ರಾಂಗ್ ನಂಬರ್‌‌ಗೆ ಹಣ ಕಳಿಸಿದ್ದೀರಾ? Online Desk
ವಾಣಿಜ್ಯ

ಅಯ್ಯೋ, ರಾಂಗ್ ನಂಬರ್‌‌ಗೆ UPI ಮೂಲಕ ಹಣ ಕಳಿಸಿದ್ದೀರಾ? ಈ ಕೆಲಸ ಮಾಡಿ ಹಣ ವಾಪಸ್ ಪಡೆಯಿರಿ!

UPI ಮೂಲಕ ಹಣ ಕಳುಹಿಸುವಾಗ ಒಂದು ಸಣ್ಣ ನಂಬರ್ ತಪ್ಪಿದರೂ ನಿಮ್ಮ ಒಂದು ತಿಂಗಳ ಸಂಬಳವೇ ಬೇರೆಯವರ ಖಾತೆಗೆ ಹೋಗಿಬಿಡಬಹುದು. ಆದರೆ ಹಣ ತಪ್ಪಾಗಿ ರಾಂಗ್ ನಂಬರ್‌‌ಗೆ ಹೋದ ತಕ್ಷಣ ಸುಮ್ಮನೆ ಕೂರಬೇಡಿ. ಯಾಕಂದ್ರೆ,ನಿಯಮಗಳ ಪ್ರಕಾರ ತಪ್ಪಾಗಿ ವರ್ಗಾವಣೆಯಾದ ಹಣವನ್ನು ಮರಳಿ ಪಡೆಯಲು ನಿಮಗೆ ಪೂರ್ತಿ ಹಕ್ಕಿದೆ

Wrong UPI transaction: PhonePe, Google Pay ಅಥವಾ Paytm ನಲ್ಲಿ ಹಣ ಕಳುಹಿಸುವಾಗ ಒಂದು ಸಣ್ಣ ನಂಬರ್ ತಪ್ಪಿದರೂ ನಿಮ್ಮ ಒಂದು ತಿಂಗಳ ಸಂಬಳವೇ ಬೇರೆಯವರ ಖಾತೆಗೆ ಹೋಗಿಬಿಡಬಹುದು. ಆತುರದಲ್ಲಿ ಹೆಸರು ನೋಡದೆ Pay ಬಟನ್ ಒತ್ತಿದ ನಂತರವೇ ಅಯ್ಯೋ, ತಪ್ಪಾಗಿ ಹೋಗಿಬಿಡ್ತಲ್ಲಾ ಅಂತ ಗಾಬರಿಯಾಗೋದು ಸಹಜ. ಆದರೆ ಇಲ್ಲೇ ಒಂದು ಗುಡ್ ನ್ಯೂಸ್ ಇದೆ.

ಹೌದು, ಹಣ ತಪ್ಪಾಗಿ ರಾಂಗ್ ನಂಬರ್‌‌ಗೆ ಹೋದ ತಕ್ಷಣ ನಿಮ್ಮ ಖಾತೆಯಿಂದ ಹಣ ಕಟ್ ಆಗಿ ಹೋಯಿತು ಎಂದುಕೊಂಡು ಸುಮ್ಮನೆ ಕೂರಬೇಡಿ. ಯಾಕಂದ್ರೆ, RBI ಮತ್ತು NPCI ನಿಯಮಗಳ ಪ್ರಕಾರ ತಪ್ಪಾಗಿ ವರ್ಗಾವಣೆಯಾದ ಹಣವನ್ನು ಮರಳಿ ಪಡೆಯಲು ನಿಮಗೆ ಪೂರ್ತಿ ಹಕ್ಕಿದೆ. ಹಾಗಾದರೆ ಹಣ ಹೋದ 24 ಗಂಟೆಯೊಳಗೆ ನೀವು ಮಾಡಬೇಕಾದ ಮೊದಲ ಕೆಲಸ ಏನು? ಆ ಕುರಿತ ವರದಿ ಇಲ್ಲಿದೆ:

ತಪ್ಪಾಗಿ UPI ಮಾಡಿದ ತಕ್ಷಣ ಏನು ಮಾಡಬೇಕು?

  • ಸ್ಟೆಪ್ 1 - ಆ್ಯಪ್ ನಲ್ಲಿ ದೂರು ದಾಖಲಿಸಿ

    ತಕ್ಷಣವೇ ನೀವು ಹಣ ಕಳುಹಿಸಿದ ಆ್ಯಪ್ ಓಪನ್ ಮಾಡಿ. ಆ ಟ್ರಾನ್ಸಾಕ್ಷನ್ ಮೇಲೆ ಕ್ಲಿಕ್ ಮಾಡಿ Report a problem ಅಥವಾ Raise Dispute ಆಪ್ಷನ್ ಆಯ್ಕೆ ಮಾಡಿ. Wrong UPI ID ಅಥವಾ Sent to wrong person ಎಂದು ಕಾರಣ ನೀಡಿ. ಬ್ಯಾಂಕ್ ಮತ್ತು NPCI ಗೆ ಈ ದೂರು ಹೋಗುತ್ತದೆ.

  • ಸ್ಟೆಪ್ 2 - ನಿಮ್ಮ ಬ್ಯಾಂಕ್ ಗೆ ಕರೆ ಮಾಡಿ

    24 ಗಂಟೆಯೊಳಗೆ ನಿಮ್ಮ ಬ್ಯಾಂಕ್ ನ ಕಸ್ಟಮರ್ ಕೇರ್ ಗೆ ಕರೆ ಮಾಡಿ. ಟ್ರಾನ್ಸಾಕ್ಷನ್ ID, ದಿನಾಂಕ, ಸಮಯ ಮತ್ತು ಮೊತ್ತ ಹೇಳಿ. ಬ್ಯಾಂಕ್ ಅವರು ಎದುರಿನ ಬ್ಯಾಂಕ್ ಗೆ ಹಣ ಹೋಲ್ಡ್ ಮಾಡಲು ರಿಕ್ವೆಸ್ಟ್ ಕಳುಹಿಸುತ್ತಾರೆ. ಎದುರಿನವರು ಒಪ್ಪಿದರೆ ಹಣ ವಾಪಸ್ ಬರುತ್ತದೆ.

  • ಸ್ಟೆಪ್ 3 - ಎದುರಿನ ವ್ಯಕ್ತಿಯನ್ನು ಸಂಪರ್ಕಿಸಿ

    UPI ಆ್ಯಪ್ ನಲ್ಲಿ ಕೆಲವೊಮ್ಮೆ ಸ್ವೀಕರಿಸಿದವರ ಹೆಸರು ಮತ್ತು ಬ್ಯಾಂಕ್ ಹೆಸರು ಕಾಣಿಸುತ್ತದೆ. ನೀವು ಅವರನ್ನು ಗೌರವದಿಂದ ಸಂಪರ್ಕಿಸಿ ತಪ್ಪಾಗಿ ಹೋಗಿದೆ ಎಂದು ಹೇಳಬಹುದು. ಬಹಳ ಜನರು ಒಳ್ಳೆ ಮನಸ್ಸಿನಿಂದ ವಾಪಸ್ ಮಾಡುತ್ತಾರೆ. ಆದರೆ ಬಲವಂತ ಮಾಡಬೇಡಿ.

  • ಸ್ಟೆಪ್ 4 - ಸೈಬರ್ ಹೆಲ್ಪ್ ಲೈನ್ 1930 ಗೆ ಕರೆ ಮಾಡಿ

    ಹಣದ ಮೊತ್ತ ಜಾಸ್ತಿ ಇದ್ದರೆ ಅಥವಾ ಮೋಸ ಆಗಿದೆ ಎಂದು ಅನುಮಾನ ಇದ್ದರೆ ತಕ್ಷಣ 1930 ಸೈಬರ್ ಕ್ರೈಂ ಹೆಲ್ಪ್ ಲೈನ್ ಗೆ ಕರೆ ಮಾಡಿ. ಅಥವಾ cybercrime.gov.in ವೆಬ್ ಸೈಟ್ ನಲ್ಲಿ ದೂರು ದಾಖಲಿಸಿ. ಪೊಲೀಸರು ಆ ಅಕೌಂಟ್ ಫ್ರೀಜ್ ಮಾಡಲು ಸಹಾಯ ಮಾಡುತ್ತಾರೆ.

  • ಸ್ಟೆಪ್ 5 - NPCI ಗೆ ಇಮೇಲ್ ಮಾಡಿ

    NPCI ಯ UPI ಸಹಾಯ ಕೇಂದ್ರಕ್ಕೆ support@npci.org.in ಗೆ ಇಮೇಲ್ ಮಾಡಬಹುದು. ವಿಷಯದಲ್ಲಿ UPI Wrong Transaction ಎಂದು ಬರೆದು ಎಲ್ಲಾ ಡೀಟೇಲ್ಸ್ ನೀಡಿ.

ನೆನಪಿನಲ್ಲಿ ಇಟ್ಟುಕೊಳ್ಳಿ...

  1. ಹಣ ಕಳುಹಿಸುವ ಮೊದಲು ಹೆಸರು ಮತ್ತು UPI ID ಎರಡು ಸರಿ ಇದೆಯಾ ಎಂದು ಎರಡು ಬಾರಿ ಚೆಕ್ ಮಾಡಿ.

  2. ಅಪರಿಚಿತರಿಗೆ QR ಸ್ಕ್ಯಾನ್ ಮಾಡಿ ಪೇ ಮಾಡಬೇಡಿ.

  3. OTP, PIN ಯಾರಿಗೂ ಹೇಳಬೇಡಿ.

  4. ಹಣ ವಾಪಸ್ ಬರಲು 7 ರಿಂದ 15 ದಿನ ಬೇಕಾಗಬಹುದು.

    ಯಾಕಂದ್ರೆ, ಎದುರಿನವರು ಒಪ್ಪದಿದ್ದರೆ ಬ್ಯಾಂಕ್ ನೇರವಾಗಿ ವಾಪಸ್ ಮಾಡಲು ಸಾಧ್ಯವಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂದೇ ಉದಯನಿಧಿ ಸ್ಟಾಲಿನ್ ಬಿಡುಗಡೆ ಮಾಡಿ: ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಆದೇಶ

‘CM ಡಿಕೆ ಶಿವಕುಮಾರ್ ಸೂಚನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ, ಆದ್ರೂ...’: ರಾಜೀನಾಮೆ ಬಗ್ಗೆ ಹೊರಟ್ಟಿ ಹೇಳಿದ್ದೇನು?

ಹಿರಿಯ ಶಾಸಕ HK ಪಾಟೀಲ್‌ಗೆ ತಪ್ಪಿದ ಸಚಿವ ಸ್ಥಾನ: 21 ಕಾಂಗ್ರೆಸ್ ಕೌನ್ಸಿಲರ್‌ಗಳ ಸಾಮೂಹಿಕ ರಾಜೀನಾಮೆ!

'ಬಿಜೆಪಿಯ ದುರಹಂಕಾರದ ವಿರುದ್ಧ ಜನಾದೇಶ': ತಮ್ಮ ಐತಿಹಾಸಿಕ ಗೆಲುವಿಗೆ ಮೂರು ಕಾರಣ ನೀಡಿದ ಪ್ರಶಾಂತ್ ಕಿಶೋರ್!

ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕೀಯದ ದರ್ಬಾರು: ಡಿಕೆಶಿ ಸಂಪುಟದಲ್ಲಿಯೂ 2ನೇ ತಲೆಮಾರಿನ ನಾಯಕರ ಕಾರುಬಾರು; ಸಾಮರ್ಥ್ಯಕ್ಕಿಂತ ಸಂಪರ್ಕ ಮುಖ್ಯವೇ?