ಪೆಟ್ರೋಲ್ ಡೀಸೆಲ್ ದರ ಏರಿಕೆ 
ವಾಣಿಜ್ಯ

ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಹೆಚ್ಚಳ: 10 ದಿನಗಳಲ್ಲಿ 3ನೇ ಬಾರಿ ತೈಲ ದರ ಏರಿಕೆ!

ಮೇ 15 ರಿಂದ ಇತ್ತೀಚೆಗೆ ತೈಲ ದರ ಪರಿಷ್ಕರಣೆ ಆರಂಭವಾದ ಬಳಿಕ ಇದು ಅತ್ಯಲ್ಪ ದಿನಗಳಲ್ಲಿ ನಡೆದಿರುವ ಮೂರನೇ ಸರಣಿ ಹೆಚ್ಚಳವಾಗಿದೆ.

ನವದೆಹಲಿ: ದೇಶದಲ್ಲಿ ವಾಹನ ಸವಾರರಿಗೆ ಮತ್ತೊಮ್ಮೆ ಇಂಧನ ದರ ಏರಿಕೆಯ ಬಿಸಿ ತಟ್ಟಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿಯೇ ಇಂಧನ ಕಂಪನಿಗಳು ಮೂರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಳ ಮಾಡಿದ್ದು, ಶನಿವಾರದಂದು ಪ್ರತಿ ಲೀಟರ್ ಇಂಧನ ಬೆಲೆಯಲ್ಲಿ ಗರಿಷ್ಠ 91 ಪೈಸೆವರೆಗೆ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 87 ಪೈಸೆ ಹೆಚ್ಚಳವಾಗುವುದರೊಂದಿಗೆ 98.64 ರೂಪಾಯಿಯಿಂದ 99.51 ರೂಪಾಯಿಗೆ ತಲುಪಿದೆ. ಅದೇ ರೀತಿ, ಡೀಸೆಲ್ ಬೆಲೆಯು ಲೀಟರ್‌ಗೆ 91 ಪೈಸೆ ಏರಿಕೆಯಾಗಿದ್ದು, 91.58 ರೂಪಾಯಿಯಿಂದ 92.49 ರೂಪಾಯಿಗೆ ಜಿಗಿದಿದೆ.

ಮೇ 15 ರಿಂದ ಇತ್ತೀಚೆಗೆ ತೈಲ ದರ ಪರಿಷ್ಕರಣೆ ಆರಂಭವಾದ ಬಳಿಕ ಇದು ಅತ್ಯಲ್ಪ ದಿನಗಳಲ್ಲಿ ನಡೆದಿರುವ ಮೂರನೇ ಸರಣಿ ಹೆಚ್ಚಳವಾಗಿದೆ.

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ತೀವ್ರವಾಗಿ ಏರುತ್ತಿವೆ. ಇದರ ಪರಿಣಾಮವಾಗಿ ಉಂಟಾಗಿರುವ ತೈಲ ಬೆಲೆ ಏರಿಕೆಯ ಹೊರೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹಂತಹಂತವಾಗಿ ಗ್ರಾಹಕರಿಗೆ ವರ್ಗಾಯಿಸಲು ಆರಂಭಿಸಿವೆ.

ಇದಕ್ಕೂ ಮುನ್ನ, ಮೇ 15 ರಂದು ಮೊದಲ ಬಾರಿಗೆ ಲೀಟರ್‌ಗೆ ಒಮ್ಮೆಗೆ 3 ರೂಪಾಯಿ ಹಾಗೂ ಮೇ 19 ರಂದು ಎರಡನೇ ಬಾರಿಗೆ 90 ಪೈಸೆ ಹೆಚ್ಚಿಸಲಾಗಿತ್ತು.

ಪ್ರಸ್ತುತ ಶನಿವಾರದ ಏರಿಕೆಯನ್ನೂ ಒಳಗೊಂಡಂತೆ ಒಟ್ಟಾರೆಯಾಗಿ ಕಳೆದ 10 ದಿನಗಳಲ್ಲಿ ಇಂಧನ ದರಗಳು ಪ್ರತಿ ಲೀಟರ್‌ಗೆ ಸುಮಾರು 5 ರೂಪಾಯಿಯಷ್ಟು ದುಬಾರಿಯಾದಂತಾಗಿದೆ.

ತೈಲ ಬೆಲೆಗಳ ನಿರಂತರ ಏರಿಕೆಯ ಬೆನ್ನಲ್ಲೇ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಇತ್ತೀಚೆಗಷ್ಟೇ ನಾಗರಿಕರಲ್ಲಿ ಪ್ರಮುಖ ಮನವಿಯೊಂದನ್ನು ಮಾಡಿದ್ದರು.

ಭಾರತದ ತೈಲ ಆಮದು ವೆಚ್ಚವನ್ನು ತಗ್ಗಿಸಲು ಮತ್ತು ವಿದೇಶಿ ವಿನಿಮಯ ಮೀಸಲು ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುವಂತೆ ಹಾಗೂ ಸಾಧ್ಯವಿರುವ ಉದ್ಯೋಗಿಗಳು 'ವರ್ಕ್ ಫ್ರಮ್ ಹೋಮ್' (ಮನೆಯಿಂದಲೇ ಕೆಲಸ) ಆಯ್ಕೆ ಮಾಡಿಕೊಳ್ಳುವ ಮೂಲಕ ಇಂಧನ ಬಳಕೆಯನ್ನು ನಿಯಂತ್ರಿಸಲು ದೇಶದ ಜನತೆಗೆ ಕರೆ ನೀಡಿದ್ದರು. ಜಾಗತಿಕ ಮಾರುಕಟ್ಟೆಯ ಏರಿಳಿಕಯಾಗುತ್ತಿದ್ದು, ಯುದ್ಧದ ಕಾರ್ಮೋಡ ಇನ್ನು ಸರಿದಿಲ್ಲದ ಕಾರಣ ಸದ್ಯಕ್ಕೆ ಇಂಧನ ದರ ಇಳಿಕೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಯನಾಡು: ಭೂ ಕುಸಿತದ ರಭಸಕ್ಕೆ ಕೊಚ್ಚಿ ಬಂದ ಟ್ಯಾಂಕರ್! ನದಿಗೆ ಬಿದ್ದ ಖಾಸಗಿ ಬಸ್, ಮೂವರು ಸಾವು, ಏಳು ಮಂದಿಗೆ ಗಾಯ, ಭಯಾನಕ Video

ಕ್ರೌರ್ಯಕ್ಕಿಂತ ಲೈಂಗಿಕತೆ ಹೆಚ್ಚು ಸಮಸ್ಯೆಯಾಗಿದೆ: ‘ಟಾಕ್ಸಿಕ್’ ಟೀಸರ್ ಕುರಿತ ಟೀಕೆಗೆ ಹಾಲಿವುಡ್ ನಟ ಹೇಳಿದ್ದೇನು?

ಟೀಂ ಇಂಡಿಯಾಗೆ ಸಾಲು ಸಾಲು ಸೋಲು: ಜಿಂಬಾಬ್ವೆ ಸರಣಿಯಿಂದ ಮುಖ್ಯ ಕೋಚ್ ಗೌತಮ್ ಗಂಭೀರ್‌ರನ್ನೇ ಹೊರಗಿಟ್ಟ BCCI!

ಮಾರಣಾಂತಿಕ ಕಾಯಿಲೆ: 38ನೇ ವಯಸ್ಸಿಗೆ ಖ್ಯಾತ ಕ್ರಿಕೆಟಿಗನ ಸಾವು!

20 ವರ್ಷಗಳಲ್ಲೇ ಮೊದಲ ಬಾರಿಗೆ ಕಚ್ಚಾ ತೈಲ ಬೆಲೆ ಭಾರೀ ಕಡಿತಗೊಳಿಸಿದ ಸೌದಿ ಅರೇಬಿಯಾ; ಭಾರತಕ್ಕೆ ಬಂಪರ್‌!