ಸಾಂದರ್ಭಿಕ ಚಿತ್ರ 
ವಾಣಿಜ್ಯ

ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್: ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ!

ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಕಾರ್ಮೋಡ ಸರಿದ ಬಳಿಕ ಚಿನ್ನ ಹಾಗೂ ಬೆಳ್ಳಿ ದರ ಇಳಿಕೆಯತ್ತ ಮುಖ ಮಾಡಿದ್ದು, ಗುರುವಾರ ಬಂಗಾರದ ಬೆಲೆ ಮತ್ತೆ ಭಾರೀ ಇಳಿಕೆಯಾಗಿದೆ.

ಮುಂಬೈ: ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ದರ ಇದೀಗ ಮತ್ತೆ ಕುಸಿತದ ಹಾದಿ ಹಿಡಿದಿದ್ದು, ಕಳೆದೊಂದು ವಾರದಿಂದ ಭಾರತದಲ್ಲಿ ಬಂಗಾರದ ಬೆಲೆ ಭಾರೀ ಇಳಿಕೆಯಾಗಿದೆ.

ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಕಾರ್ಮೋಡ ಸರಿದ ಬಳಿಕ ಚಿನ್ನ ಹಾಗೂ ಬೆಳ್ಳಿ ದರ ಇಳಿಕೆಯತ್ತ ಮುಖ ಮಾಡಿದ್ದು, ಗುರುವಾರ ಬಂಗಾರದ ಬೆಲೆ ಮತ್ತೆ ಭಾರೀ ಇಳಿಕೆಯಾಗಿದೆ.

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು MCX ನಲ್ಲಿ ಸತತ ಎರಡನೇ ವಹಿವಾಟಿನಲ್ಲೂ ನಷ್ಟವನ್ನು ಅನುಭವಿಸಿದ್ದು, ಕಳೆದ ಒಂದು ವಾರದಲ್ಲಿ ಚಿನ್ನ 10 ಗ್ರಾಂ ಗೆ 5 ಸಾವಿರ ರೂ. ನಷ್ಟು ಇಳಿಕೆಯಾಗಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಇಂದು 14,030 ರೂ. ಇದೆ. ಇನ್ನೂ 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಗೆ ಇಂದು 12,845 ರೂ. ಇದೆ.

ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಬರೋಬ್ಬರಿ 2,780 ರೂ. ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಬಂಗಾರದ ದರ 14,01,300 ರೂ. ತಲುಪಿದ್ದು, ಒಂದೇ ದಿನದಲ್ಲಿ 27,800 ರೂ. ಇಳಿಕೆಯಾಗಿದೆ.

ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆ ಇಳಿಕೆ ಎಷ್ಟಾಗಿದೆ?

ದಿನಾಂಕ – 24 ಕ್ಯಾರೆಟ್ – 22 ಕ್ಯಾರೆಟ್.

– ಜೂನ್ 20 : 14,608 ರೂ. – 13,390 ರೂ.

– ಜೂನ್ 21 : 14,608 ರೂ. – 13,390 ರೂ.

– ಜೂನ್ 22: 14,798 ರೂ. – 13,565 ರೂ.

– ಜೂನ್ 23: 14,460 ರೂ. – 13,255 ರೂ.

– ಜೂನ್ 24 : 14,291 ರೂ. – 13,100 ರೂ.

– ಜೂನ್ 25 : 14,013 ರೂ. – 12,846 ರೂ.

ಇನ್ನೂ ಬೆಳ್ಳಿ ದರದಲ್ಲೂ ಇಳಿಕೆಯ ನಾಗಲೋಟ ಮುಂದುವರಿದಿದೆ. ಕಳೆದೊಂದು ವಾರದಲ್ಲಿ ಕೆಜಿ ಬೆಳ್ಳಿಗೆ 15 ಸಾವಿರ ರೂ.ಗಳಷ್ಟು ಇಳಿಕೆಯಾಗಿದೆ. ಕೆಜಿ ಬೆಳ್ಳಿಗೆ 2 ಲಕ್ಷದ 35 ಸಾವಿರ ಇದ್ದು, ಇಂದು ಒಂದೇ ದಿನ 10 ಸಾವಿರ ಇಳಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ನನ್ನನ್ನು ಅಸ್ಪೃಶ್ಯನಂತೆ ಕಂಡು ಶುದ್ಧೀಕರಣ ಮಾಡಿದರು’: ಬಿಜೆಪಿ ವಿರುದ್ಧ Mallikarjun Kharge ಕಿಡಿ, ನಡ್ಡಾ ಪ್ರತಿಕ್ರಿಯೆ

ಕೆಂಪುಕೋಟೆ ದಾಳಿ ಹಿಂದೆ ಅಲ್-ಖೈದಾ ಕೈವಾಡ; ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವರದಿಯಲ್ಲಿ ಅಧಿಕೃತ ಉಲ್ಲೇಖ...!

Karnataka Bandh-ಮಂಡ್ಯ, ಮೈಸೂರು ಭಾಗಗಳಲ್ಲಿ ಉತ್ತಮ ಸ್ಪಂದನೆ: ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ-Video

ಗದ್ದಲದ ನಡುವೆಯೇ ಸಂಸತ್ ಮುಂಗಾರು ಅಧಿವೇಶನಕ್ಕೆ ತೆರೆ; Lok Sabha-Rajya Sabha ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

'ಯುವಕನಾಗಿ ಭಾರತ ತಂಡಕ್ಕೆ ಬಂದಾಗ'; ಗೌತಮ್ ಗಂಭೀರ್ 'Bohot Badhiya Banda' ಆದರೆ...: ಹರ್ಭಜನ್ ಸಿಂಗ್