20 ವರ್ಷಗಳಲ್ಲೇ ಮೊದಲ ಬಾರಿಗೆ ಕಚ್ಚಾ ತೈಲ ಬೆಲೆ ಭಾರೀ ಕಡಿತಗೊಳಿಸಿದ ಸೌದಿ ಅರೇಬಿಯಾ; ಭಾರತಕ್ಕೆ ಬಂಪರ್‌!

ಸರ್ಕಾರಿ ಸ್ವಾಮ್ಯದ ಸೌದಿ ಅರಾಮ್ಕೊ ತನ್ನ ಪ್ರಮುಖ ಅರಬ್ ಲೈಟ್ ಕಚ್ಚಾ ತೈಲದ ಅಧಿಕೃತ ಮಾರಾಟ ಬೆಲೆಯನ್ನು(OSP) ಏಷ್ಯಾ ಖರೀದಿದಾರರಿಗೆ, ಆಗಸ್ಟ್‌ನಿಂದ ಜಾರಿಗೆ ಬರುವಂತೆ ಪ್ರತಿ ಬ್ಯಾರೆಲ್‌ಗೆ 11 ಡಾಲರ್ ನಷ್ಟು ಕಡಿತಗೊಳಿಸಿದೆ.
Crude oil
ಸಾಂದರ್ಭಿಕ ಚಿತ್ರonline desk
Updated on

ರಿಯಾದ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಕಡಿಮೆಯಾಗಿದ್ದು, ಅಮೆರಿಕ ಹಾಗೂ ಇರಾನ್ ನಡುವಿನ 107 ದಿನಗಳ ಯುದ್ಧ ಅಂತ್ಯವಾಗಿದ್ದು, ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರ ಪರಿಣಾಮ ಜಾಗತಿಕ ತೈಲ ಸರಬರಾಜು ಹೆಚ್ಚಾಗುತ್ತಿದ್ದು, ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿರುವುದರಿಂದ, ಸೌದಿ ಅರೇಬಿಯಾ ಎರಡು ದಶಕಗಳಲ್ಲೇ ಇದೇ ಮೊದಲ ಬಾರಿಗೆ ಏಷ್ಯಾ ಖರೀದಿದಾರರಿಗೆ ಕಚ್ಚಾ ತೈಲ ಬೆಲೆಯಲ್ಲಿ ಅತಿದೊಡ್ಡ ಕಡಿತವನ್ನು ಘೋಷಿಸಿದೆ.

ಸರ್ಕಾರಿ ಸ್ವಾಮ್ಯದ ಸೌದಿ ಅರಾಮ್ಕೊ ತನ್ನ ಪ್ರಮುಖ ಅರಬ್ ಲೈಟ್ ಕಚ್ಚಾ ತೈಲದ ಅಧಿಕೃತ ಮಾರಾಟ ಬೆಲೆಯನ್ನು(OSP) ಏಷ್ಯಾ ಖರೀದಿದಾರರಿಗೆ, ಆಗಸ್ಟ್‌ನಿಂದ ಜಾರಿಗೆ ಬರುವಂತೆ ಬ್ಯಾರೆಲ್‌ಗೆ 11 ಡಾಲರ್ ನಷ್ಟು ಕಡಿತಗೊಳಿಸಿದ್ದು, ಇದು 20 ವರ್ಷಗಳಲ್ಲಿ ಅತಿದೊಡ್ಡ ಕಡಿತವಾಗಿದೆ.

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಕಡಿಮೆಯಾದ ನಂತರ, ಏಷ್ಯಾದಲ್ಲಿ(Asia) ಬೇಡಿಕೆ ಕಡಿಮೆಯಾಗುವುದರೊಂದಿಗೆ ಪೂರೈಕೆ ಪರಿಸ್ಥಿತಿಗಳು ಸುಧಾರಿಸುತ್ತಿವೆ. ಇದು ವಿಶ್ವದ ಅತಿದೊಡ್ಡ ಕಚ್ಚಾ ತೈಲ ರಫ್ತುದಾರ ರಾಷ್ಟ್ರವಾದ ಸೌದಿ ಅರೇಬಿಯಾ ಮೇಲೆ, ಬೆಲೆ ಕಡಿಮೆ ಮಾಡುವ ಒತ್ತಡ ಹೆಚ್ಚಿಸಿದೆ.

Crude oil
ಶೀಘ್ರದಲ್ಲೇ ಪೆಟ್ರೋಲ್​, ಡಿಸೇಲ್​ ಬೆಲೆ ಇಳಿಕೆ? ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದೇನು?

ಇದಕ್ಕೂ ಮುನ್ನ ಜುಲೈನಲ್ಲಿ ಪ್ರತಿ ಬ್ಯಾರಲ್‌ ಕಚ್ಚಾ ತೈಲಕ್ಕೆ 6 ಡಾಲರ್‌ನಷ್ಟು ಬೆಲೆ ಕಡಿತ ಮಾಡಿತ್ತು. ಸದ್ಯ71.7 ಡಾಲರ್ ಬೆಲೆ ಪ್ರತಿ ಬ್ಯಾರಲ್ ಕಚ್ಚಾತೈಲ ಮಾರಾಟ ಮಾಡುತ್ತಿದ್ದು, ಹೊಸ ದರ ಆಗಸ್ಟ್‌ನಿಂದ ಅನ್ವಯವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com