ಆಪಲ್ ಸಿಇಒ ಜಾನ್ ಟರ್ನಸ್ Online Desk
ವಾಣಿಜ್ಯ

Apple ಕಂಪನಿಗೆ ಬಿತ್ತು ₹47,700 ಕೋಟಿ ದಂಡ! ಹಾಗಾದ್ರೆ, ಟೆಕ್ ದೈತ್ಯ ಮಾಡಿದ ಮೋಸವಾದರೂ ಏನು?

ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪೇಟೆಂಟ್ ಉಲ್ಲಂಘನೆ ಪ್ರಕರಣದಲ್ಲಿ ಆಪಲ್ ಸಂಸ್ಥೆಗೆ ಯುಎಸ್ ಫೆಡರಲ್ ನ್ಯಾಯಾಲಯವು ಬರೋಬ್ಬರಿ 5.7 ಬಿಲಿಯನ್ ಡಾಲರ್ (ಅಂದಾಜು ₹47,700 ಕೋಟಿ ರೂ.) ದಂಡ ವಿಧಿಸಿದೆ. ಆ ಕುರಿತ ವರದಿ ಇಲ್ಲಿದೆ:

ವಾಷಿಂಗ್ಟನ್ ಡಿ. ಸಿ. (ಅಮೆರಿಕ): ಕೆಲ ದಿನಗಳ ಹಿಂದೆಯಷ್ಟೆ ಐಫೋನ್ 18 ಸೀರೀಸ್ ಬಿಡುಗಡೆ ಮಾಡಿ ಜಾಗತಿಕ ಮಾರುಕಟ್ಟೆಯಲ್ಲಿ ಅಲ್ಲೋಲ ಸೃಷ್ಟಿಸಿದ್ದ ಟೆಕ್ ದೈತ್ಯ ಆಪಲ್ (Apple) ಸಂಸ್ಥೆಯೇ ಅಲ್ಲಾಡುವಂತಹ ಸುದ್ದಿ ಇಲ್ಲಿದೆ.!

ಹೌದು, ಅಮೆರಿಕದ ನ್ಯಾಯಪೀಠದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪೇಟೆಂಟ್ ಉಲ್ಲಂಘನೆ ಪ್ರಕರಣದಲ್ಲಿ ಆಪಲ್ ಸಂಸ್ಥೆಗೆ ಯುಎಸ್ ಫೆಡರಲ್ ಜ್ಯೂರಿ ಭಾರಿ ದಂಡ ವಿಧಿಸಿದ್ದು, ಸ್ಯಾನ್ ಡಿಯಾಗೋ ಮೂಲದ ಸಣ್ಣ ತಂತ್ರಜ್ಞಾನ ಕಂಪನಿಯಾದ ಟ್ಯಾಕ್ಸನ್ ಟೆಕ್ನಾಲಜಿಗೆ ಬರೋಬ್ಬರಿ 5.7 ಬಿಲಿಯನ್ ಡಾಲರ್ (ಅಂದಾಜು ₹47,700 ಕೋಟಿ ರೂ.) ದಂಡ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಆಪಲ್ ಸಂಸ್ಥೆ ಮಾಡಿದ ತಪ್ಪೇನು?

ಆಪಲ್ ತನ್ನ ಜನಪ್ರಿಯ ಉತ್ಪನ್ನಗಳಾದ ಐಫೋನ್ ಮತ್ತು ಆಪಲ್ ವಾಚ್‌ಗಳಲ್ಲಿ ಬಳಸುವ ಟ್ಯಾಪ್ಟಿಕ್ ಇಂಜಿನ್ ತಂತ್ರಜ್ಞಾನದಲ್ಲಿ ಈ ಪೇಟೆಂಟ್ ಉಲ್ಲಂಘನೆ ಮಾಡಿದೆ. ಅದರಂತೆ,

  • ನಾವು ಮೊಬೈಲ್ ಪರದೆಯ ಮೇಲೆ ಟೈಪ್ ಮಾಡುವಾಗ, ಮೆನು ಸ್ಕ್ರಾಲ್ ಮಾಡುವಾಗ ಅಥವಾ ಕರೆಗಳನ್ನು ಸೈಲೆಂಟ್ ಮಾಡುವಾಗ ನಮಗೆ ಸಿಗುವ ಸ್ಪರ್ಶದ ಕಂಪನವನ್ನು ಈ ಟ್ಯಾಪ್ಟಿಕ್ ಇಂಜಿನ್ ನಿಯಂತ್ರಿಸುತ್ತದೆ.

  • ಹೆಡ್‌ಫೋನ್‌ಗಳು ಮತ್ತು ಗೇಮಿಂಗ್ ಗ್ಯಾಜೆಟ್‌ಗಳಲ್ಲಿ ಬಳಸಲಾಗುವ ಟ್ಯಾಕ್ಸನ್ ಸಂಸ್ಥೆಯ ಎರಡು ಪ್ರಮುಖ ಹ್ಯಾಪ್ಟಿಕ್ ಪೇಟೆಂಟ್‌ಗಳನ್ನು ಆಪಲ್ ತನ್ನ ಅನುಮತಿಯಿಲ್ಲದೆ ಅನಧಿಕೃತವಾಗಿ ಬಳಸಿ ಗ್ರಾಹಕರಿಗೆ ಉತ್ಪನ್ನಗಳನ್ನು ಮಾರಾಟ ಮಾಡಿದೆ.

ಹಾಗಾಗಿ, ಟ್ಯಾಕ್ಸನ್ ತಂತ್ರಜ್ಞಾನ ಸಂಸ್ಥೆಯು 2021 ರಲ್ಲಿ ಆಪಲ್ ವಿರುದ್ಧ ಮೊಕದ್ದಮೆ ಹೂಡಿತ್ತು. ಆರಂಭದಲ್ಲಿ 2023 ರಲ್ಲಿ ಫೆಡರಲ್ ನ್ಯಾಯಾಧೀಶರು ಆಪಲ್ ಪರವಾಗಿ ತೀರ್ಪು ನೀಡಿ ಪ್ರಕರಣವನ್ನು ವಜಾಗೊಳಿಸಿದ್ದರು. ಆದರೆ, ಯುಎಸ್ ಮೇಲ್ಮನವಿ ನ್ಯಾಯಾಲಯವು ಈ ತೀರ್ಪನ್ನು ಮರುಪರಿಶೀಲಿಸಿ ಮತ್ತೆ ವಿಚಾರಣೆಗೆ ಒಳಪಡಿಸಿತು. ಇದೀಗ ತೀವ್ರ ವಿಚಾರಣೆಯ ನಂತರ ಏಳು ಜನರ ನ್ಯಾಯಪೀಠವು ಆಪಲ್ ತಪ್ಪಿತಸ್ಥ ಎಂದು ತೀರ್ಪು ನೀಡಿದೆ.

ಹಾಗಾದ್ರೆ, ಆಪಲ್ ಸಂಸ್ಥೆಯ ಮುಂದಿನ ನಡೆ ಏನು?

ಈ ತೀರ್ಪನ್ನು ಬಲವಾಗಿ ವಿರೋಧಿಸಿರುವ ಆಪಲ್ ಸಂಸ್ಥೆ, "ನಮ್ಮ ಟ್ಯಾಪ್ಟಿಕ್ ಇಂಜಿನ್ ತಂತ್ರಜ್ಞಾನವೇ ಬೇರೆ, ಟ್ಯಾಕ್ಸನ್ ತಂತ್ರಜ್ಞಾನವೇ ಬೇರೆ. ನಾವು ಯಾರ ಪೇಟೆಂಟ್ ಅನ್ನು ಕದ್ದಿಲ್ಲ" ಎಂದು ಸ್ಪಷ್ಟಪಡಿಸಿದ್ದು, ಈ ತೀರ್ಪಿನ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಅಗ್ರೆಸ್ಸಿವ್ ಆಗಿ ಮೇಲ್ಮನವಿ ಸಲ್ಲಿಸುವುದಾಗಿ"ಘೋಷಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚಲಿಸುವ ಬಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ನಿರ್ಭಯಾ ಪ್ರಕರಣ ಕಣ್ಣಮುಂದೆ ಬರುತ್ತಿದೆ: ಸ್ವಯಂಪ್ರೇರಿತವಾಗಿ ಕೇಸ್ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್..!

ಲಾಭದಲ್ಲಿ 11 ಹಾಲು ಒಕ್ಕೂಟಗಳು, ನಷ್ಟದಲ್ಲಿ ಚಿಕ್ಕಬಳ್ಳಾಪುರ ದಾಖಲೆ: ಸಚಿವ ಸಂಪುಟದಲ್ಲಿ ತೀರ್ಮಾನಿಸಿದ ನಂತರ ದರ ಏರಿಕೆ ನಿರ್ಧಾರ; ಸಿಎಂ

ಮಹಿಷಾ ದಸರಾ ಆಚರಣೆಗೆ ಸಂವಿಧಾನದಲ್ಲಿ ಅವಕಾಶವಿದೆ- ಸಂಸದ ಯದುವೀರ್ ಒಡೆಯರ್!

Hormuz ಜಲಸಂಧಿಯಲ್ಲಿ ಅಮೆರಿಕಕ್ಕೆ ಬಿಗ್ ಶಾಕ್: ಯುಎಸ್ ಮಿಲಿಟರಿಯ ಮತ್ತೊಂದು ಅತ್ಯಾಧುನಿಕ ‘Kingfish’ Drone Iran ವಶಕ್ಕೆ..!

'ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್' ಕಿಚ್ಚ ಸುದೀಪ್? ಚರ್ಚೆಗೆ ಗ್ರಾಸವಾಯ್ತು ಬಿಗ್ ಬಾಸ್ ಹೇಳಿಕೆ!