ಪ್ರಧಾನಿ ಮೋದಿ ಭೇಟಿ ಮಾಡಿದ ಅಮೆಜಾನ್ ಸಿಇಒ ಆಂಡಿ ಜಾಸ್ಸಿ 
ವಾಣಿಜ್ಯ

ಪ್ರಧಾನಿ ಮೋದಿ ಭೇಟಿ ಮಾಡಿದ Amazon CEO; ಭಾರತದಲ್ಲಿ ಹೆಚ್ಚುವರಿಯಾಗಿ 13 ಬಿಲಿಯನ್ ಡಾಲರ್ ಹೂಡಿಕೆ

"ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಅವರು ಇಂದು ಬೆಳಗ್ಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.

ನವದೆಹಲಿ: ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು, 2030ರ ವೇಳೆಗೆ AI ಮತ್ತು ಕ್ಲೌಡ್ ಮೂಲಸೌಕರ್ಯವನ್ನು ವಿಸ್ತರಿಸಲು ಭಾರತದಲ್ಲಿ ಹೆಚ್ಚುವರಿಯಾಗಿ 13 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.

ಭಾರತಕ್ಕೆ ಅಮೆಜಾನ್‌ನ ದೀರ್ಘಕಾಲೀನ ಬದ್ಧತೆಯನ್ನು ಪುನರುಚ್ಚರಿಸಿದ ಜಾಸ್ಸಿ, ಹೊಸ ಹೂಡಿಕೆ ಶ್ರೇಣಿಯು 2026 ಮತ್ತು 2030 ರ ನಡುವೆ ಭಾರತದಲ್ಲಿ ಅಮೆಜಾನ್‌ನ ಒಟ್ಟು ಬಂಡವಾಳ ಹೂಡಿಕೆಯನ್ನು 48 ಶತಕೋಟಿ ಡಾಲರ್‌ಗೆ ತಲುಪಲಿದೆ ಎಂದು ಹೇಳಿದ್ದಾರೆ.

"ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಅವರು ಇಂದು ಬೆಳಗ್ಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.

ಭಾರತಕ್ಕೆ ಅಮೆಜಾನ್‌ನ ದೀರ್ಘಕಾಲೀನ ಬದ್ಧತೆಯನ್ನು ಜಾಸ್ಸಿ ಪುನರುಚ್ಚರಿಸಿದರು ಮತ್ತು 2030 ರ ವೇಳೆಗೆ ದೇಶದಲ್ಲಿ AI ಮತ್ತು ಕ್ಲೌಡ್ ಮೂಲಸೌಕರ್ಯವನ್ನು ವಿಸ್ತರಿಸಲು ಹೆಚ್ಚುವರಿಯಾಗಿ 13 ಶತಕೋಟಿ ಡಾಲರ್ ಹೂಡಿಕೆ ಮಾಡುವ ಯೋಜನೆಗಳನ್ನು ಘೋಷಿಸಿದರು" ಎಂದು ಅಮೆಜಾನ್ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಅಮೆಜಾನ್‌ ಸಿಇಒ ಭೇಟಿ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ಆ್ಯಂಡಿ ಜಾಸ್ಸಿಅವರೊಂದಿಗಿನ ಭೇಟಿ ಉತ್ತಮವಾಗಿತ್ತು.

ಭಾರತದಲ್ಲಿ ಅಮೆಜಾನ್‌ನ ದಾಖಲೆಯ 48 ಬಿಲಿಯನ್ ಡಾಲರ್‌ ಹೂಡಿಕೆಯನ್ನು ನಾನು ಸ್ವಾಗತಿಸುತ್ತೇನೆ. ಇದು ನಮ್ಮ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಅದೇ ಸಮಯದಲ್ಲಿ, ಭಾರತದಲ್ಲಿ ಹೂಡಿಕೆ ಮಾಡಲು ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಆಸಕ್ತಿಯ ಮೇಲೆ ಇದು ಬೆಳಕು ಚೆಲ್ಲುತ್ತದೆ" ಎಂದು ಹೇಳಿದ್ದಾರೆ.

ಅಮೆಜಾನ್‌ ಭಾರತದಲ್ಲಿ ಅತಿದೊಡ್ಡ ಜಾಗತಿಕ AI ಮತ್ತು ಕ್ಲೌಡ್ ಮೂಲಸೌಕರ್ಯ ಹೂಡಿಕೆದಾರನಾಗುವತ್ತ ದಾಪುಗಲು ಇಟ್ಟಿದೆ. ಈ ಹೂಡಿಕೆಯು ಮುಂಬೈ ಮತ್ತು ಹೈದರಾಬಾದ್‌ನಲ್ಲಿ AWS ಡೇಟಾ ಸೆಂಟರ್ ಸಾಮರ್ಥ್ಯವನ್ನು ವಿಸ್ತರಿಸುತ್ತದೆ. ಸ್ಟಾರ್ಟ್‌ಅಪ್‌ಗಳು, ಉದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಕಸ್ಟಮ್ AI ಚಿಪ್‌ಗಳು, ನಿರ್ವಹಿಸಿದ AI ಸೇವೆಗಳು, ಸುರಕ್ಷಿತ ಮತ್ತು ವಿಶ್ವಾಸಾರ್ಹ ಕ್ಲೌಡ್ ತಂತ್ರಜ್ಞಾನಗಳು ಮತ್ತು ಡೆವಲಪರ್ ಪರಿಕರಗಳಿಗೆ ಪ್ರವೇಶವನ್ನು ನೀಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ: ಮುನಿಯಪ್ಪಗೆ ಸಮಾಜಕಲ್ಯಾಣ, ಜಮೀರ್ – ವಸತಿ ಖಾತೆ?

ಮಳೆ ಕೊರತೆ, ಬಿತ್ತನೆ ವೈಫಲ್ಯ: ರಾಜ್ಯದಲ್ಲಿ 50 ಲಕ್ಷ ಟನ್ ಆಹಾರ ಧಾನ್ಯ ನಷ್ಟದ ಭೀತಿ

ಮಿಸ್ ಆಯ್ತು ಸಚಿವ ಸ್ಥಾನ; ‘ಶಕ್ತಿ ಪ್ರದರ್ಶನ’ಕ್ಕೆ ಸಜ್ಜಾದ ಸಿದ್ದರಾಮಯ್ಯ ಆಪ್ತರು! ಮೈಸೂರಿನಲ್ಲಿ ‘ಅಸಮಾಧಾನ’ ಸಭೆ!

ಸರ್ಕಾರದಿಂದ ಮಹತ್ವದ ಆದೇಶ: ಕರ್ನಾಟಕದಲ್ಲಿ ಗುಟ್ಕಾ, ತಂಬಾಕು ಪಾನ್ ಮಸಾಲಾ ಬ್ಯಾನ್

'ನಾನೇ ಲಾಸ್ಟ್, ಇನ್ನು ಇರಾನ್ ನಂಬಲ್ಲ, ಹಾರ್ಮುಜ್ ಅಮೆರಿಕ ನಿಯಂತ್ರದಣದಲ್ಲಿದೆ': Donald Trump