Petrol Bunkಗಳಲ್ಲಿ ನಿಮ್ಮ ಕಣ್ಣೆದುರೇ ನಡೆಯುತ್ತೆ ಮೋಸ AI Image
ವಾಣಿಜ್ಯ

45 ಲೀಟರ್ ಟ್ಯಾಂಕ್‌ಗೆ 52 ಲೀಟರ್ ಇಂಧನ?: Petrol Bunkಗಳಲ್ಲಿ ನಿಮ್ಮ ಕಣ್ಣೆದುರೇ ನಡೆಯುತ್ತೆ ಮೋಸ: ವಂಚನೆ ಪತ್ತೆ ಮಾಡಲು ಇಲ್ಲಿದೆ ಟಾಪ್ ಟಿಪ್ಸ್!

ಕಾರು/ಬೈಕ್‌ಗೆ ಇಂಧನ ತುಂಬಿಸಲು ಪೆಟ್ರೋಲ್ ಬಂಕ್‌ಗೆ ಹೋದಾಗ ನಿಮಗೆ ತಿಳಿಯದಂತೆ ಜೇಬಿಗೆ ಕತ್ತರಿ ಬೀಳುತ್ತಿದೆಯೇ? ಹಾಗಾಗಿ, ನಿಮ್ಮ ಹಣಕ್ಕೆ ತಕ್ಕ ಸಂಪೂರ್ಣ ಇಂಧನ ಪಡೆಯಲು ಬಂಕ್‌ನಲ್ಲಿ ನೀವು ಪರಿಶೀಲಿಸಲೇಬೇಕಾದ ಪ್ರಮುಖ ಅಂಶಗಳು ಮಾಹಿತಿ ಇಲ್ಲಿದೆ.

Petrol Pump Fraud Alert: ಇತ್ತೀಚೆಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಪೆಟ್ರೋಲ್ ಪಂಪ್ ಒಂದರಲ್ಲಿ ಚರಣ್ ಸಿಂಗ್ ಎಂಬ ಕಾರು ಮಾಲೀಕರು ತಮ್ಮ ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರಿಗೆ ಪೆಟ್ರೋಲ್ ಹಾಕಿಸಲು ಬಂದಿದ್ದರು. ಈ ಕಾರಿನ ಇಂಧನ ಟ್ಯಾಂಕ್ ಸಾಮರ್ಥ್ಯ ಗರಿಷ್ಠ 45 ಲೀಟರ್. ಆದರೆ, ಪೆಟ್ರೋಲ್ ಬಂಕ್ ಸಿಬ್ಬಂದಿ ಕಾರಿಗೆ 52 ಲೀಟರ್ ಪೆಟ್ರೋಲ್ ತುಂಬಿಸಿ ಅದಕ್ಕೆ ಬಿಲ್ ನೀಡಿ ಮೋಸ ಮಾಡಿದ್ದರು. ಈ ಬಗ್ಗೆ ಕಾರು ಮಾಲೀಕರು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಾಗಾಗಿ, ನಿಮ್ಮ ವಾಹನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸುವಾಗ ಇಂತಹ ವಂಚನೆಗಳಿಂದ ಪಾರಾಗಲು ಮತ್ತು ನಿಮ್ಮ ಹಣಕ್ಕೆ ತಕ್ಕ ಪೂರ್ಣ ಪ್ರಮಾಣದ ಇಂಧನವನ್ನು ಪಡೆಯಲು ಬಂಕ್‌ಗೆ ಹೋದಾಗ ಈ ಪ್ರಮುಖ ಅಂಶಗಳ ಕಡೆಗೆ ವಿಶೇಷ ಗಮನ ಹರಿಸಬೇಕು. ಆ ಕುರಿತ ವರದಿ ಇಲ್ಲಿದೆ:

ರೀಡಿಂಗ್ ಕಡೆ ಗಮನವಿರಲಿ

  • ಮೊದಲ ವೀಕ್ಷಣೆ: ಇಂಧನ ತುಂಬಿಸಲು ಆರಂಭಿಸುವ ಮುನ್ನ ಬಂಕ್ ಸಿಬ್ಬಂದಿ ಯಂತ್ರದಲ್ಲಿ ಜೀರೋ (0) ಸೆಟ್ ಮಾಡಿದ್ದಾರೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಿ.

  • ಡಿಸ್‌ಪ್ಲೇ ಕಡೆಗೆ ನೋಡಿ: ಸಿಬ್ಬಂದಿ ನಿಮ್ಮ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸಿದರೂ, ನಿಮ್ಮ ಕಣ್ಣುಗಳು ಪೆಟ್ರೋಲ್ ಯಂತ್ರದ ಸ್ಕ್ರೀನ್ ಮೇಲಿರಲಿ.

ಜಂಪ್ ಟ್ರಿಕ್ ವಂಚನೆ

ಹಳೇ ರೀಡಿಂಗ್ ಮುಂದುವರಿಕೆ; ಉದಾಹರಣೆಗೆ, ನಿಮಗೂ ಮುನ್ನ ಬಂದ ವ್ಯಕ್ತಿ ₹200 ಗೆ ಪೆಟ್ರೋಲ್ ಹಾಕಿಸಿರುತ್ತಾರೆ. ಸಿಬ್ಬಂದಿ ಯಂತ್ರವನ್ನು ರೀಸೆಟ್ (0 ಮಾಡದೆ) ಮಾಡದೆ, ಅಲ್ಲಿಂದಲೇ ರೀಡಿಂಗ್ ಮುಂದುವರಿಸಿ ನಿಮಗೆ ₹500 ಗೆ ಇಂಧನ ತುಂಬಿಸಿ ಮೋಸ ಮಾಡಬಹುದು. ಅದರಂತೆ, ಈ ಸಂದರ್ಭದಲ್ಲಿ ನಿಮಗೆ ಕೇವಲ ₹300 ಮೌಲ್ಯದ ಪೆಟ್ರೋಲ್ ಮಾತ್ರ ಸಿಗುತ್ತದೆ, ಆದರೆ ನೀವು ಪಾವತಿಸುವುದು ₹500.

ಪೆಟ್ರೋಲ್ ಪೈಪ್ ಗಮನಿಸಿ

  • ನೋಝಲ್ ಹೋಲ್ಡ್ ಟ್ರಿಕ್: ಪೆಟ್ರೋಲ್ ಹಾಕುವ ಸಿಬ್ಬಂದಿ ಇಂಧನ ಪೈಪ್‌ನ ನೋಝಲ್ ಬಟನ್ ಅನ್ನು ಪದೇ ಪದೇ ಪ್ರೆಸ್ ಮಾಡುವುದನ್ನು ಮತ್ತು ಬಿಡುವುದನ್ನು ಗಮನಿಸಿ.

  • ಹರಿವಿನ ವ್ಯತ್ಯಾಸ: ಹೀಗೆ ಮಾಡುವುದರಿಂದ ಇಂಧನದ ಹರಿವು ಮಧ್ಯದಲ್ಲಿ ಕಟ್ ಆಗುತ್ತದೆ ಮತ್ತು ಯಂತ್ರದಲ್ಲಿ ರೀಡಿಂಗ್ ವೇಗವಾಗಿ ಓಡಿದರೂ, ವಾಹನಕ್ಕೆ ಬೀಳುವ ಇಂಧನದ ಪ್ರಮಾಣ ಕಡಿಮೆಯಾಗುತ್ತದೆ. ಆದ್ದರಿಂದ ಪೈಪ್ ಲಾಕ್ ಆಗಿ ನೇರವಾಗಿ ಇಂಧನ ಬೀಳುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇಂಧನದ ಶುದ್ಧತೆ ಪರೀಕ್ಷಿಸಿ

  • ಸಾಂದ್ರತೆಯ ಪರಿಶೀಲನೆ: ಪ್ರತಿದಿನ ಬೆಳಗ್ಗೆ ಪ್ರತಿ ಬಂಕ್‌ನಲ್ಲೂ ಪೆಟ್ರೋಲ್ ಮತ್ತು ಡೀಸೆಲ್‌ನ ಸಾಂದ್ರತೆಯನ್ನು ಯಂತ್ರದ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

  • ದರ: ಪೆಟ್ರೋಲ್ ಸಾಂದ್ರತೆಯು 720 ರಿಂದ 775 kg/m³ ಮತ್ತು ಡೀಸೆಲ್ ಸಾಂದ್ರತೆಯು 820 ರಿಂದ 860 kg/m³ ಇರಬೇಕು. ಈ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ಇಂಧನದಲ್ಲಿ ಕಲಬೆರಕೆ ಇದೆ ಎಂದು ಅರ್ಥ. ಇದನ್ನು ಗ್ರಾಹಕರು ಉಚಿತವಾಗಿ ಫಿಲ್ಟರ್ ಪೇಪರ್ ಟೆಸ್ಟ್ ಮೂಲಕ ಪರಿಶೀಲಿಸಲು ಬಂಕ್‌ನಲ್ಲಿ ಕೇಳಬಹುದು.

ರೌಂಡ್ ಫಿಗರ್ ಮೊತ್ತವನ್ನು ತಪ್ಪಿಸಿ

ಸಾಮಾನ್ಯವಾಗಿ ಗ್ರಾಹಕರು ₹50, ₹100, ₹500, ₹1000 ಅಥವಾ 1 ಲೀಟರ್, 2 ಲೀಟರ್ ಹೀಗೆ ರೌಂಡ್ ಫಿಗರ್ ಮೊತ್ತಕ್ಕೆ ಇಂಧನ ಕೇಳುತ್ತಾರೆ. ಕೆಲವು ವಂಚನೆ ನಡೆಸುವ ಬಂಕ್‌ಗಳು ಇಂತಹ ನಿರ್ದಿಷ್ಟ ಸಂಖ್ಯೆಗಳಿಗೆ ಕಡಿಮೆ ಇಂಧನ ಬೀಳುವಂತೆ ಯಂತ್ರದ ಸಾಫ್ಟ್‌ವೇರ್‌ನಲ್ಲಿ ಮುಂಚಿತವಾಗಿಯೇ ಸೆಟ್ಟಿಂಗ್ ಮಾಡಿಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ಇಂತಹ ಮೋಸದಿಂದ ತಪ್ಪಿಸಿಕೊಳ್ಳಲು ₹120, ₹530, ₹1050 ರಂತಹ ವಿಭಿನ್ನ ಮೊತ್ತಕ್ಕೆ ಅಥವಾ 1.5 ಲೀಟರ್‌ನಂತಹ ಪ್ರಮಾಣದಲ್ಲಿ ಇಂಧನ ಕೇಳಿ ಪಡೆಯಿರಿ.

ಪ್ರಮಾಣದ ಮೇಲೆ ಅನುಮಾನ ಬಂದರೆ

ನಿಮಗೆ ಇಂಧನದ ಪ್ರಮಾಣ ಕಡಿಮೆ ಬಂದಿದೆ ಎಂದು ಅನುಮಾನ ಬಂದರೆ, ಪ್ರತಿ ಪೆಟ್ರೋಲ್ ಬಂಕ್‌ನಲ್ಲೂ ಸರ್ಕಾರಿ ಮಾಪನ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟ 5 ಲೀಟರ್‌ನ ಕಂಟೇನರ್ (ಜಾರ್) ಇರಲೇಬೇಕು. ಅದರಂತೆಮ ನಿಮಗೆ ಅನುಮಾನ ಬಂದರೆ ನೀವು ಸಿಬ್ಬಂದಿಗೆ ಆ ಜಾರ್‌ಗೆ 5 ಲೀಟರ್ ಇಂಧನ ತುಂಬಿಸಲು ಹೇಳಿ ಪ್ರಮಾಣವನ್ನು ಖುದ್ದಾಗಿ ಅಳೆಯಬಹುದು. ಇದನ್ನ ನಿರಾಕರಿಸುವ ಹಕ್ಕು ಬಂಕ್ ಸಿಬ್ಬಂದಿಗೆ ಇರುವುದಿಲ್ಲ.

Petrol Bunkಗಳಲ್ಲಿ ನಿಮ್ಮ ಕಣ್ಣೆದುರೇ ನಡೆಯುತ್ತೆ ಮೋಸ

ದೂರು ದಾಖಲಿಸುವ ಹಂತ-ಹಂತದ ಪ್ರಕ್ರಿಯೆ:

ನಿಮಗೆ ಮೋಸವಾಗಿರುವುದು ಖಚಿತವಾದರೆ ನೀವು ದೂರು ನೀಡಬಹುದು. ಅದರಂತೆ, ಬಂಕ್‌ನಲ್ಲಿರುವ ದೂರು ಪುಸ್ತಕದಲ್ಲಿ ನಿಮ್ಮ ದೂರು, ದಿನಾಂಕ, ಸಮಯ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬರೆದು ಸಹಿ ಮಾಡಿ. ಜೊತೆಗೆ, ಪ್ರತಿ ಬಂಕ್‌ನಲ್ಲೂ ಪ್ರದರ್ಶಿಸಲಾಗಿರುವ ಆಯಾ ತೈಲ ಕಂಪನಿಯ (IOCL, HPCL, BPCL) ಪ್ರಾದೇಶಿಕ ವ್ಯವಸ್ಥಾಪಕರ (Regional Manager) ಮೊಬೈಲ್ ಸಂಖ್ಯೆಗೆ ನೇರವಾಗಿ ಕರೆ ಮಾಡಿ ವಿಷಯ ತಿಳಿಸಬಹುದು. ಇದರೊಂದಿಗೆ, 1800-233-3555 ಕ್ಕೆ ಕರೆ ಮಾಡಿ ನಿಮ್ಮ ದೂರನ್ನು ದಾಖಲಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

ದೇಶಾದ್ಯಂತ H1N1 ಪ್ರಕರಣಗಳ ಏರಿಕೆ: ಸೋಂಕಿನ ಲಕ್ಷಣಗಳು, ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, IMA ಸಲಹೆ ಏನು?

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

'ಟಾಕ್ಸಿಕ್' ಸಿನಿಮಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ!