ಶೀಘ್ರ UPI Paymentಗೂ ಶುಲ್ಕ? Online Desk
ವಾಣಿಜ್ಯ

UPI Payment ಗೂ ಶುಲ್ಕ? ಯಾರೆಲ್ಲ ಫೀಸ್ ಪೇ ಮಾಡಬೇಕು?

UPI ಪೇಮೆಂಟ್‌ಗಳಿಗೆ ಶುಲ್ಕ ಎನ್ನುವ ಸುದ್ದಿ ಕೇಳಿ ಬಂತು. ಆ ಮೇಲೆ UPI ಪೇಮೆಂಟ್ ಸೇವೆ ಸಂಪೂರ್ಣ ಉಚಿತ ಎಂದು ಸರ್ಕಾರ ಹೇಳಿತು. ಇದರೊಂದಿಗೆ ಬಳಕೆದಾರರು ನಿಟ್ಟುಸಿರು ಬಿಟ್ಟರು; ಆದ್ರೆ, ಇದೀಗ ಸರ್ಕಾರವೇ UPI ವಹಿವಾಟುಗಳ ಮೇಲೆ ಶುಲ್ಕ ಹಾಕಲು ನಿರ್ಧಾರ ಮಾಡಿದೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ.

ನವದೆಹಲಿ: ಅವಾಗವಾಗ UPI ಪೇಮೆಂಟ್‌ಗಳಿಗೆ ಶುಲ್ಕ ಎನ್ನುವ ಸುದ್ದಿ ಕೇಳಿ ಬರುತ್ತಿರುತ್ತದೆ. ಒಮ್ಮೆ RBI ಗವರ್ನರ್ ಕೂಡ UPI ಅನ್ನು ಎಷ್ಟು ದಿನ ಉಚಿತವಾಗಿ ಕೊಡಬಹುದು ಎಂದು ಕೇಳಿ ಬಳಕೆದಾರರ ನಿದ್ದೆಕೆಡಿಸಿದ್ದರು. ಆ ಮೇಲೆ UPI ಪೇಮೆಂಟ್ ಸೇವೆ ಸಂಪೂರ್ಣ ಉಚಿತ ಎಂದು ಸರ್ಕಾರ ಹೇಳಿತು. ಇದರೊಂದಿಗೆ ಬಳಕೆದಾರರು ನಿಟ್ಟುಸಿರು ಬಿಟ್ಟರು; ಆದ್ರೆ, ಇದೀಗ ಸರ್ಕಾರವೇ UPI ವಹಿವಾಟುಗಳ ಮೇಲೆ ಶುಲ್ಕ ಹಾಕಲು ನಿರ್ಧಾರ ಮಾಡಿದೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ.

ಯಾರಿಗೆ UPI ಫೀಸ್?

ಈ ಶುಲ್ಕವು ಕೇವಲ ವ್ಯಾಪಾರಿಗಳಿಗೆ ಮಾತ್ರ ಅನ್ವಯ, ಸಾಮಾನ್ಯ ಗ್ರಾಹಕರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅಂದ್ರೆ, ಎಲ್ಲಾ ವ್ಯಾಪಾರಿಗಳಿಗೂ ಅಲ್ಲ, ಬದಲಾಗಿ, ವಾರ್ಷಿಕ 1 ಕೋಟಿ ರೂಪಾಯಿ ಯಿಂದ 1.5 ಕೋಟಿ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸುವ ದೊಡ್ಡ ವ್ಯಾಪಾರಿಗಳಿಗೆ, ಕಾರ್ಡ್ ಪಾವತಿಗಳ ಮಾದರಿಯಲ್ಲಿಯೇ UPI ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎನ್ನಲಾಗಿದೆ.

ಎಷ್ಟು ಶುಲ್ಕ?

ವರದಿಗಳ ಪ್ರಕಾರ, 2,000 ರೂಪಾಯಿಗಿಂತ ಹೆಚ್ಚಿನ ಮೊತ್ತದ UPI ವಹಿವಾಟುಗಳಿಗೆ ಶೇಕಡಾ 0.5 ಕ್ಕಿಂತ ಕಡಿಮೆ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಯಾರಿಗೆ ವಿನಾಯಿತಿ ಇರಲಿದೆ?

ಬೀದಿ ಬದಿ ವ್ಯಾಪಾರಿಗಳು ಹಾಗೂ ಸಣ್ಣ ಅಂಗಡಿಯವರು ಅಂದ್ರೆ ಶೇ. 90 ರಷ್ಟು ವ್ಯಾಪಾರಿಗಳು ಈ ಶುಲ್ಕದಿಂದ ಹೊರಗುಳಿಯಲಿದ್ದಾರೆ. ಅದ್ರಲ್ಲೂ, 2,000 ರೂ. ಒಳಗಿನ ದಿನಬಳಕೆಯ ಸಣ್ಣ ಪಾವತಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅದ್ರಂತೆ, ನೀವು ಸಾಮಾನ್ಯವಾಗಿ ನಿಮ್ಮ ಸ್ನೇಹಿತರ ಖಾತೆಗೆ ಹಣ ಕಳುಹಿಸುವ ಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿರುತ್ತದೆ.

ಸರ್ಕಾರದ ಈ ಚಿಂತನೆಗೆ ಕಾರಣವೇನು?

ಬ್ಯಾಂಕುಗಳು ಮತ್ತು ಫಿನ್‌ಟೆಕ್ ಸಂಸ್ಥೆಗಳು ಯುಪಿಐ ಮೂಲಸೌಕರ್ಯ ಹಾಗೂ ಭದ್ರತೆಯನ್ನು ನಿರ್ವಹಿಸಲು ಭಾರಿ ವೆಚ್ಚ ಭರಿಸುತ್ತಿವೆ. ಜೊತೆಗೆ ಜನವರಿ 2020 ರಿಂದ ಜಾರಿಯಲ್ಲಿರುವ ಶೂನ್ಯ ಎಂಡಿಆರ್ ನೀತಿಯಿಂದಾಗಿ ಪಾವತಿ ಸೇವಾ ಪೂರೈಕೆದಾರರಿಗೆ ಆದಾಯದ ಕೊರತೆಯಾಗಿದೆ. ಹಾಗಾಗಿ, ಈ ಪ್ರಸ್ತಾವನೆಯ ಕುರಿತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಬ್ಯಾಂಕುಗಳೊಂದಿಗೆ ಅಂತಿಮ ಹಂತದ ಚರ್ಚೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಅಧಿಕೃತ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ 'ಮುಡಾ' ಸಂಕಷ್ಟ: 'ಬಿ' ರಿಪೋರ್ಟ್‌ ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ ED

ಆಗಸ್ಟ್‌ನಲ್ಲಿ ಜಿಎಸ್‌ಟಿ ಸಂಗ್ರಹ 2 ಲಕ್ಷ ಕೋಟಿ ರೂ; ಶೇ.15 ರಷ್ಟು ಹೆಚ್ಚಳ!

ವೃದ್ಧೆಗೆ ದುಬಾರಿ 'ಡಿಯೋರ್' ಬ್ರಾಂಡ್ ನ ಕನ್ನಡಕವನ್ನು ಗಿಫ್ಟ್ ಆಗಿ ನೀಡಿದ ಸಿಎಂ ವಿಜಯ್! Video

ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಸಹಪಾಠಿ ಮೇಲೆ ಹಲ್ಲೆ ಆರೋಪ: ನಟ ದುನಿಯಾ ವಿಜಯ್ ಪುತ್ರನ ವಿರುದ್ಧ ಕೇಸ್

ಅಫ್ಘಾನ್ ವಿರುದ್ಧದ T20 ಸರಣಿಗೆ ಭಾರತ ತಂಡ ಪ್ರಕಟ; ವೈಭವ್ ಸೂರ್ಯವಂಶಿಗೆ ಸ್ಥಾನ; ಬುಮ್ರಾ, ರಾಣಾ ಕಮ್​ಬ್ಯಾಕ್!