ಫ್ಲಾಟ್  Online Desk
ವಾಣಿಜ್ಯ

ಕಡಿಮೆ ರೇಟ್‌ಗೆ ಸಿಗುತ್ತೆ ಅಂತ ಫ್ಲಾಟ್ ಆಸೆಗೆ ಬೀಳ್ತಿದ್ದೀರಾ? ಅಗ್ಗದ ಚಕ್ರದಲ್ಲಿ ಸಿಲುಕಿದ್ರೆ ಮುಂದೆ ಲಕ್ಷ ಲಕ್ಷ ನಷ್ಟ! ಖರೀದಿಸುವ ಮುನ್ನ ಈ ವಿಷಯ ಚೆಕ್ ಮಾಡಿ

ಸರ್, ಮಾರ್ಕೆಟ್‌ಗಿಂತ 6 ಲಕ್ಷ ಕಡಿಮೆ ಇದೆ. ಇದು ಈ ತಿಂಗಳ ಆಫರ್ ಮಾತ್ರ! ಅಂತ ಬಿಲ್ಡರ್‌ನ ಈ ಮಾತು ಕೇಳಿ ಖುಷಿಯಾಗಿ ಅಡ್ವಾನ್ಸ್ ಕೊಟ್ಟಿದ್ದೀರಾ? ಹಾಗಾದ್ರೆ, ಈ ಸುದ್ದಿ ನಿಮಗಾಗಿ. ಯಾಕಂದ್ರೆ, ಕಡಿಮೆ ರೇಟ್ ಫ್ಲಾಟ್ ಹೆಸರಿನಲ್ಲಿ ನಡೆಯುವ ಮೋಸ ಹೋಗೋ ಮುನ್ನ ಈ ವಿಷಯಗಳನ್ನು ಖಂಡಿತ ಚೆಕ್ ಮಾಡಿಕೊಳ್ಳಿ...

Flat Buying Guide: ಬೆಂಗಳೂರು, ಪುಣೆ, ಹೈದರಾಬಾದ್ ಎಲ್ಲೆಡೆ ಒಂದೇ ಮಾತು. "ಸರ್ ನಮ್ಮದು ಪ್ರಿ-ಲಾಂಚ್ ಆಫರ್. ಮಾರ್ಕೆಟ್ ರೇಟ್‌ಗಿಂತ 7 ಲಕ್ಷ ಕಡಿಮೆ ಇದೆ. ಇವತ್ತು ಬುಕ್ ಮಾಡಿದ್ರೆ ಮಾತ್ರ ಈ ರೇಟ್."ಈ ಒಂದು ವಾಕ್ಯ ಕೇಳಿದ ತಕ್ಷಣ ನಮ್ಮ ಕಣ್ಣು ಮಿನುಗುತ್ತೆ. ಮನಸ್ಸು ಲೆಕ್ಕ ಹಾಕೋಕೆ ಶುರು ಮಾಡುತ್ತೆ. ತಿಂಗಳಿಗೆ 5 ಸಾವಿರ EMI ಕಡಿಮೆ ಆಗುತ್ತಲ್ಲಾ ಅಂತ. ಆದ್ರೆ ಸ್ವಲ್ಪ ನಿಂತು ಯೋಚಿಸಿ. ಸಿಮೆಂಟ್, ಸ್ಟೀಲ್, ಜಮೀನು, ಲೇಬರ್ ಎಲ್ಲಾ ಬಿಲ್ಡರ್‌ಗೂ ಒಂದೇ ದರ ಇದ್ದಾಗ, ಒಬ್ಬರು ಮಾತ್ರ ಅಷ್ಟು ಕಡಿಮೆಗೆ ಯಾಕೆ ಕೊಡ್ತಿದ್ದಾರೆ?ಅಗ್ಗದ ಫ್ಲಾಟ್‌ನ ಹಿಂದೆ ಇರೋದು ಆಫರ್ ಅಲ್ಲ, ಬಲೆ. ಮತ್ತು ಈ ಬಲೆಗೆ ಬಿದ್ದು 20 ವರ್ಷ EMI ಕಟ್ಟಿ ಕೊನೆಗೆ ಕೋರ್ಟ್ ಮೆಟ್ಟಿಲೇರಿದ ಕುಟುಂಬಗಳು ನೂರಾರು ಇವೆ. ಹಾಗಾಗಿ, ₹5 ಲಕ್ಷ ಉಳಿಸುವ ಆಸೆಯಲ್ಲಿ ಮುಂದೆ ₹20 ಲಕ್ಷ ನಷ್ಟ ಮಾಡಿಕೊಳ್ಳಬೇಡಿ. ಅದರಂತೆ, ಫ್ಲಾಟ್ ಖರೀದಿಸುವ ಮುನ್ನ ಈ ವಿಷಯಗಳನ್ನು ಖಂಡಿತ ಚೆಕ್ ಮಾಡಿಕೊಳ್ಳಿ...

RERA ರಿಜಿಸ್ಟ್ರೇಷನ್ ಇದೆಯಾ?

ಮೊದಲನೆಯದಾಗಿ ಯೋಜನೆಯ ರೇರಾ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಸರ್ಕಾರಿ ರೇರಾ ವೆಬ್‌ಸೈಟ್‌ನಲ್ಲಿ ಕಟ್ಟಡ ನಿರ್ಮಾಣದ ವಿವರ, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಯೋಜನೆ ಪೂರ್ಣಗೊಳ್ಳುವ ದಿನಾಂಕದ ಮಾಹಿತಿ ಸಿಗುತ್ತದೆ. ಇದು ನಿಮ್ಮ ಹೂಡಿಕೆಗೆ ಸುರಕ್ಷತೆಯನ್ನು ಒದಗಿಸುತ್ತದೆ. ಅದರಂತೆ, RERA ಇಲ್ಲದ ಪ್ರಾಜೆಕ್ಟ್‌ನಲ್ಲಿ 1 ರೂಪಾಯಿ ಕೂಡ ಕೊಡಬೇಡಿ.

ಎರಡನೆಯದಾಗಿ ಸ್ಥಳೀಯ ಸಂಸ್ಥೆಗಳಿಂದ ಸಿಗುವ ಖಾತಾ ಮತ್ತು ಟೈಟಲ್ ಡೀಡ್ ಪರಿಶೀಲನೆ ಅತ್ಯಂತ ಪ್ರಮುಖ. ಬೆಂಗಳೂರಿನಂತಹ ನಗರಗಳಲ್ಲಿ ಎ ಖಾತಾ ಹೊಂದಿರುವ ಆಸ್ತಿಗಳಿಗೆ ಮಾತ್ರ ಕಾನೂನುಬದ್ಧ ಆದ್ಯತೆ ಸಿಗುತ್ತದೆ. ಬಿ ಖಾತಾ ಅಥವಾ ಸರಿಯಾದ ಮಾಲೀಕತ್ವದ ಹಕ್ಕು ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಬ್ಯಾಂಕ್ ಸಾಲ ಪಡೆಯಲು ಮತ್ತು ಮನೆ ಮಾರಾಟ ಮಾಡಲು ತೊಂದರೆಯಾಗುತ್ತದೆ.

ಮೂರನೆಯ ಪ್ರಮುಖ ಅಂಶವೆಂದರೆ ಸಿಸಿ ಅಂದರೆ ಕಮೆನ್ಸ್‌ಮೆಂಟ್ ಸರ್ಟಿಫಿಕೇಟ್ ಮತ್ತು ಓಸಿ ಅಂದರೆ ಅಕ್ಯುಪೆನ್ಸಿ ಸರ್ಟಿಫಿಕೇಟ್. ನಿಯಮಾವಳಿಗಳ ಪ್ರಕಾರವೇ ಕಟ್ಟಡ ನಿರ್ಮಿಸಲಾಗಿದೆ ಎಂಬುದಕ್ಕೆ ಸಿಸಿ ಸಾಕ್ಷಿಯಾದರೆ, ಕಾಮಗಾರಿ ಪೂರ್ಣಗೊಂಡ ನಂತರ ಅದು ವಾಸಿಸಲು ಯೋಗ್ಯವಾಗಿದೆ ಎಂದು ನೀಡುವ ಪತ್ರವೇ ಓಸಿ. ಓಸಿ ಇಲ್ಲದ ಕಟ್ಟಡಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯುವುದು ಕಷ್ಟವಾಗುತ್ತದೆ.

ನಾಲ್ಕನೆಯದಾಗಿ ಆಸ್ತಿಯ ಮೇಲೆ ಯಾವುದೇ ಹಳೆಯ ಸಾಲ ಅಥವಾ ಕೋರ್ಟ್ ಕೇಸ್‌ಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ ಮೂವತ್ತು ವರ್ಷಗಳ ಋಣಭಾರ ಪ್ರಮಾಣಪತ್ರವನ್ನು ಪರಿಶೀಲಿಸಬೇಕು.

ಅಂತಿಮವಾಗಿ ಬಿಲ್ಡರ್‌ಗಳು ನೀಡುವ ಸೂಪರ್ ಬಿಲ್ಟ್ ಅಪ್ ಏರಿಯಾ ಬದಲು ನಿಮಗೆ ನಿಜವಾಗಿ ವಾಸಿಸಲು ಸಿಗುವ ಕಾರ್ಪೆಟ್ ಏರಿಯಾವನ್ನು ಲೆಕ್ಕ ಹಾಕಿ ಬೆಲೆಯನ್ನು ಹೋಲಿಕೆ ಮಾಡುವುದು ಸೂಕ್ತ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕಕ್ಕೆ CWRC ನಂತರ CWMA ಶಾಕ್; ತಮಿಳುನಾಡಿಗೆ 3500 ಕ್ಯೂಸೆಕ್ ನೀರು ಹರಿಸುವಂತೆ ಕಟ್ಟುನಿಟ್ಟಿನ ಸೂಚನೆ

'ನಾನು ಬದುಕಬೇಕು, ಸಾಯೋದಕ್ಕೆ ಇಷ್ಟ ಇಲ್ಲ': ಕೃಷಿ ತಾಪಂಡ ವಿಚಾರದಲ್ಲಿ ಮೌನ ಮುರಿದ ಅರವಿಂದ್ ರೆಡ್ಡಿ; ಶಾಕಿಂಗ್ ಹೇಳಿಕೆ

ಕಾವೇರಿ ನೀರಿನ ವಿವಾದ: ಭಾನುವಾರ ಸರ್ವಪಕ್ಷ ಸಭೆ ಕರೆದ ಸಿಎಂ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳು, ಸಂಸದರು, ಶಾಸಕರಿಗೆ ಆಹ್ವಾನ!

ರೈಲಿನ ಮೇಲೆ ಬಿದ್ದ 11,000 ವೋಲ್ಟ್ ವಿದ್ಯುತ್ ತಂತಿ, ಶಾರ್ಟ್ ಸರ್ಕ್ಯೂಟ್; ಓಡಿದ ಪ್ರಯಾಣಿಕರು, Video Viral

ಮಂಡ್ಯದಲ್ಲಿ ಕಾವೇರಿ ಪ್ರತಿಭಟನೆ ತೀವ್ರ: ಸಿಎಂ ವಿಜಯ್ ನಟನೆಯ 'ಜನ ನಾಯಗನ್' ಪ್ರದರ್ಶನ ಸ್ಥಗಿತ!