ಪಾವೆಲ್ ಡುರೊವ್ 
ವಾಣಿಜ್ಯ

ಭಾರತದಲ್ಲಿ Telegram ನಿಷೇಧಿಸಲು ರಿಲಯನ್ಸ್, ವಾಟ್ಸಾಪ್ ಲಾಬಿ: ಟೆಲಿಗ್ರಾಮ್ ಸಿಇಒ ಗಂಭೀರ ಆರೋಪ

ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG 2026 ಪ್ರಶ್ನೆಪತ್ರಿಕೆ ಲೀಕ್ ತಡೆಯಲು ವಿಫಲವಾಗಿದ್ದ ಮೋದಿ ಸರ್ಕಾರ, ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಮ್’ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿದೆ.

ಮೆಟಾದಲ್ಲಿ ಭಾಗಶಃ ಪಾಲನ್ನು ಹೊಂದಿರುವ ರಿಲಯನ್ಸ್ ಗ್ರೂಪ್ ಮತ್ತು ವಾಟ್ಸಾಪ್ ಭಾರತದಲ್ಲಿ ತಮ್ಮ ಟೆಲಿಗ್ರಾಮ್ ಅಪ್ಲಿಕೇಶನ್ ಮೇಲೆ ನಿಷೇಧ ಹೇರಲು ಲಾಬಿ ನಡೆಸಿದ್ದಾರೆ ಎಂದು ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG 2026 ಪ್ರಶ್ನೆಪತ್ರಿಕೆ ಲೀಕ್ ತಡೆಯಲು ವಿಫಲವಾಗಿದ್ದ ಮೋದಿ ಸರ್ಕಾರ, ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಮ್’ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿದೆ.

ಟೆಲಿಗ್ರಾಮ್ ನಿರ್ಬಂಧಕ್ಕೆ ಆಕ್ರೋಶಗೊಂಡಿರುವ ಟೆಲಿಗ್ರಾಮ್ ಸಿಇಒ, ಭಾರತದ ಹೊರಗಿನ(ಯುಎಇ ಸೇರಿದಂತೆ) ಲಕ್ಷಾಂತರ ಬಳಕೆದಾರರಿಗೆ ಟೆಲಿಗ್ರಾಮ್ ಪ್ರವೇಶವನ್ನು ರಿಲಯನ್ಸ್ ಹಾಳುಮಾಡುತ್ತಿದೆ ಎಂದು ದೂರಿದ್ದಾರೆ.

ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಡುರೊವ್, BGP ಹೈಜಾಕಿಂಗ್ ಎಂಬ ತಂತ್ರದ ಮೂಲಕ ಟೆಲಿಗ್ರಾಮ್‌ನ ಸಂಪರ್ಕಕ್ಕೆ ಅಡ್ಡಿಪಡಿಸಲು ರಿಲಯನ್ಸ್ ಕಮ್ಯುನಿಕೇಷನ್ಸ್ ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

"ಭಾರತೀಯ ಟೆಲಿಕಾಂ ರಿಲಯನ್ಸ್, BGP ಹೈಜಾಕಿಂಗ್ ಎಂಬ ರಾಕ್ಷಸ ವಿಧಾನದ ಮೂಲಕ ಭಾರತದ ಹೊರಗಿನ(ಯುಎಇ ಸೇರಿದಂತೆ) ಲಕ್ಷಾಂತರ ಬಳಕೆದಾರರಿಗೆ ಟೆಲಿಗ್ರಾಮ್ ಪ್ರವೇಶವನ್ನು ಹಾಳು ಮಾಡುತ್ತಿದೆ ಎಂದಿದ್ದಾರೆ.

ರಿಲಯನ್ಸ್ ಹಲವು ವರದಿಗಳನ್ನು ನಿರ್ಲಕ್ಷಿಸಿರುವುದರಿಂದ ಈ ವಿಧ್ವಂಸಕ ಕೃತ್ಯ ಉದ್ದೇಶಪೂರ್ವಕವಾಗಿದೆ ಎಂದು ಡುರೊವ್ ಆರೋಪಿಸಿದ್ದಾರೆ.

ಇದು ಸ್ಪರ್ಧಾತ್ಮಕ ಯುದ್ಧದ ಭಾಗವಾಗಿರಬಹುದು. ಏಕೆಂದರೆ ರಿಲಯನ್ಸ್ ಭಾಗಶಃ ವಾಟ್ಸಾಪ್‌ನ ಹಿಂದಿನ ಕಂಪನಿಯಾದ ಮೆಟಾದ ಒಡೆತನದಲ್ಲಿದೆ" ಎಂದು ಡುರೊವ್ ಹೇಳಿದ್ದಾರೆ.

ಭಾರತದಲ್ಲಿ ಟೆಲಿಗ್ರಾಮ್ ವಿರುದ್ಧದ ಇತ್ತೀಚಿನ ಕ್ರಮಗಳ ಹಿಂದೆಯೂ ಇದೇ ಸಂಸ್ಥೆಗಳ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ.

"ಜಾಗತಿಕ ಇಂಟರ್ನೆಟ್ ರೂಟಿಂಗ್‌ನ ಇಂತಹ ದುರುಪಯೋಗ ಆತಂಕಕಾರಿಯಾಗಿದೆ. ಭಾರತದಲ್ಲಿ ಟೆಲಿಗ್ರಾಮ್ ಅನ್ನು ನಿಷೇಧಿಸುವ ಇತ್ತೀಚಿನ ಲಾಬಿ ಪ್ರಯತ್ನದ ಹಿಂದೆ ರಿಲಯನ್ಸ್/ವಾಟ್ಸಾಪ್ ಕೂಡ ಇದ್ದರೆ ನನಗೆ ಆಶ್ಚರ್ಯವಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ನೀರು ಹಂಚಿಕೆ: ತಮಿಳುನಾಡು ಅರ್ಜಿಯನ್ನು ಸುಪ್ರೀಂನಲ್ಲಿ ಪ್ರಶ್ನಿಸಲು ಅಧಿಕಾರಿಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ನಿರ್ದೇಶನ

ಸಂಪುಟ ವಿಸ್ತರಣೆಯಲ್ಲಿ ಬಿಗ್ ಟ್ವಿಸ್ಟ್: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರು; ಕೊನೆ ಕ್ಷಣದಲ್ಲಿ ಒಬ್ಬರಿಗೆ ಕೊಕ್!

ಭಾವೋದ್ವೇಗಕ್ಕೆ ಒಳಗಾಗಿ ರಾಜೀನಾಮೆ ನೀಡಬೇಡಿ: ಪಕ್ಷ ನಿಮ್ಮ ಸೇವೆ ಮರೆಯಲ್ಲ; ಅಸಮಾಧಾನಿತ ಶಾಸಕರಿಗೆ ಬಿ.ಕೆ ಹರಿಪ್ರಸಾದ್ ಮನವಿ

ಕಾಂಗ್ರೆಸ್‌ ಲೆಟರ್‌ಹೆಡ್‌ನಲ್ಲಿ ಸ್ಪೀಕರ್‌ ಹೆಸರು; ಮತ್ತೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ: ಸುರೇಶ್‌ ಕುಮಾರ್‌ ಕಿಡಿ

Gen Zಗಳಿಗೆ ಗುಡ್ ನ್ಯೂಸ್; ಪ್ರತಿಭಟನಾಕಾರರ ವಿರುದ್ಧದ ಪ್ರಕರಣ ಹಿಂಪಡೆದ ಗುಜರಾತ್ ಸರ್ಕಾರ