ವಾಟ್ಸ್‌ಆ್ಯಪ್‌ನಲ್ಲಿ ಬಿಲ್ ಪೇಮೆಂಟ್ಸ್ AI Image
ವಾಣಿಜ್ಯ

WhatsAppನಿಂದ ಮತ್ತೊಂದು ಧಮಾಕ: ಇನ್ಮುಂದೆ ಬಿಲ್ ಕಟ್ಟಲು ಬೇರೆ ಆ್ಯಪ್ ಬೇಡ: ಭಾರತೀಯ ಬಳಕೆದಾರರಿಗೆ ವಾಟ್ಸ್‌ಆ್ಯಪ್ Bill Payments ಗಿಫ್ಟ್!

ಡಿಜಿಟಲ್ ಯುಗದ ಮತ್ತೊಂದು ಹೆಜ್ಜೆ: ಮೆಟಾ ವಾಟ್ಸ್‌ಆ್ಯಪ್‌ನಲ್ಲಿ ಬಿಲ್ ಪೇಮೆಂಟ್ಸ್ ಪರಿಚಯ; ನೇರವಾಗಿ ವಿದ್ಯುತ್, ಗ್ಯಾಸ್, ನೀರು ಸೇರಿದಂತೆ ಎಲ್ಲಾ ಬಿಲ್ ಪಾವತಿಗೆ ಹೊಸ ಫೀಚರ್; ಯುಪಿಐ, ಕಾರ್ಡ್ ಮೂಲಕ ಒನ್-ಟ್ಯಾಪ್ ಪೇಮೆಂಟ್ ಸೌಲಭ್ಯ!

ನವದೆಹಲಿ: ಇಂದಿನ ಡಿಜಿಟಲ್ ಜಗತ್ತಿನಲ್ಲಿ ವಾಟ್ಸ್‌ಆ್ಯಪ್ (WhatsApp) ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಹೋಗಿದೆ. ಬೆಳಗ್ಗೆ ಎದ್ದ ತಕ್ಷಣದಿಂದ ಹಿಡಿದು ರಾತ್ರಿ ಮಲಗುವವರೆಗೆ ಜನರು ಮೆಸೇಜ್ ಮಾಡಲು, ಸ್ಟೇಟಸ್ ನೋಡಲು, ಕೆಲವೊಮ್ಮೆ ಕರೆಗಳನ್ನು ಮಾಡಲು ಇದರಲ್ಲೇ ಮುಳುಗಿರುತ್ತಾರೆ.

ವಾಸ್ತವವಾಗಿ, ಇತ್ತೀಚಿನ ಹಲವು ಸಮೀಕ್ಷೆಗಳ ಪ್ರಕಾರ ಸರಾಸರಿ ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ 40 ರಿಂದ 60 ನಿಮಿಷಗಳನ್ನು ಕೇವಲ ವಾಟ್ಸ್‌ಆ್ಯಪ್‌ನಲ್ಲೇ ಕಳೆಯುತ್ತಾನೆ. ಅದರಲ್ಲೂ, ಕೆಲವು ಯುವಕರು ಮತ್ತು ಉದ್ಯೋಗಸ್ಥರಲ್ಲಂತೂ ಈ ಸಮಯ 2 ರಿಂದ 3 ಗಂಟೆಗಿಂತಲೂ ಹೆಚ್ಚಿರುತ್ತದೆ.!

ಹಾಗಾಗಿ, ಇದನ್ನೇ ತನ್ನ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ವಾಟ್ಸ್‌ಆ್ಯಪ್ ಒಡೆತನದ ಮೆಟಾ, ತನ್ನ ಮೆಸೇಜಿಂಗ್ ಆ್ಯಪ್‌ನಲ್ಲಿ ಯುಪಿಐ ಪರಿಚಯಿಸಿತ್ತು. ಆದರೆ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಂಪನಿ, ಇದೀಗ ಭಾರತೀಯ ಬಳಕೆದಾರರಿಗಾಗಿ ಬಿಲ್ ಪೇಮೆಂಟ್ಸ್ ಎಂಬ ಅತ್ಯಾಧುನಿಕ ಫೀಚರ್ ಅನ್ನು ಅಧಿಕೃತವಾಗಿ ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯದ ಮೂಲಕ ಬಳಕೆದಾರರು ಆ್ಯಪ್‌ನಿಂದ ಹೊರಹೋಗದೆಯೇ ತಮ್ಮ ದೈನಂದಿನ ವಿದ್ಯುತ್ (ಕರೆಂಟ್), ಗ್ಯಾಸ್, ನೀರು, ಫಾಸ್ಟ್ಯಾಗ್, ಇನ್ಶೂರೆನ್ಸ್ ಮತ್ತು ಸಾಲದ ಮರುಪಾವತಿ ಸೇರಿದಂತೆ ವಿವಿಧ ಬಿಲ್‌ಗಳನ್ನು ನೇರವಾಗಿ ಪಾವತಿಸಬಹುದಾಗಿದೆ. ಆ ಕುರಿತ ವರದಿ ಇಲ್ಲಿದೆ:

ವಾಟ್ಸ್‌ಆ್ಯಪ್‌ನಲ್ಲಿ ಬಿಲ್ ಪಾವತಿ ಮಾಡುವುದು ಹೇಗೆ?

ಬಳಕೆದಾರರು ಕೆಳಗಿನ ಸುಲಭ ಹಂತಗಳ ಮೂಲಕ ಬಿಲ್ ಪಾವತಿ ಮಾಡಬಹುದು:

  • ವಾಟ್ಸ್‌ಆ್ಯಪ್ ಓಪನ್ ಮಾಡಿ: ಆ್ಯಪ್‌ನ ಹೋಮ್ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಕಾಣಿಸುವ ರೂಪಾಯಿ (₹) ಐಕಾನ್ ಮೇಲೆ ಟ್ಯಾಪ್ ಮಾಡಿ.

  • ವರ್ಗವನ್ನು ಆರಿಸಿ: ನೀವು ಪಾವತಿಸಬೇಕಾದ ಬಿಲ್ ವರ್ಗವನ್ನು (ಉದಾಹರಣೆಗೆ: Electricity ಅಥವಾ Gas) ಮತ್ತು ನಿಮ್ಮ ಬಿಲ್ ಸಂಸ್ಥೆಯನ್ನು ಆಯ್ಕೆ ಮಾಡಿ.

  • ಖಾತೆ ವಿವರ ನೀಡಿ: ನಿಮ್ಮ ಗ್ರಾಹಕ ಐಡಿ ಅಥವಾ ಖಾತೆ ಸಂಖ್ಯೆಯನ್ನು ನಮೂದಿಸಿ ದೃಢೀಕರಿಸಿ.

  • ಬಿಲ್ ಪರಿಶೀಲಿಸಿ: ಸಿಸ್ಟಮ್ ಸ್ವಯಂಚಾಲಿತವಾಗಿ ನಿಮ್ಮ ಬಿಲ್ ಮೊತ್ತವನ್ನು ಪಡೆದುಕೊಳ್ಳುತ್ತದೆ, ಅದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.

  • ಪಾವತಿ ಪೂರ್ಣಗೊಳಿಸಿ: ನಿಮ್ಮ ಅನುಕೂಲಕ್ಕೆ ತಕ್ಕಂತೆ UPI, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಆಯ್ಕೆ ಬಳಸಿ ಸುರಕ್ಷಿತವಾಗಿ ಪಾವತಿ ಮಾಡಿ.

ಈ ಹೊಸ ಫೀಚರ್‌ನ ಪ್ರಮುಖ ವೈಶಿಷ್ಟ್ಯಗಳು:

  • ಮಲ್ಟಿಪಲ್ ಅಕೌಂಟ್ ನಿರ್ವಹಣೆ: ಬಳಕೆದಾರರು ಒಂದೇ ಬಿಲ್ ಸಂಸ್ಥೆಯ ಅಡಿಯಲ್ಲಿ ತಮ್ಮ ಮನೆ, ಕಚೇರಿ ಅಥವಾ ಕುಟುಂಬದವರ ಬೇರೆ ಬೇರೆ ಗ್ರಾಹಕ ಐಡಿಗಳನ್ನು ಸೇರಿಸಿ ಒಂದೇ ಕಡೆ ನಿರ್ವಹಿಸಬಹುದು.

  • ಒನ್-ಟ್ಯಾಪ್ ಪೇಮೆಂಟ್: ಒಮ್ಮೆ ಬಿಲ್ ಪಾವತಿಸಿದ ವಿವರಗಳು ಸೇವ್ ಆಗುವುದರಿಂದ, ಮುಂದಿನ ಬಾರಿ ಕೇವಲ ಒಂದೇ ಒಂದು ಟ್ಯಾಪ್ ಮೂಲಕ ಸುಲಭವಾಗಿ ಬಿಲ್ ಕಟ್ಟಬಹುದು.

  • ಬಿಲ್ ಟ್ರ್ಯಾಕಿಂಗ್: ನಿಮ್ಮ ಹಳೆಯ ಪಾವತಿಗಳ ಇತಿಹಾಸ ಮತ್ತು ಮುಂಬರುವ ಬಿಲ್‌ಗಳ ವಿವರಗಳನ್ನು ಇಲ್ಲಿ ಸುಲಭವಾಗಿ ವೀಕ್ಷಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಜಲಪ್ರಳಯ ನಡುವೆ ಮಹಾ ಪವಾಡ; ಮೃತ್ಯುಕೂಪದಿಂದ ಹೊರಬಂದ ಕಾರ್ಮಿಕರು, ತ್ರಿಶೂಲಿ-3A ಸುರಂಗದಿಂದ ಇಬ್ಬರು ಜೀವಂತ ರಕ್ಷಣೆ..!

Climate compensation ವಿವಾದ; ಭಾರತದಿಂದ ನೆರವು ಸ್ವೀಕರಿಸಿದ್ದೇವೆ, ಯಾವುದೇ ಪರಿಹಾರಕ್ಕೂ ಬೇಡಿಕೆ ಇಟ್ಟಿಲ್ಲ; ನೇಪಾಳ ಸ್ಪಷ್ಟನೆ..!

ನೇಪಾಳ ಪ್ರವಾಹ ದುರಂತ: ನಾಪತ್ತೆಯಾದವರ ಕುಟುಂಬಕ್ಕೆ ಭಾರತ ನೆರವು, DNA ಪರೀಕ್ಷೆಗೆ ಕೇಂದ್ರದಿಂದ ವ್ಯವಸ್ಥೆ..!

ಇಸ್ರೋದ GSLV-F17 ರಾಕೆಟ್‌ ಉಡಾವಣೆ ಯಶಸ್ವಿ: ಮಳೆಯ ನಡುವೆಯೂ ನಭಕ್ಕೆ ಚಿಮ್ಮಿದ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ

ಮೈಸೂರು ದಸರಾಗೆ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ತೀರ್ಮಾನ: ಏರ್ ಶೋ ನಡೆಸಲು ಚಿಂತನೆ