ಭಾರತೀಯ ರೈಲ್ವೆ 
ವಾಣಿಜ್ಯ

Tatkal ಮಿಸ್ ಆಯ್ತಾ? ಹಾಗಾದ್ರೆ, ಹೀಗೆ ಚಾರ್ಟ್ ಸಿದ್ಧವಾದ ಮೇಲೂ ರೈಲು ಟಿಕೆಟ್ ಪಡೆಯಿರಿ!

ಕೊನೆಯ ಕ್ಷಣದಲ್ಲೂ ಕನ್ಫರ್ಮ್ಡ್ ರೈಲು ಟಿಕೆಟ್ ಹೇಗೆ ಬುಕ್ ಮಾಡೋದು? Waiting List ಟಿಕೆಟ್‌ಗಳು ಖಚಿತವಾಗದೆ ಪರದಾಡುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯ ಕರೆಂಟ್ ಟಿಕೆಟ್ ಬುಕ್ ಮಾಡೋದು ಹೇಗೆ? ಇಲ್ಲಿದೆ ಆ ಕುರಿತ ವರದಿ:

ರೈಲು ಟಿಕೆಟ್ ಬುಕ್ ಮಾಡಲು ಮರೆತು ಹೋಯಿತಾ? ಅಥವಾ ಇದ್ದಕ್ಕಿದ್ದಂತೆ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಬಂದಿದ್ಯಾ? ಟೆನ್ಷನ್ ಬೇಡ. ಯಾಕಂದ್ರೆ, ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ Current Booking ಸೌಲಭ್ಯ ನೀಡುತ್ತದೆ. ಇದರ ಮೂಲಕ ರೈಲು ಹೊರಡೋದಕ್ಕೆ 4 ಗಂಟೆ ಮೊದಲು ಕೂಡ ಖಚಿತ ಟಿಕೆಟ್ ಪಡೆಯಬಹುದು. ಅದೇಗೆ ಗೊತ್ತಾ? ಇಲ್ಲಿದೆ ಆ ಕುರಿತ ವರದಿ:

ಹೌದು, ರೈಲಿನ ಚಾರ್ಟ್ ತಯಾರಾದ ಬಳಿಕ ಖಾಲಿಯಿರುವ ಸೀಟುಗಳನ್ನು ಕಾಯ್ದಿರಿಸಲು Current Booking (ಕರೆಂಟ್ ಬುಕಿಂಗ್) ಸೌಲಭ್ಯವಿರುತ್ತದೆ. ಇದನ್ನು ಅಧಿಕೃತ IRCTC ವೆಬ್‌ಸೈಟ್ ಅಥವಾ ಮೂರನೇ ಆಪ್ ಗಳ ಮೂಲಕವೂ ಕೊನೆಯ ನಿಮಿಷದಲ್ಲಿ ಖಚಿತ ಟಿಕೆಟ್‌ಗಳನ್ನು ಪಡೆಯಲು ಬಳಸಬಹುದು.

Current Booking ಎಂದರೇನು?

ರೈಲಿನಲ್ಲಿ WL ಮತ್ತು RAC ಟಿಕೆಟ್‌ಗಳು ಕ್ಯಾನ್ಸಲ್ ಆದಾಗ ಖಾಲಿ ಆಗುವ ಸೀಟ್‌ಗಳನ್ನು ಕರೆಂಟ್ ಕೋಟ ಅಡಿಯಲ್ಲಿ ಇಡಲಾಗುತ್ತದೆ. ಈ ಸೀಟ್‌ಗಳನ್ನು ರೈಲು ಹೊರಡೋದಕ್ಕೆ 4 ಗಂಟೆ ಮೊದಲಿನಿಂದ ಬುಕಿಂಗ್‌ಗೆ ತೆರೆಯಲಾಗುತ್ತದೆ. ಇದನ್ನೇ Current Booking ಎಂದು ಕರೆಯುತ್ತಾರೆ.

ಹಾಗಾದ್ರೆ, ಈ Current ಟಿಕೆಟ್ ಬುಕ್ ಮಾಡುವುದು ಹೇಗೆ?

  • ರೈಲು ಹೊರಡೋದಕ್ಕೆ 4 ಗಂಟೆ ಮೊದಲು ಬುಕಿಂಗ್ ಓಪನ್ ಆಗುತ್ತದೆ. ಅದರಂತೆ,

  • IRCTC ಅಧಿಕೃತ ವೆಬ್‌ಸೈಟ್ / RailOne ಆ್ಯಪ್ ಗೆ ಹೋಗಿ CURRENT AVAILABILITY ಆಯ್ಕೆ ಮಾಡಿ.

  • MakeMyTrip, Ixigo, Paytm, PhonePe ಈ ಆ್ಯಪ್‌ಗಳಲ್ಲಿ ತತ್ಕಾಲ್/ಕರೆಂಟ್ ಸೆಕ್ಷನ್‌ನಲ್ಲಿ ಹೋಗಿ ಕೊನೆಯ ನಿಮಿಷದ ಖಾಲಿ ಸೀಟ್ ಚೆಕ್ ಮಾಡಿ ಬುಕ್ ಮಾಡಬಹುದು

  • ರೈಲು ನಿಲ್ದಾಣದ ಕೌಂಟರ್ ಆಫ್‌ಲೈನ್‌ನಲ್ಲಿ ರೈಲು ಹೊರಡೋದಕ್ಕೆ 30 ನಿಮಿಷ ಮೊದಲುವರೆಗೆ ಕರೆಂಟ್ ಕೌಂಟರ್‌ನಲ್ಲಿ ಟಿಕೆಟ್ ತೆಗೆದುಕೊಳ್ಳಬಹುದು.

ಏತನ್ಮಧ್ಯೆ, ಈ ವ್ಯವಸ್ಥೆಯಲ್ಲಿ ಟಿಕೆಟ್ ಬುಕ್ ಮಾಡುವಾಗ ಕೆಲವು ಪ್ರಮುಖ ನಿಯಮಗಳನ್ನು ಗಮನಿಸಬೇಕಾಗುತ್ತದೆ. ಮೊದಲನೆಯದಾಗಿ, ಕರೆಂಟ್ ಬುಕಿಂಗ್‌ನಲ್ಲಿ ಕೇವಲ ಖಚಿತ ಸೀಟುಗಳು ಮಾತ್ರ ಲಭ್ಯವಿರುತ್ತವೆ. ಇಲ್ಲಿ ಯಾವುದೇ ಕಾಯುವಿಕೆ ಪಟ್ಟಿ ಅಥವಾ ಆರ್‌ಎಸಿ ಸೌಲಭ್ಯ ಇರುವುದಿಲ್ಲ. ಒಮ್ಮೆ ಟಿಕೆಟ್ ಕಾಯ್ದಿರಿಸಿದ ನಂತರ ಬೋರ್ಡಿಂಗ್ ಪಾಯಿಂಟ್ ಬದಲಾಯಿಸಲು ಅವಕಾಶವಿರುವುದಿಲ್ಲ. ಹಾಗೆಯೇ ಪ್ರಯಾಣಿಕರ ಹೆಸರು, ವಯಸ್ಸು ಅಥವಾ ಲಿಂಗದ ವಿವರಗಳನ್ನು ನಂತರ ಪರಿಷ್ಕರಿಸಲು ಸಾಧ್ಯವಾಗುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೋಮಾ ಸ್ಥಿತಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ? ವದಂತಿ ಬೆನ್ನಲ್ಲೇ ದಿಢೀರ್ Video ಬಿಡುಗಡೆ ಮಾಡಿದ ಇರಾನ್; ಸತ್ಯ ಮುಚ್ಚಿಡುವ ಯತ್ನವೇ..?

ಇಡೀ ದೇಹಕ್ಕೆ ಹರಡಿದ cancer, Joe Biden ಆರೋಗ್ಯ ಮತ್ತಷ್ಟು ಕ್ಷೀಣ; BBC ಸಂದರ್ಶನದಲ್ಲಿ ಪುತ್ರ ಹಂಟರ್ ಕಳವಳ

ಭಾರತ-ಅಮೆರಿಕ ಸಂಬಂಧಗಳಿಗೆ ಹೊಸ ವೇಗ: ಪ್ರಧಾನಿ ಮೋದಿಗೆ ವ್ಯಾನ್ಸ್ ಕರೆ

KBC ವೇದಿಕೆಯಲ್ಲಿ ಆಮಿರ್ ಖಾನ್‌; ‘4ನೇ ಮದುವೆ ಯಾವಾಗ?’; ಕಾಲೆಳೆದ ನೆಟ್ಟಿಗರು, Amitabh bachchan ಶೋ Promoಗೆ ಕಮೆಂಟ್‌ಗಳ ಮಹಾಪೂರ..!

40 ಕೋಟಿ ಯುವಕರು ದೇಶದ ನಿಜವಾದ ಶಕ್ತಿ, ಆದರೆ ನಿರುದ್ಯೋಗ ತಾಂಡವವಾಡುತ್ತಿದೆ: ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ