ಸಚಿವ ಪಿಯೂಷ್ ಗೋಯಲ್ 
ವಾಣಿಜ್ಯ

ಭಾರತ-ಅಮೆರಿಕ ಒಪ್ಪಂದ ನಮ್ಮ ರೈತರ ಹಿತಾಸಕ್ತಿ ರಕ್ಷಿಸುತ್ತದೆ; ರಷ್ಯಾ ತೈಲ ಖರೀದಿ ಬಗ್ಗೆ MEA ಮಾಹಿತಿ: ಗೋಯಲ್

"ಭಾರತೀಯ ರೈತರ ಕೃಷಿ ಉತ್ಪನ್ನಗಳನ್ನು ಶೂನ್ಯ ಸುಂಕದಲ್ಲಿ ಅಮೆರಿಕಕ್ಕೆ ರಫ್ತು ಮಾಡಲಾಗುತ್ತದೆ. ಅದೇ ಸಮಯದಲ್ಲಿ, ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ಅಮೆರಿಕದ ರೈತರ ಕೃಷಿ ಉತ್ಪನ್ನಗಳಿಗೆ ಯಾವುದೇ ಸುಂಕ ರಿಯಾಯಿತಿಗಳನ್ನು ನೀಡಲಾಗಿಲ್ಲ"

ನವದೆಹಲಿ: ಕೃಷಿ ಸುಂಕ ಕಡಿತದ ಬಗ್ಗೆ ಕೆಲವು ವ್ಯಾಪಾರ ತಜ್ಞರು ಎತ್ತಿರುವ ಕಳವಳಗಳನ್ನು ಪರಿಹರಿಸಲು ಯತ್ನಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಅಮೆರಿಕ ಜೊತೆಗಿನ ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿ ಭಾರತ ಯಾವುದೇ ರಿಯಾಯಿತಿಗಳನ್ನು ನೀಡಿಲ್ಲ ಎಂದು ಶನಿವಾರ ಹೇಳಿದ್ದಾರೆ.

"ಭಾರತೀಯ ರೈತರ ಕೃಷಿ ಉತ್ಪನ್ನಗಳನ್ನು ಶೂನ್ಯ ಸುಂಕದಲ್ಲಿ ಅಮೆರಿಕಕ್ಕೆ ರಫ್ತು ಮಾಡಲಾಗುತ್ತದೆ. ಅದೇ ಸಮಯದಲ್ಲಿ, ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ಅಮೆರಿಕದ ರೈತರ ಕೃಷಿ ಉತ್ಪನ್ನಗಳಿಗೆ ಯಾವುದೇ ಸುಂಕ ರಿಯಾಯಿತಿಗಳನ್ನು ನೀಡಲಾಗಿಲ್ಲ" ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ.

"ಭಾರತದ ರೈತರ ಮೇಲೆ ಪರಿಣಾಮ ಬೀರುವ ಯಾವುದೇ ಕೆಲಸವನ್ನು ನಾವು ಮಾಡಿಲ್ಲ. ಡೈರಿ, ಜೋಳ, ಸೋಯಾ ಹಿಟ್ಟು, ಸಕ್ಕರೆ, ರಾಗಿ, ಸಿಟ್ರಸ್ ಹಣ್ಣುಗಳ ಮೇಲೆ ಯಾವುದೇ ರಿಯಾಯಿತಿ ನೀಡಲಾಗಿಲ್ಲ" ಎಂದು ಸಚಿವರು ತಿಳಿಸಿದ್ದಾರೆ.

ನಾವು ಡಿಸ್ಟಿಲ್ಲರ್ಸ್ ಡ್ರೈಡ್ ಗ್ರೇನ್ಸ್ ವಿಥ್ ಸೊಲ್ಯೂಬಲ್ಸ್ (ಡಿಡಿಜಿಎಸ್​), ವೈನ್‌ಗಳು ಮತ್ತು ಸ್ಪಿರಿಟ್‌ಗಳಂತಹ ಕೆಲವು ಉತ್ಪನ್ನಗಳ ಮೇಲೆ ಅಮೆರಿಕ ಮಾರುಕಟ್ಟೆಗೆ ಮುಕ್ತವಾಗಿಸಿದ್ದೇವೆ. ಇವುಗಳಲ್ಲಿ ನಾವು ಕನಿಷ್ಠ ಆಮದು ಬೆಲೆಯನ್ನು ಸಹ ಇಟ್ಟುಕೊಂಡಿದ್ದೇವೆ ಎಂದರು.

ಭಾರತಕ್ಕೆ ಅಮೆರಿಕದಿಂದ ಬರುವ ಸೇಬುಗಳ ಮೇಲೆ ಕೋಟಾ ಆಧಾರಿತ ಸುಂಕ ರಿಯಾಯಿತಿಗಳನ್ನು ಮತ್ತು ಪ್ರತಿ ಕೆಜಿಗೆ ಕನಿಷ್ಠ ಆಮದು ಬೆಲೆಯನ್ನು 80 ರೂ.ಗಳಿಗೆ ನೀಡುತ್ತಿದೆ. ಸೋಯಾಬೀನ್ ಎಣ್ಣೆಯಲ್ಲಿ ಅಮೆರಿಕಕ್ಕೆ ಕೋಟಾ ಆಧಾರಿತ ಸುಂಕ ರಿಯಾಯಿತಿಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಈ ಒಪ್ಪಂದದ ಚೌಕಟ್ಟಿನಲ್ಲಿ ರೈತರಿಗೆ ಸಂಪೂರ್ಣ ರಕ್ಷಣೆ ನೀಡಲಿದೆ. ಭಾರತೀಯ ಎಂಎಸ್​ಎಂಇಗಳಿಗೆ ಭಾರಿ ಪ್ರಯೋಜನಗಳನ್ನು ತರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ರಷ್ಯಾ ತೈಲ ಖರೀದಿ ಬಗ್ಗೆ MEA ಮಾಹಿತಿ

ಇನ್ನು ಅಮೆರಿಕ, ಭಾರತದ ಮೇಲೆ ವಿಧಿಸಲಾದ ಹೆಚ್ಚುವರಿ ಸುಂಕಗಳನ್ನು ತೆಗೆದುಹಾಕುವುದಾಗಿ ಘೋಷಿಸಿದ ಬಳಿಕ ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರೆಸುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವಿಚಾರ ಕುರಿತು ಎಷ್ಟೇ ಸಾರಿ ಕೇಳಿದರು ಅಷ್ಟೇ, ಈ ಕುರಿತು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಲಿದೆ ಎಂದರು.

ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಘೋಷಣೆ ವೇಳೆ ಭಾರತವು ರಷ್ಯಾದ ಒಕ್ಕೂಟದ ತೈಲವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಬದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ