IBPS CSA ನೇಮಕಾತಿ Online Desk
ವೃತ್ತಿ & ಉದ್ಯೋಗ ಅವಕಾಶಗಳು

ಪದವೀಧರರಿಗೆ ಗುಡ್ ನ್ಯೂಸ್; 11 ಸಾವಿರ ಬ್ಯಾಂಕ್ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ IBPS, ಸಂಬಳ 65 ಸಾವಿರ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಕನಸು ಕಾಣುತ್ತಿರುವ ಯುವಜನತೆಗೆ ಇಲ್ಲಿದೆ ಅತ್ಯುತ್ತಮ ಸುದ್ದಿ. ದೇಶಾದ್ಯಂತ ಇರುವ ವಿವಿಧ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು IBPS ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

IBPS CSA Recruitment 2026: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗದ ಕನಸು ಕಾಣುತ್ತಿರುವ ಪದವೀಧರರಿಗೆ ಗುಡ್ ನ್ಯೂಸ್; ಯಾಕಂದ್ರೆ, ಕಾಮನ್‌ ರಿಕ್ರೂಟ್‌ಮೆಂಟ್‌ ಪ್ರಕ್ರಿಯೆ ಅಡಿಯಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ದೇಶಾದ್ಯಂತ ಒಟ್ಟು 11,403 ಕಸ್ಟಮರ್ ಸರ್ವೀಸ್ ಅಸೋಸಿಯೇಟ್ (ಕ್ಲರ್ಕ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಪೈಕಿ ಕರ್ನಾಟಕದಲ್ಲೇ 1,414 ಹುದ್ದೆಗಳು ಲಭ್ಯವಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

ಈ ಬಾರಿಯ ನೇಮಕಾತಿ ಅಭಿಯಾನದಲ್ಲಿ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ದೇಶದ 11 ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಭಾಗವಹಿಸುತ್ತಿವೆ. ಅದರಂತೆ, ಅಭಿಯಾನದಲ್ಲಿ ಒಟ್ಟು 11,403 ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ 1,414 ಹುದ್ದೆಗಳು ಕರ್ನಾಟಕದಲ್ಲೇ ಲಭ್ಯವಿದ್ದು, ಈ ಪೈಕಿ ಸಾಮಾನ್ಯ ವರ್ಗಕ್ಕೆ 567, ಹಿಂದುಳಿದ ವರ್ಗಕ್ಕೆ 386, ಪರಿಶಿಷ್ಟ ಜಾತಿಗೆ 224, ಪರಿಶಿಷ್ಟ ಪಂಗಡಕ್ಕೆ 101 ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 136 ಹುದ್ದೆಗಳು ಲಭ್ಯವಿವೆ.

ಅರ್ಹತೆ:

  • ಶೈಕ್ಷಣಿಕ ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಾಸ್ ಆಗಿರಬೇಕು.

  • ಭಾಷಾ ಜ್ಞಾನ: ಕರ್ನಾಟಕದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು (ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ ಇರುತ್ತದೆ).

  • ವಯೋಮಿತಿ: ಆಗಸ್ಟ್ 1, 2026 ಕ್ಕೆ ಅನ್ವಯಿಸುವಂತೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ವಯಸ್ಸಾಗಿರಬೇಕು. (ನಿಯಮಾನುಸಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ).

ಸಂಬಳ:

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹24,050 ರಿಂದ ₹64,480 ರವರೆಗೆ ವೇತನ ಮತ್ತು ಇತರೆ ಭತ್ಯೆಗಳು ಸಿಗಲಿವೆ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಎರಡು ಪ್ರಮುಖ ಹಂತಗಳ ಆನ್‌ಲೈನ್ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ:

  • ಪೂರ್ವಭಾವಿ ಪರೀಕ್ಷೆ (Prelims Exam)

  • ಮುಖ್ಯ ಪರೀಕ್ಷೆ (Mains Exam)

  • ಸ್ಥಳೀಯ ಭಾಷಾ ಪರೀಕ್ಷೆ (LLPT) (ಅಗತ್ಯವಿದ್ದಲ್ಲಿ ಮಾತ್ರ)

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: ಆಗಸ್ಟ್ 1, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 21, 2026

  • ಪೂರ್ವಭಾವಿ ಪರೀಕ್ಷೆ: ಅಕ್ಟೋಬರ್ 10 ಮತ್ತು 11, 2026

  • ಮುಖ್ಯ ಪರೀಕ್ಷೆ: ಡಿಸೆಂಬರ್ 27, 2026

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ನಿಗದಿತ ಆಗಸ್ಟ್ 21 ರೊಳಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ ibps.in ಗೆ ಭೇಟಿ ನೀಡಿ ಆನ್‌ಲೈನ್ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ನೇಮಕಾತಿ ಅಧಿಸೂಚನೆ ಲಿಂಕ್:

https://www.ibps.in/wp-content/uploads/Notification_CRP_CSA_XVI-Final.pdf

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೂತನ ಸಚಿವರ ಪಟ್ಟಿ ಪ್ರಕಟ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ; ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ!

30 ವರ್ಷಗಳ BJPಯ ಭದ್ರ ಕೋಟೆ ಛಿದ್ರ: ಬಂಕಿಪುರ ಉಪಚುನಾವಣೆಯಲ್ಲಿ ಗೆದ್ದ ಪ್ರಶಾಂತ್ ಕಿಶೋರ್!

ಸರ್ಕಾರಿ ಹುದ್ದೆಗೆ ರಾಜೀನಾಮೆ; ಬಳಿಕ 'ಹ್ಯಾಟ್ರಿಕ್ ಶಾಸಕ'ರಾದ ರಘುಮೂರ್ತಿಗೆ ಮಂತ್ರಿ ಭಾಗ್ಯ!

ಪ್ರಭಾವಿ ನಾಯಕರ ಲೆಕ್ಕಾಚಾರ ತಲೆಕೆಳಗು; ಲಕ್ಷ್ಮಣ್ ಸವದಿಗೆ ಒಲಿದ ಸಚಿವ ಸ್ಥಾನ, ಡಿಕೆಶಿ ಆಪ್ತೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಆಘಾತ!

ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ಗಳನ್ನು ರಾಜ್ಯಗಳು ರದ್ದು ಅಥವಾ ಹಿಂಪಡೆಯಬಹುದು: 'ಸುಪ್ರೀಂ'