಂದ ಅನ್ವಯವಾಗುವಂತೆ ಸಂಪೂರ್ಣ ಜಿಎಸ್‌ಟಿ ಪ್ರಯೋಜನ ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಾತಿ ಗಣತಿ ಮುಂದೂಡಿಕೆ ಇಲ್ಲ: ಸಿಎಂ ಸಿದ್ದರಾಮಯ್ಯ

ಮತಗಳ್ಳತನ: ಚುನಾವಣಾ ಆಯೋಗ ಸಹ 'ಸುಳ್ಳು' ಹೇಳುತ್ತಿದೆ, ಬಿಜೆಪಿಯೊಂದಿಗೆ ಒಪ್ಪಂದ- ಕಾಂಗ್ರೆಸ್

Asia Cup 2025: ಭಾರತಕ್ಕೆ ಐತಿಹಾಸಿಕ ಪಂದ್ಯ; ಈ ಸಾಧನೆ ಮಾಡಿದ 2ನೇ ತಂಡ!

ಯುದ್ಧವನ್ನು ತ್ವರಿತವಾಗಿ ಕೊನೆಗೊಳಿಸುವ ಬಗ್ಗೆ ಜಗತ್ತು ಭಾರತದಿಂದ ಕಲಿಯಬೇಕು: IAF ಮುಖ್ಯಸ್ಥ

ಟಿಕ್‌ಟಾಕ್, ಅಮೆರಿಕ-ಚೀನಾ ವ್ಯಾಪಾರದ ಕುರಿತು ಟ್ರಂಪ್-ಕ್ಸಿ ಮಾತುಕತೆ

SCROLL FOR NEXT