ರಾಂಗ್ ನಂಬರ್‌ಗೆ Recharge ಮಾಡಿದ್ರಾ?  Online Desk
ವಾಣಿಜ್ಯ

ಮಿಸ್ ಆಗಿ ರಾಂಗ್ ನಂಬರ್‌ಗೆ ರೀಚಾರ್ಜ್ ಮಾಡಿದ್ರಾ? ಟೆನ್ಷನ್ ಬೇಡ, ಹಣ ವಾಪಸ್ ಪಡೆಯುವ ಸುಲಭ ದಾರಿ ಇಲ್ಲಿದೆ

ಮಿಸ್ ಆಗಿ ರಾಂಗ್ ನಂಬರ್‌ಗೆ ರೀಚಾರ್ಜ್ ಆದ ಹಣವನ್ನು ರಿಫಂಡ್ ಪಡೆಯುವುದು ಹೇಗೆ? 2 ಗಂಟೆಯೊಳಗೆ ಈ ಕೆಲಸ ಮಾಡಿದರೆ ನಿಮ್ಮ ಹಣ ಖಂಡಿತ ವಾಪಸ್ ಸಿಗುತ್ತದೆ! Jio, Airtel, Vi and BSNL ರಿಫಂಡ್ ಪ್ರೊಸೆಸ್ ಮಾಹಿತಿ ಇಲ್ಲಿದೆ.

Recharged to wrong number? ಬೇಗ ಬೇಗ ರೀಚಾರ್ಜ್ ಮಾಡುವ ಆತುರದಲ್ಲಿ ಒಮ್ಮೊಮ್ಮೆ 1 ಡಿಜಿಟ್ ತಪ್ಪಾಗಿ ಬೇರೆಯವರ ನಂಬರ್‌ಗೆ ರೀಚಾರ್ಜ್ ಆಗಿಬಿಡುತ್ತದೆ. ಈ ವೇಳೆ ಪ್ಯಾನಿಕ್ ಆಗೋದು ಸಾಮಾನ್ಯ. ಆದ್ರೆ, ಪ್ಯಾನಿಕ್ ಆಗೋ ಬದಲು, ತಕ್ಷಣವೇ ಈ ಕೆಲಸ ಮಾಡಿದರೆ ನಿಮ್ಮ ಹಣವನ್ನು ನೀವು ಮರಳಿ ಪಡೆಯಬಹುದು. ಅದೇಗೆ ಗೊತ್ತಾ?

ರಾಂಗ್ ರೀಚಾರ್ಜ್‌ಗೆ ಹಣ ವಾಪಸ್ ಪಡೆಯುವುದು ಹೇಗೆ?

ಸ್ಟೆಪ್ 1: ಕಸ್ಟಮರ್ ಕೇರ್‌

ನಿಮ್ಮ ಟೆಲಿಕಾಂ ಕಂಪನಿಯ ಕಸ್ಟಮರ್ ಕೇರ್‌ಗೆ ಕರೆ ಮಾಡಿ. ಯಾಕಂದ್ರೆ, ಇದೇ ಅತ್ಯಂತ ವೇಗದ ದಾರಿ. ರೀಚಾರ್ಜ್ ಆದ 2 ರಿಂದ 3ಗಂಟೆಯೊಳಗೆ ಕರೆ ಮಾಡಿದರೆ ಚಾನ್ಸ್ ಜಾಸ್ತಿ.

  • Jio: 198 ಅಥವಾ 1800-889-9999

  • Airtel: 121 ಅಥವಾ 9810012345

  • Vi: 199 ಅಥವಾ 1800-103-1222

  • BSNL: 1800-180-1503

ಅವರಿಗೆ ನಿಮ್ಮ ನಂಬರ್, ತಪ್ಪಾದ ನಂಬರ್, ರೀಚಾರ್ಜ್ ಅಮೌಂಟ್, ಟ್ರಾನ್ಸಾಕ್ಷನ್ ID ಹೇಳಿ. ಅವರು ಆ ನಂಬರ್ ಯೂಸರ್ ಬಳಿ ಅನುಮತಿ ಕೇಳಿ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡುತ್ತಾರೆ.

ಸ್ಟೆಪ್ 2: ಆಪ್ ಮೂಲಕ ರಿಕ್ವೆಸ್ಟ್ ಮಡಿ

  • ಜಿಯೋ ಬಳಕೆದಾರರು ಮೈಜಿಯೋ ಆಪ್‌ನಲ್ಲಿ 'Recharge History' ಗೆ ಹೋಗಿ, ತಪ್ಪಾದ ವಹಿವಾಟನ್ನು ಆಯ್ದು 'Cancel Plan' ಕ್ಲಿಕ್ ಮಾಡುವ ಮೂಲಕ ರೀಚಾರ್ಜ್ ರದ್ದುಗೊಳಿಸಬಹುದು.

  • ಏರ್‌ಟೆಲ್ ಗ್ರಾಹಕರು ಏರ್‌ಟೆಲ್ ಥ್ಯಾಂಕ್ಸ್ ಆಪ್‌ನ ಸಹಾಯ (Help) ವಿಭಾಗದಲ್ಲಿ 'Recharged on a wrong number' ಆಯ್ಕೆಯನ್ನು ಬಳಸಿ ದೂರು ನೀಡಬಹುದು.

  • ಇನ್ನು ವೊಡಾಫೋನ್ ಐಡಿಯಾ (Vi) ಬಳಕೆದಾರರು ತಕ್ಷಣವೇ 51619 ಸಂಖ್ಯೆಗೆ ಕರೆ ಮಾಡಿ ರೀಚಾರ್ಜ್ ರದ್ದುಗೊಳಿಸಲು ವಿನಂತಿಸಬಹುದು.

  • ಕೆಲವೊಮ್ಮೆ ಸ್ಕ್ರೀನ್‌ಶಾಟ್ ಅಪ್‌ಲೋಡ್ ಮಾಡಿದರೆ ಒಳ್ಳೆಯದು.

ಸ್ಟೆಪ್ 3: ತಪ್ಪಾದ ನಂಬರ್‌ನವರಿಗೆ ನೇರವಾಗಿ ಕರೆ ಮಾಡಿ:

ಕೆಲವೊಮ್ಮೆ ಕಸ್ಟಮರ್ ಕೇರ್ ಸಹಾಯ ಮಾಡಲು ಆಗಲ್ಲ. ಆಗ ಆ ನಂಬರ್‌ಗೆ ಕರೆ ಮಾಡಿ ವಿಷಯ ವಿವರಿಸಿ. ಅವರು ಒಪ್ಪಿದರೆ ನಿಮ್ಮ ನಂಬರ್‌ಗೆ ರೀಚಾರ್ಜ್ ಟ್ರಾನ್ಸ್‌ಫರ್ ಮಾಡಬಹುದು ಅಥವಾ UPI ಮೂಲಕ ಹಣ ವಾಪಸ್ ಕಳುಹಿಸಬಹುದು.

ಏತನ್ಮಧ್ಯೆ, ಹಣ ಮರಳಿ ಪಡೆಯುವ ಪ್ರಕ್ರಿಯೆಯು ಆಯಾ ಕಂಪನಿಗಳ ನಿಯಮಗಳಿಗೆ ಒಳಪಟ್ಟಿರುತ್ತದೆ. ಮುಂದಿನ ಬಾರಿ ಇಂತಹ ತಪ್ಪುಗಳನ್ನು ತಡೆಯಲು, ರೀಚಾರ್ಜ್ ದೃಢೀಕರಿಸುವ ಮುನ್ನ ಮೊಬೈಲ್ ಸಂಖ್ಯೆಯನ್ನು ಕನಿಷ್ಠ ಎರಡು ಬಾರಿ ಪರಿಶೀಲಿಸುವುದು ಉತ್ತಮ ಅಭ್ಯಾಸ.

ಮುಂದೆ ತಪ್ಪಾಗದಂತೆ ಏನು ಮಾಡಬೇಕು?

ರೀಚಾರ್ಜ್ ಮಾಡುವ ಮೊದಲು ನಂಬರ್ 2 ಬಾರಿ ಚೆಕ್ ಮಾಡಿ. ಆಗಾಗ್ಗೆ ರೀಚಾರ್ಜ್ ಮಾಡುವ ನಂಬರ್‌ಗಳನ್ನು My Contacts ನಲ್ಲಿ ಸೇವ್ ಮಾಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಧರ್ಮಸ್ಥಳ ಬುರಡೆ ಪ್ರಕರಣ: ಕೊನೆಗೂ ಬೆಳ್ತಂಗಡಿ ನ್ಯಾಯಾಲಯಕ್ಕೆ 7000 ಪುಟಗಳ ಅಂತಿಮ ವರದಿ ಸಲ್ಲಿಸಿದ SIT!

ಉಪ್ಪಿದಾದ ಬೆಡಗಿಗೆ ಸ್ತನ ಕ್ಯಾನ್ಸರ್: ಶಾಕಿಂಗ್ ಪೋಸ್ಟ್ ಹಂಚಿಕೊಂಡ ನಟಿ ಉಮಾ ಶಂಕರಿ; ಹೇಳಿದ್ದೇನು?

FIFA World Cup 2026: ಮೆಸ್ಸಿ-ಅರ್ಜೆಂಟೀನಾಗೆ ಇಂಗ್ಲೆಂಡ್ ದೊಡ್ಡ ಸವಾಲು ಯಾಕೆ ಗೊತ್ತ?; ಇಂದು ಮಧ್ಯರಾತ್ರಿ ನಡೆಯಲಿದೆ ಸೆಮಿ 'ಮಹಾ'ಕದನ!

Bankipur bypoll: ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ಮುಂದಾದ ಪ್ರಶಾಂತ್‍ಗೆ ಭಾರಿ ಹಿನ್ನಡೆ; BJP ಸೇರಿದ ಕೆಸಿ ಸಿನ್ಹಾ!

ಮಳೆ ಕೊರತೆ ಸಂಕಷ್ಟದ ನಡುವೆ ಕರ್ನಾಟಕಕ್ಕೆ ಬಿಗ್ ರಿಲೀಫ್: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಆದೇಶ ಹೊರಡಿಸದ 'CWRC'