ಐಫೋನ್ ಪ್ರೊ ಮ್ಯಾಕ್ಸ್ ಬಿಡುಗಡೆಗೆ ಭಾರೀ ಬೇಡಿಕೆ  
ವಾಣಿಜ್ಯ

iPhone 18 Pro Max ಮಾರಾಟ ಆರಂಭ, ಗ್ರಾಹಕರಿಂದ ಭಾರೀ ಡಿಮ್ಯಾಂಡ್: ಮುಗಿಬಿದ್ದು ಖರೀದಿಸಿದ ಜನ; Video

ಐಫೋನ್‌ 7ರಿಂದಲೂ ಐಫೋನ್‌ ಖರೀದಿಸುತ್ತಿರುವ ಬೆಂಗಳೂರಿನ ರಾಹುಲ್‌ ಎಂಬ ಗ್ರಾಹಕರು ಬೆಳಗ್ಗೆ ಸುಮಾರು 5 ಗಂಟೆಗೆ ಆ್ಯಪಲ್‌ ಸ್ಟೋರ್‌ಗೆ ಬಂದಿದ್ದು, ಪ್ರತಿವರ್ಷದ ಐಫೋನ್‌ ಬಿಡುಗಡೆ ತನಗೆ ‘ಹಬ್ಬದಂತಿದೆ’ ಎಂದು ಹೇಳಿದ್ದಾರೆ.

ಹೊಸದಾಗಿ ಬಿಡುಗಡೆಯಾದ ಐಫೋನ್‌ 18 ಪ್ರೊ ಮತ್ತು ಐಫೋನ್‌ 18 ಪ್ರೊ ಮ್ಯಾಕ್ಸ್‌ ಖರೀದಿಸಲು ದೇಶಾದ್ಯಂತ ಆ್ಯಪಲ್‌ ಸ್ಟೋರ್‌ಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸಿದ್ದು, ಓರ್ವ ಗ್ರಾಹಕರು ಐಫೋನ್‌ ಬಿಡುಗಡೆ ಸಮಾರಂಭವನ್ನು ‘ಹಬ್ಬ’ಕ್ಕೆ ಹೋಲಿಸಿದ್ದಾರೆ.

ಐಫೋನ್‌ 18 ಪ್ರೊ ಮತ್ತು ಐಫೋನ್‌ 18 ಪ್ರೊ ಮ್ಯಾಕ್ಸ್‌ ಇಂದು ಶುಕ್ರವಾರ ದೇಶಾದ್ಯಂತ ಮಾರಾಟಕ್ಕೆ ಬಂದಿದ್ದು, ನೋಯ್ಡಾ, ಬೆಂಗಳೂರು ಮತ್ತು ಮಹಾರಾಷ್ಟ್ರದ ಆ್ಯಪಲ್‌ ಸ್ಟೋರ್‌ಗಳಲ್ಲಿ ಗ್ರಾಹಕರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ನೂತನ ಫೋನ್‌ ಖರೀದಿಸಲು ಉತ್ಸುಕತೆ ತೋರಿದರು.

ಐಫೋನ್‌ 7ರಿಂದಲೂ ಐಫೋನ್‌ ಖರೀದಿಸುತ್ತಿರುವ ಬೆಂಗಳೂರಿನ ರಾಹುಲ್‌ ಎಂಬ ಗ್ರಾಹಕರು ಬೆಳಗ್ಗೆ ಸುಮಾರು 5 ಗಂಟೆಗೆ ಆ್ಯಪಲ್‌ ಸ್ಟೋರ್‌ಗೆ ಬಂದಿದ್ದು, ಪ್ರತಿವರ್ಷದ ಐಫೋನ್‌ ಬಿಡುಗಡೆ ತನಗೆ ‘ಹಬ್ಬದಂತಿದೆ’ ಎಂದು ಹೇಳಿದ್ದಾರೆ.

ನಾನು ಬೆಳಗ್ಗೆ ಸುಮಾರು 5 ಗಂಟೆಯಿಂದ ಇಲ್ಲಿದ್ದೇನೆ. ದೊಡ್ಡ ಸರತಿ ಸಾಲು ಇತ್ತು. ಹರಿಯಾಣ, ದೆಹಲಿ ಮತ್ತು ಮುಂಬೈನಿಂದಲೂ ಜನರು ಐಫೋನ್‌ ಖರೀದಿಸಲು ಬಂದಿದ್ದಾರೆ. ನಾನು ಬಹಳ ವರ್ಷಗಳಿಂದ ಐಫೋನ್‌ ಖರೀದಿಸುತ್ತಿದ್ದೇನೆ. ನನ್ನ ಮೊದಲ ಐಫೋನ್‌ ಐಫೋನ್‌ 7 ಆಗಿತ್ತು. ಅದಾದ ಬಳಿಕ ನಿರಂತರವಾಗಿ ಐಫೋನ್‌ ಖರೀದಿಸುತ್ತಿದ್ದೇನೆ, ಐಫೋನ್‌ ಬಿಡುಗಡೆ ನನಗೆ ಹಬ್ಬದಂತಿದೆ. ಪ್ರತಿವರ್ಷವೂ ಐಫೋನ್‌ ಖರೀದಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ನೋಯ್ಡಾದಲ್ಲಿ ಹೊಸ ಐಫೋನ್‌ ಮಾದರಿಗಳ ಅಧಿಕೃತ ಮಾರಾಟ ಆರಂಭವಾಗುತ್ತಿದ್ದಂತೆ ಡಿಎಲ್‌ಎಫ್‌ ಮಾಲ್‌ನಲ್ಲಿರುವ ಆ್ಯಪಲ್‌ ಸ್ಟೋರ್‌ಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು.

ಪಂಜಾಬ್‌ನಿಂದ ಬಂದಿದ್ದ ಮತ್ತೊಬ್ಬ ಖರೀದಿದಾರರು ಬೆಳಗ್ಗೆ 6 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಕಾಯುತ್ತಿದ್ದುದಾಗಿ ತಿಳಿಸಿದರು. ಮುಂಚಿತವಾಗಿ ಬುಕ್ಕಿಂಗ್‌ ಮಾಡಿದ್ದರಿಂದ ಮೊದಲ ಐಫೋನ್‌ 18 ಪ್ರೊ ಮ್ಯಾಕ್ಸ್‌ ನ್ನು ಪಡೆಯಲು ಸಾಧ್ಯವಾಯಿತು.

TMC ಹೆಸರು, ಚಿಹ್ನೆ ಮುಟ್ಟುಗೋಲು: 'Vote chori, govt chori ಆಯ್ತು, ಈಗ ಪಾರ್ಟಿ ಚೋರಿ': ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಕಿಡಿ

ದಿಗ್ಬಂಧನ ಉಲ್ಲಂಘಿಸಿದ ಟ್ಯಾಂಕರ್‌ ಮೇಲೆ Iran ಭೀಕರ ದಾಳಿ: ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿದ ಹಡಗು, Hormuz ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ..!

TMC ಪಕ್ಷದ ಹೆಸರು, ಚಿಹ್ನೆ ಫ್ರೀಜ್ ಮಾಡಿದ ಚುನಾವಣಾ ಆಯೋಗ: ಉಪಚುನಾವಣೆ ಹೊತ್ತಲ್ಲೇ ದೀದಿಗೆ ಶಾಕ್‌, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ..!

TMC ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಆದೇಶಕ್ಕೆ ತೀವ್ರ ಆಕ್ರೋಶ; 'ಪ್ರತಿಭಟನೆಯೊಂದಿಗೆ' ಹೊಸ ಹೆಸರು, ಚಿಹ್ನೆ ಆಯ್ಕೆ ಸಲ್ಲಿಸಿದ ಮಮತಾ ಬ್ಯಾನರ್ಜಿ!

ಸ್ಥಳೀಯ ಚುನಾವಣೆಗಳಿಗೆ ಕಾಂಗ್ರೆಸ್‌ ರಣತಂತ್ರ: ಜಿಲ್ಲಾಧ್ಯಕ್ಷರ ಕಾರ್ಯಕ್ಷಮತೆ ಮೇಲೆ ಹೈಕಮಾಂಡ್‌ ಕಣ್ಣು, ಬೂತ್‌ನಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆಗೆ ಸೂಚನೆ..!