ಬ್ಯಾಂಕ್ ಅಕೌಂಟ್ AI Image
ವಾಣಿಜ್ಯ

ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು Bank Account ಇಟ್ಕೋಬಹುದು? ಇಲ್ಲಿದೆ RBI ನಿಯಮ!

ಒಂದು ಕಾಲದಲ್ಲಿ ಪ್ರತಿಯೊಬ್ಬರ ಬಳಿಯೂ ಒಂದೇ ಬ್ಯಾಂಕ್ ಖಾತೆ ಇರುತ್ತಿತ್ತು. ಆದರೆ ಈಗ ಸಂಬಳಕ್ಕೆ ಒಂದು, ಉಳಿತಾಯಕ್ಕೆ ಮತ್ತೊಂದು, ಯುಪಿಐ ವಹಿವಾಟಿಗೆ ಇನ್ನೊಂದು ಹೀಗೆ ಹಲವು ಖಾತೆಗಳು ಸಾಮಾನ್ಯವಾಗಿದೆ. ಹಾಗಾದರೆ ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಬ್ಯಾಂಕ್ ಅಕೌಂಟ್ ಇಟ್ಕೋಬಹುದು?

Bank Accounts: ಒಂದು ಕಾಲದಲ್ಲಿ ಪ್ರತಿಯೊಬ್ಬರ ಬಳಿಯೂ ಒಂದೇ ಒಂದು ಬ್ಯಾಂಕ್ ಖಾತೆ ಇರುತ್ತಿತ್ತು. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಸಂಬಳಕ್ಕೆ ಒಂದು, ಉಳಿತಾಯಕ್ಕೆ ಮತ್ತೊಂದು, ಯುಪಿಐ ವಹಿವಾಟಿಗೆ ಇನ್ನೊಂದು ಹೀಗೆ ಹಲವು ಖಾತೆಗಳನ್ನು ಹೊಂದುವುದು ಸಾಮಾನ್ಯವಾಗಿದೆ. ಹಾಗಾದರೆ ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಬ್ಯಾಂಕ್ ಅಕೌಂಟ್ ತೆರೆಯಲು ಕಾನೂನಿನಲ್ಲಿ ಅವಕಾಶವಿದೆ? ಆರ್‌ಬಿಐ ನಿಗದಿಪಡಿಸಿದ ಮಿತಿ ಎಷ್ಟು? ಈ ಎಲ್ಲ ಪ್ರಶ್ನೆಗಳಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಖಾತೆಗಳ ಸಂಖ್ಯೆಗೆ ಯಾವುದೇ ನಿರ್ಬಂಧವಿಲ್ಲ...

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಪ್ರಕಾರ ಭಾರತದಲ್ಲಿ ಒಬ್ಬ ವ್ಯಕ್ತಿ ಇಷ್ಟೇ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು ಎಂಬ ಯಾವುದೇ ಗರಿಷ್ಠ ಮಿತಿ ಇಲ್ಲ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಸ್ಟೇಟ್ ಬ್ಯಾಂಕ್, ಎಚ್‌ಡಿಎಫ್‌ಸಿ, ಐಸಿಐಸಿಐ ಅಥವಾ ಯಾವುದೇ ಬ್ಯಾಂಕ್‌ಗಳಲ್ಲಿ ಎಷ್ಟು ಬೇಕಾದರೂ ಸೇವಿಂಗ್ಸ್ ಅಕೌಂಟ್‌ಗಳನ್ನು ತೆರೆಯಬಹುದು.

ಒಂದೇ ಬ್ಯಾಂಕ್‌ನಲ್ಲಿ ಎರಡು ಖಾತೆ ಸಾಧ್ಯವೇ?

ಸಾಮಾನ್ಯವಾಗಿ ಬಹುತೇಕ ಬ್ಯಾಂಕ್‌ಗಳು ತಮ್ಮ ಒಂದೇ ಶಾಖೆಯಲ್ಲಿ ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಸಾಮಾನ್ಯ ಉಳಿತಾಯ ಖಾತೆ ನೀಡಲು ಅನುಮತಿಸುವುದಿಲ್ಲ. ಆದರೆ ಬೇರೆ ಬೇರೆ ಶಾಖೆಗಳಲ್ಲಿ ಅಥವಾ ಸ್ಯಾಲರಿ ಅಕೌಂಟ್, ಜಂಟಿ ಖಾತೆ ಹಾಗೂ ಎನ್‌ಆರ್‌ಐ ಖಾತೆಗಳ ರೂಪದಲ್ಲಿ ಪ್ರತ್ಯೇಕ ಉದ್ದೇಶಕ್ಕಾಗಿ ಖಾತೆಗಳನ್ನು ಹೊಂದಲು ಅವಕಾಶವಿರುತ್ತದೆ.

ವಿವಿಧ ಮಾದರಿಯ ಖಾತೆಗಳು ಮತ್ತು ಕೆವೈಸಿ

ಉಳಿತಾಯ ಖಾತೆಗಳ ಹೊರತಾಗಿ ಚಾಲ್ತಿ ಖಾತೆ, ಫಿಕ್ಸ್ಡ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್ ಹಾಗೂ ಡಿಮ್ಯಾಟ್ ಲಿಂಕ್ ಆಗಿರುವ ಖಾತೆಗಳನ್ನು ತೆರೆಯಬಹುದು. ಪ್ರತಿಯೊಂದು ಖಾತೆಗೂ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನೀಡುವುದು ಕಡ್ಡಾಯವಾಗಿರುತ್ತದೆ. ಈ ಎಲ್ಲಾ ಖಾತೆಗಳ ವಿವರಗಳು ಆದಾಯ ತೆರಿಗೆ ಇಲಾಖೆ ಹಾಗೂ ಆರ್‌ಬಿಐ ಬಳಿ ದಾಖಲಾಗಿರುತ್ತವೆ.

ಮುಂದುವರೆದು, ಹೆಚ್ಚು ಖಾತೆಗಳನ್ನು ಹೊಂದುವುದು ತಪ್ಪಲ್ಲವಾದರೂ ಅವುಗಳನ್ನು ನಿರ್ವಹಿಸುವುದು ಮುಖ್ಯ. ಪ್ರತಿ ಖಾತೆಯಲ್ಲೂ ಕನಿಷ್ಠ ಬಾಕಿ ಹಣ ಅಂದರೆ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ಬ್ಯಾಂಕ್‌ಗಳು ದಂಡ ವಿಧಿಸುತ್ತವೆ. ಅಲ್ಲದೆ ಎಲ್ಲಾ ಖಾತೆಗಳಿಂದ ಬರುವ ಬಡ್ಡಿ ಆದಾಯವನ್ನು ನಿಮ್ಮ ಐಟಿಆರ್‌ನಲ್ಲಿ ನಮೂದಿಸಬೇಕು. ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ವಹಿವಾಟು ನಡೆದರೆ ಬ್ಯಾಂಕ್‌ಗಳು ಅದನ್ನು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡುತ್ತವೆ. ಆದ್ದರಿಂದ 2 ರಿಂದ 3 ಖಾತೆಗಳನ್ನು ಹೊಂದುವುದು ಸೂಕ್ತ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ 12 ಮಂದಿ ಸಾವು, ಹಲವರ ಸ್ಥಿತಿ ಗಂಭೀರ! ಕಠಿಣ ಕ್ರಮಕ್ಕೆ ಸಿಎಂ ಆದೇಶ

ಫೋನ್ ಕರೆ ಸ್ವೀಕರಿಸಲು ಬೈಕ್ ನಿಲ್ಲಿಸಿದ್ದ ಕುಟುಂಬಕ್ಕೆ ವೇಗದ ಕಾರು ಡಿಕ್ಕಿ; 3 ವರ್ಷದ ಮಗು ಸೇರಿ ಮೂವರ ಸಾವು

Odisha Literary Festival 2026: ಭಾರತದ ವೈಜ್ಞಾನಿಕ ಕ್ಷೇತ್ರದ ಸಾಧಕರನ್ನು ಮರೆತಿರುವುದಕ್ಕೆ ವಸಾಹತುಶಾಹಿ ಮನಸ್ಥಿತಿಯೇ ಕಾರಣ! ಆನಂದ್ ರಂಗನಾಥನ್

ಹುಬ್ಬಳ್ಳಿ: ʻಗೌರಿ ಲಂಕೇಶ್ʼ ಕೊಲೆ ಕೇಸ್‌ ಹಾಗೂ ಗಾಂಜಾ ಕೇಸ್ ಆರೋಪಿಯಿಂದ ನೂತನ ಪೊಲೀಸ್‌ ಆಯುಕ್ತರಿಗೆ ಸನ್ಮಾನ! ವಿವಾದ

ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ ಭಾರಿ ಭೂಕುಸಿತ: ಭಾರಿ ಪ್ರಮಾಣದ ಹಾನಿ ಶಂಕೆ| video