FD Interest Rates 2026: ಹಣವನ್ನು ಸುರಕ್ಷಿತವಾಗಿ ಇಟ್ಟು ಉತ್ತಮ ರಿಟರ್ನ್ ಬೇಕಾದರೆ ಫಿಕ್ಸೆಡ್ ಡಿಪಾಸಿಟ್ ಇಂದಿಗೂ ಜನಪ್ರಿಯ ಆಯ್ಕೆ. ಆದರೆ ಪ್ರಸ್ತುತ ಪ್ರತಿಯೊಂದು ಬ್ಯಾಂಕ್‌ನಲ್ಲಿಯೂ ಬಡ್ಡಿ ದರಗಳು ವಿಭಿನ್ನವಾಗಿವೆ. ಅಂದ್ರೆ, ಎಲ್ಲಾ ಬ್ಯಾಂಕ್‌ಗಳ ಬಡ್ಡಿ ಒಂದೇ ರೀತಿ ಇಲ್ಲ. 2026ರ ಪ್ರಕಾರ 1 ವರ್ಷದ FD ಮೇಲೆ ಯಾವ ಬ್ಯಾಂಕ್‌ಗಳು ಗ್ರಾಹಕರಿಗೆ ಅತ್ಯಧಿಕ ಬಡ್ಡಿ ದರವನ್ನು ನೀಡುತ್ತಿವೆ ಗೊತ್ತಾ? ಇಲ್ಲಿದೆ ಆ ಕುರಿತ ವಿವರ
ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳಲ್ಲಿ ಸಿಗಲಿದೆ ಗರಿಷ್ಠ ಬಡ್ಡಿ!
ಹೂಡಿಕೆಯಲ್ಲಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುವವರಿಗೆ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು ಉತ್ತಮ ರಿಟರ್ನ್ ನೀಡುತ್ತವೆ. ಇವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಣದಲ್ಲಿದ್ದು, 5 ಲಕ್ಷ ರೂಪಾಯಿವರೆಗೆ DICGC ವಿಮೆ ಭದ್ರತೆ ಹೊಂದಿರುತ್ತವೆ. ಅದರಂತೆ, ಪ್ರಸ್ತುತ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇಕಡಾ 7.50, ಸೂರ್ಯೋದಯ್ ಹಾಗೂ ಉಜ್ಜೀವನ್ ಬ್ಯಾಂಕ್‌ಗಳು ಶೇಕಡಾ 7.25 ಮತ್ತು ಈಕ್ವಿಟಾಸ್ ಬ್ಯಾಂಕ್ ಶೇಕಡಾ 7.10 ರಷ್ಟು ಬಡ್ಡಿ ನೀಡುತ್ತಿವೆ. ಸೀನಿಯರ್ ಸಿಟಿಜನ್‌ಗಳಿಗೆ ಬಂಧನ್ ಮತ್ತು ಆರ್‌ಬಿಎಲ್ ಬ್ಯಾಂಕ್‌ಗಳಲ್ಲಿ ಶೇಕಡಾ 7.50 ರಷ್ಟು ಬಡ್ಡಿ ಲಭ್ಯವಿದೆ.
ಪ್ರೈವೇಟ್ ಮತ್ತು ಸರ್ಕಾರಿ ಬ್ಯಾಂಕ್‌ಗಳ ದರ ಹೇಗಿದೆ?
ಸುರಕ್ಷತೆಯೊಂದಿಗೆ ಉತ್ತಮ ರಿಟರ್ನ್ ಬಯಸುವವರಿಗೆ ಪ್ರೈವೇಟ್ ಬ್ಯಾಂಕ್‌ಗಳು ಸೂಕ್ತ. ಬಂಧನ್ ಮತ್ತು RBL ಬ್ಯಾಂಕ್‌ಗಳು ಶೇಕಡಾ 7.00 ನೀಡಿದರೆ, SBM ಬ್ಯಾಂಕ್ ಶೇಕಡಾ 7.10 ಹಾಗೂ DCB ಬ್ಯಾಂಕ್ ಶೇಕಡಾ 6.90 ಬಡ್ಡಿ ನೀಡುತ್ತಿವೆ. HDFC, ICICI ಮತ್ತು ಆಕ್ಸಿಸ್ ಬ್ಯಾಂಕ್‌ಗಳು ಶೇಕಡಾ 6.25 ರಿಂದ 6.50 ರಷ್ಟು ಬಡ್ಡಿ ನೀಡುತ್ತಿವೆ. ಇನ್ನು ಸಂಪೂರ್ಣ ಸುರಕ್ಷತೆ ಬಯಸುವವರಿಗೆ ಸರ್ಕಾರಿ ಬ್ಯಾಂಕ್‌ಗಳು ಉತ್ತಮವಾಗಿದ್ದು, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಶೇಕಡಾ 6.50 ನೀಡಿದರೆ, ಯೂನಿಯನ್ ಬ್ಯಾಂಕ್, SBI, ಕೆನರಾ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳು ಶೇಕಡಾ 6.25 ರಷ್ಟು ಬಡ್ಡಿ ನೀಡುತ್ತಿವೆ.
ಸೀನಿಯರ್ ಸಿಟಿಜನ್‌ಗಳಿಗೆ ಹೆಚ್ಚುವರಿ ಲಾಭ:
ಹೆಚ್ಚಿನ ಬ್ಯಾಂಕ್‌ಗಳಲ್ಲಿ ಹಿರಿಯ ನಾಗರಿಕರಿಗೆ ಶೇಕಡಾ 0.25 ರಿಂದ 0.75 ರಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ. ಪ್ರಸ್ತುತ ಆರ್‌ಬಿಐ ರೆಪೋ ದರ ಸ್ಥಿರವಾಗಿದ್ದು, ಮುಂದೆ ಬಡ್ಡಿ ದರಗಳು ಇಳಿಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಈಗಲೇ ಚಾಲ್ತಿಯಲ್ಲಿರುವ ಹೆಚ್ಚಿನ ಬಡ್ಡಿ ದರದಲ್ಲಿ ಎಫ್‌ಡಿ ಲಾಕ್ ಮಾಡಿಕೊಳ್ಳುವುದು ಉತ್ತಮ.