ಚಿನ್ನದ ದರ ಏರಿಕೆ online desk
ವಾಣಿಜ್ಯ

ಆಭರಣ ಪ್ರಿಯರಿಗೆ ಆಘಾತ: ದೀಪಾವಳಿ, Dhanteras ಹಬ್ಬಕ್ಕೂ ಮುನ್ನ ಚಿನ್ನ-ಬೆಳ್ಳಿ ಭಾರಿ ದುಬಾರಿ, ಬೆಂಗಳೂರಿನಲ್ಲಿ ಇಂದಿನ ದರ?

ಸೆನ್ಸೆಕ್ಸ್ ಜಿಗತ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ವಾರ ಸತತವಾಗಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು 3,220 ರೂ. ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳ ಪರಿಣಾಮವಾಗಿ ಸತತ ನಾಲ್ಕನೇ ದಿನವೂ ಚಿನ್ನದ ದರದಲ್ಲಿ ಏರಿಕೆ ಕಂಡಿದೆ.

ಬೆಂಗಳೂರು: ಸೆನ್ಸೆಕ್ಸ್ ಜಿಗತ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ವಾರ ಸತತವಾಗಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು 3,220 ರೂ. ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳ ಪರಿಣಾಮವಾಗಿ ಸತತ ನಾಲ್ಕನೇ ದಿನವೂ ಚಿನ್ನದ ದರದಲ್ಲಿ ಏರಿಕೆ ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನದ 10 ಗ್ರಾಂ ಬೆಲೆ ಒಂದೇ ದಿನದಲ್ಲಿ 3,220 ಹೆಚ್ಚಳವಾಗಿ 1,46,020ಕ್ಕೆ ತಲುಪಿದೆ. ಇನ್ನು 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ 2,950 ಏರಿಕೆಯಾಗಿದ್ದು, 1,33,850ಕ್ಕೆ ಏರಿಕೆಯಾಗಿದೆ.

24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ ಗ್ರಾಂಗೆ 322 ಏರಿಕೆಯಾಗಿದೆ. ಇದರಿಂದ ಒಂದು ಗ್ರಾಂ ಚಿನ್ನದ ಬೆಲೆ 14,602ಕ್ಕೆ ತಲುಪಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆಯಲ್ಲಿ 3,220 ಹೆಚ್ಚಳವಾಗಿದ್ದು, ಪ್ರಸ್ತುತ 1,46,020ಕ್ಕೆ ವಹಿವಾಟು ನಡೆಸುತ್ತಿದೆ. 22 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಏರಿಕೆಯಾಗಿದೆ. ಪ್ರತಿ ಗ್ರಾಂಗೆ 295 ಹೆಚ್ಚಳವಾಗಿದ್ದು, ದರ 13,385ಕ್ಕೆ ತಲುಪಿದೆ.

ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ

ಬೆಳ್ಳಿ ಬೆಲೆಯಲ್ಲೂ ಇಂದು ದಿಢೀರ್ ಏರಿಕೆಯಾಗಿದ್ದು ಪ್ರತಿ ಗ್ರಾಂ ಬೆಳ್ಳಿ ಬೆಲೆ 10 ಹೆಚ್ಚಳವಾಗಿ 210ಕ್ಕೆ ತಲುಪಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 10,000 ಏರಿಕೆಯಾಗಿದ್ದು 2.10 ಲಕ್ಷಕ್ಕೆ ತಲುಪಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Indian Stock Market: ದೀಪಾವಳಿ ಧಮಾಕಾ, ಸೆನ್ಸೆಕ್ಸ್ 2,009 ಅಂಕ ಜಿಗಿತ, 24,500ರ ಗಡಿ ದಾಟಿದ ನಿಫ್ಟಿ!

ತಮಿಳುನಾಡು ಜನತೆಗೆ CM ವಿಜಯ್ ದೀಪಾವಳಿ ಬಂಪರ್ ಗಿಫ್ಟ್; 100 ರೂ.ಗೆ ವೆಟ್ರಿ ವಿಶೇಷ ತರಕಾರಿ ಕಿಟ್!

'ಏನ್ ಹುಡುಕ್ತಾ ಇದೀರ ವಿರಾಟ್'.. 'ಏನಿಲ್ಲಾ ಬಿಡಿ ಸರ್', 'ಇದೇನಾ ನೋಡಿ..' ಎಂದ ಅಂಪೈರ್: ಕೊಹ್ಲಿ ಸಂಭ್ರಮ, ಬಿದ್ದು ಬಿದ್ದು ನಕ್ಕ ಕಾಮೆಂಟೇಟರ್ಸ್‌! ಆಗಿದ್ದೇನು?

ವ್ಯವಸ್ಥೆಯ ವಿರುದ್ಧ ನಾನು ಯಾವಾಗಲೂ ಇರುತ್ತೇನೆ ನಾಸಿರುದ್ದೀನ್ ಶಾ ಪರ ಧ್ವನಿ ಎತ್ತಿದ ನಟ ಮನೋಜ್ ಬಾಜ್‌ಪೇಯಿ

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್‌: ತುಟ್ಟಿಭತ್ಯೆ ಶೇ. 18ಕ್ಕೆ ಹೆಚ್ಚಿಸಿ ಆದೇಶ