ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ Online Desk
ವಾಣಿಜ್ಯ

SBI ಗ್ರಾಹಕರಿಗೆ ಸೈಬರ್ ಶಾಕ್: ಡಾರ್ಕ್ ವೆಬ್‌ನಲ್ಲಿ ಸಾವಿರಾರು ಜನರ ಖಾಸಗಿ ಮಾಹಿತಿ ಸೋರಿಕೆ! ನೀವು ಸೇಫಾಗಿರೋದು ಹೇಗೆ?

ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ SBI ಮೇಲೆ ಸೈಬರ್ ದಾಳಿ ನಡೆದಿದ್ದು, 3,897 ಗ್ರಾಹಕರ ವೈಯಕ್ತಿಕ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಬಹಿರಂಗಗೊಂಡಿದೆ. ಇದರ ನಡುವೆಯೇ, ಹ್ಯಾಕರ್‌ಗಳು ಇನ್ನೂ ಹೆಚ್ಚಿನ ಮಾಹಿತಿ ತಮ್ಮ ಬಳಿ ಇದೆ ಎಂದಿದ್ದಾರೆ. ಹಾಗಾದರೆ, ಗ್ರಾಹಕರ ಮಾಹಿತಿ ಸೋರಿಕೆಯು ಎಷ್ಟು ಗಂಭೀರ ಗೊತ್ತಾ?

ಮುಂಬೈ (ಮಹಾರಾಷ್ಟ್ರ): ಭಾರತದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮೇಲೆ ಸೈಬರ್ ದಾಳಿ ನಡೆದಿದ್ದು, 3,897 ಗ್ರಾಹಕರ ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಬಹಿರಂಗಗೊಂಡಿದೆ. ಡಾರ್ಕ್ ವೆಬ್‌ನಲ್ಲಿ ಲಭ್ಯವಿದ್ದ ಸುಮಾರು 3.75 ಲಕ್ಷ ದಾಖಲೆಗಳನ್ನು ಪ್ರಾಥಮಿಕವಾಗಿ ಪರಿಶೀಲಿಸಿದಾಗ ಈ ಮಾಹಿತಿ ಸೋರಿಕೆ ಆಗಿರುವುದು ಪತ್ತೆಯಾಗಿದೆ. ಇದರ ನಡುವೆಯೇ, ಹ್ಯಾಕರ್‌ಗಳು ಇನ್ನೂ ಹೆಚ್ಚಿನ ಪ್ರಮಾಣದ ಡೆಟಾ ತಮ್ಮ ಬಳಿ ಇದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಹಾಗಾದರೆ, ಗ್ರಾಹಕರ ಡೆಟಾ ಸೋರಿಕೆ ಘಟನೆಯು ಎಷ್ಟು ಗಂಭೀರವಾಗಿದೆ ಗೊತ್ತಾ? ಆ ಕುರಿತ ವರದಿ ಇಲ್ಲಿದೆ:

ಯಾವೆಲ್ಲಾ ಮಾಹಿತಿ ಸೋರಿಕೆಯಾಗಿದೆ?

ಸೋರಿಕೆಯಾದ ಮಾಹಿತಿಯಲ್ಲಿ ಯಾವುದೇ ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಅಥವಾ ಎಟಿಎಂ ಪಿನ್ ನಂತಹ ನೇರ ಹಣಕಾಸು ಮಾಹಿತಿ ಇಲ್ಲದಿದ್ದರೂ, ಗ್ರಾಹಕರ ಅತ್ಯಂತ ಪ್ರಮುಖ ವೈಯಕ್ತಿಕ ವಿವರಗಳಾದ ಗ್ರಾಹಕರ ಪೂರ್ಣ ಹೆಸರು, ಜನ್ಮ ದಿನಾಂಕ ಮತ್ತು ಲಿಂಗ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ, ಮನೆ ವಿಳಾಸ, ಬ್ಯಾಂಕ್ ಶಾಖೆಯ ವಿವರಗಳು ಮತ್ತು ಸಿಐಎಫ್ ಗುರುತಿನ ಸಂಖ್ಯೆಗಳು ಹಾಗೂ ಸಾಲ ಮತ್ತು ಇತರ ಸಂಬಂಧಿತ ದಾಖಲೆಗಳ ವಿವರಗಳು ಬಹಿರಂಗಗೊಂಡಿವೆ.

ಈ ಘಟನೆ ಎಷ್ಟು ಗಂಭೀರ?

  • ಬ್ಯಾಂಕಿಂಗ್ ವ್ಯವಹಾರದ ಮೇಲಿನ ಪರಿಣಾಮ: ಎಸ್‌ಬಿಐ ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಬ್ಯಾಂಕಿನ ಮುಖ್ಯ ವ್ಯವಹಾರ ಕಾರ್ಯಾಚರಣೆಗಳು, ಆರ್ಥಿಕ ಸಾಧನೆ ಅಥವಾ ದೈನಂದಿನ ಡಿಜಿಟಲ್ ಸೇವೆಗಳ ಮೇಲೆ ಈ ಘಟನೆಯಿಂದ ಯಾವುದೇ ತಕ್ಷಣದ ಪ್ರಭಾವ ಅಥವಾ ಹಾನಿ ಉಂಟಾಗಿಲ್ಲ. ಬ್ಯಾಂಕ್ ವ್ಯವಸ್ಥೆ ಎಂದಿನಂತೆ ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿದೆ.

  • ಸೈಬರ್ ವಂಚನೆಯ ಅಪಾಯ: ಹಣ ನೇರವಾಗಿ ಕಳವಾಗದಿದ್ದರೂ, ಗ್ರಾಹಕರ ವೈಯಕ್ತಿಕ ಮಾಹಿತಿ ಸೈಬರ್ ಅಪರಾಧಿಗಳ ಕೈ ಸೇರಿರುವುದರಿಂದ ಇದು ಗಂಭೀರ ಸ್ವರೂಪದ್ದಾಗಿದೆ. ಈ ಮಾಹಿತಿಯನ್ನು ಬಳಸಿಕೊಂಡು ವಂಚಕರು ಗ್ರಾಹಕರನ್ನು ಸುಲಭವಾಗಿ ಗುರಿ ಮಾಡಬಹುದು.

  • ನಿಯಂತ್ರಕ ಕ್ರಮಗಳು: ಈ ಡೆಟಾ ಸೋರಿಕೆಯ ಬಗ್ಗೆ ರಕ್ಷಣಾ ಸೈಬರ್ ಏಜೆನ್ಸಿ ಹಾಗೂ ರಾಷ್ಟ್ರೀಯ ಸೈಬರ್ ಭದ್ರತಾ ಸಂಸ್ಥೆ (CERT-In) ಬ್ಯಾಂಕಿಗೆ ಎಚ್ಚರಿಕೆ ನೀಡಿದ್ದು, ಸ್ವತಂತ್ರ ಸೈಬರ್ ತನಿಖೆ ಪ್ರಗತಿಯಲ್ಲಿದೆ.

ಹಾಗಾದ್ರೆ, ಗ್ರಾಹಕರಿಗೆ ಎದುರಾಗಬಹುದಾದ ಪ್ರಮುಖ ಅಪಾಯಗಳೇನು?

  • ನಕಲಿ ಬ್ಯಾಂಕ್ ಕರೆಗಳು: ನಿಮ್ಮ ಹೆಸರು, ಸಾಲದ ವಿವರ ಮತ್ತು ಬ್ಯಾಂಕ್ ಶಾಖೆಯ ಮಾಹಿತಿ ವಂಚಕರಿಗೆ ತಿಳಿದಿರುವುದರಿಂದ, ಅವರು ಬ್ಯಾಂಕ್ ಅಧಿಕಾರಿಗಳಂತೆ ನಟಿಸಿ ಕರೆ ಮಾಡಬಹುದು. ನಿಮ್ಮ ಖಾತೆ ಬ್ಲಾಕ್ ಆಗಿದೆ ಅಥವಾ ಕೆವೈಸಿ ಅಪ್‌ಡೇಟ್ ಮಾಡಬೇಕು ಎಂದು ನಂಬಿಸಿ ಒಟಿಪಿ ಅಥವಾ ಪಿನ್ ನಂಬರ್ ಪಡೆಯಲು ಯತ್ನಿಸಬಹುದು.

  • ನಕಲಿ ಲಿಂಕ್‌ಗಳು: ಸಾಲದ ಅನುಮೋದನೆ ಅಥವಾ ಖಾತೆಯ ತುರ್ತು ಪರಿಶೀಲನೆಗೆ ಸಂಬಂಧಿಸಿದಂತೆ ನಿಮ್ಮ ಮೊಬೈಲ್‌ಗೆ ನಕಲಿ ಸಂದೇಶ ಹಾಗೂ ಲಿಂಕ್‌ಗಳನ್ನು ಕಳುಹಿಸಿ ವಂಚಿಸಬಹುದು.

  • ಗುರುತಿನ ದುರುಪಯೋಗ: ನಿಮ್ಮ ವೈಯಕ್ತಿಕ ವಿವರಗಳನ್ನು ಬಳಸಿ ಇತರ ಸಣ್ಣಪುಟ್ಟ ಆನ್‌ಲೈನ್ ಸೇವೆಗಳಲ್ಲಿ ಬೇರೆ ನಕಲಿ ಖಾತೆಗಳನ್ನು ತೆರೆಯುವ ಅಪಾಯವಿರುತ್ತದೆ.

ಸೌದಿ ಅರೇಬಿಯಾ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ: ಓರ್ವ ಭಾರತೀಯ ಸೇರಿ ಇಬ್ಬರ ಸಾವು, 8 ಮಂದಿಗೆ ಗಾಯ..!

ಮೈಸೂರು ದಸರಾ ಜಂಬೂಸವಾರಿ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ! ICUನಲ್ಲಿ ಸಾವು-ಬದುಕಿನ ಹೋರಾಟ!

1st T20I: ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್: ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಕಿವೀಸ್!

1st T20I: ಕಿವೀಸ್ ಪರ ಗ್ಲೇನ್ ಫಿಲಿಪ್ಸ್ ಭರ್ಜರಿ ಬ್ಯಾಟಿಂಗ್, ಭಾರತಕ್ಕೆ ಗೆಲ್ಲಲು 226 ರನ್ ಬೃಹತ್ ಟಾರ್ಗೆಟ್

ಮುಂದಿನ ಐದು ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ