ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣ ಅವಕಾಶ 
ವೃತ್ತಿ & ಉದ್ಯೋಗ ಅವಕಾಶಗಳು

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣ ಅವಕಾಶ; 233 ನರ್ಸಿಂಗ್, ಫಾರ್ಮಸಿ ಆಫೀಸರ್ ಹುದ್ದೆಗಳಿಗೆ KEA ಅರ್ಜಿ ಆಹ್ವಾನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ. ಖಾಲಿ ಇರುವ ಒಟ್ಟು 233 ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಗ್ರೂಪ್-ಸಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ.

KEA Recruitment 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ. ESIS ವೈದ್ಯಕೀಯ ಸೇವೆಗಳ ಇಲಾಖೆ ಮತ್ತು ವಿವಿಧ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 233 ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಗ್ರೂಪ್-ಸಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

  • ಉಳಿಕೆ ಮೂಲ ವೃಂದ:

    • ಫಾರ್ಮಸಿ ಅಧಿಕಾರಿ: 98 (92 ಸಾಮಾನ್ಯ + 05 ಮಾಜಿ ಸೈನಿಕರು + 01 ಬಾಕಿ ಹುದ್ದೆ)

    • ನರ್ಸಿಂಗ್ ಅಧಿಕಾರಿ (ಶುಶ್ರೂಷಾಧಿಕಾರಿ): 90 (72 ಸಾಮಾನ್ಯ + 11 ಮಾಜಿ ಸೈನಿಕರು + 07 ಬಾಕಿ ಹುದ್ದೆಗಳು)

  • ಕಲ್ಯಾಣ-ಕರ್ನಾಟಕ ವೃಂದ:

    • ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ: ನರ್ಸಿಂಗ್ ಅಧಿಕಾರಿ 23 (17 ಸಾಮಾನ್ಯ + 06 ಬಾಕಿ ಉಳಿದಿರುವ ಹುದ್ದೆಗಳು)

    • ESI ಯೋಜನೆ (ಕಾರ್ಮಿಕ ರಾಜ್ಯ ವಿಮಾ ಯೋಜನೆ) ಫಾರ್ಮಸಿ ಅಧಿಕಾರಿ 11 (06 ಸಾಮಾನ್ಯ + 05 ಮಾಜಿ ಸೈನಿಕರು)

    • ESI ವೈದ್ಯಕೀಯ ಸೇವೆಗಳ ಇಲಾಖೆ ನರ್ಸಿಂಗ್ ಅಧಿಕಾರಿ 11 (ಮಾಜಿ ಸೈನಿಕರು)

ಒಟ್ಟು 233 ಹುದ್ದೆ

ಅರ್ಹತೆ:

  • ವಿದ್ಯಾರ್ಹತೆ:

    • ಫಾರ್ಮಸಿ ಅಧಿಕಾರಿ: ಡಿಪ್ಲೊಮಾ ಇನ್ ಫಾರ್ಮಸಿ (D.Pharm) ಮತ್ತು ಕರ್ನಾಟಕ ಫಾರ್ಮಸಿ ಕೌನ್ಸಿಲ್ ನೋಂದಣಿ

    • ನರ್ಸಿಂಗ್ ಅಧಿಕಾರಿ (ಶುಶ್ರೂಷಾಧಿಕಾರಿ): GNM ಅಥವಾ ಬಿ.ಎಸ್ಸಿ ನರ್ಸಿಂಗ್ (B.Sc Nursing) ಮತ್ತು ನರ್ಸಿಂಗ್ ಕೌನ್ಸಿಲ್ ನೋಂದಣಿ

  • ವಯೋಮಿತಿ (30 ಆಗಸ್ಟ್ 2026 ಕ್ಕೆ ಅನ್ವಯಿಸುವಂತೆ)

    • ಕನಿಷ್ಠ ವಯಸ್ಸು: 18 ವರ್ಷಗಳು

    • ಸಾಮಾನ್ಯ ಅರ್ಹತೆ (GM): ಗರಿಷ್ಠ 40 ವರ್ಷಗಳು

ಸಂಬಳ:

  • ಫಾರ್ಮಸಿ ಅಧಿಕಾರಿ: ₹ 44,425 – ₹ 83,700

  • ನರ್ಸಿಂಗ್ ಅಧಿಕಾರಿ (ಶುಶ್ರೂಷಾಧಿಕಾರಿ): ಗರಿಷ್ಠ ₹ 99,400 ವರೆಗೆ

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ (2A/2B/3A/3B) ಅಭ್ಯರ್ಥಿಗಳಿಗೆ: ₹750 (ಅರ್ಜಿ ಶುಲ್ಕ ₹500 + ಪ್ರಕ್ರಿಯೆ ಶುಲ್ಕ ₹250)

  • SC/ST/ಪವರ್ಗ-1/ಮಾಜಿ ಸೈನಿಕ/ತೃತೀಯ ಲಿಂಗಿ ಅಭ್ಯರ್ಥಿಗಳಿಗೆ: ರಿಯಾಯಿತಿ ಇರಲಿದೆ.

ಪ್ರಮುಖ ದಿನಾಂಕಗಳು

  • ಅಧಿಸೂಚನೆ ಪ್ರಕಟಣೆ: 06 ಆಗಸ್ಟ್ 2026

  • ಅರ್ಜಿ ಸಲ್ಲಿಕೆ ಆರಂಭ: 07 ಆಗಸ್ಟ್ 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಆಗಸ್ಟ್ 2026

ಆಯ್ಕೆ ವಿಧಾನ:

  • ಅಭ್ಯರ್ಥಿಗಳನ್ನು KEA ನಡೆಸುವ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಮತ್ತು ಮೂಲ ದಾಖಲಾತಿಗಳ ಪರಿಶೀಲನೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

  • ಕನ್ನಡವನ್ನು ಒಂದು ಭಾಷೆಯಾಗಿ ಓದದ ಅಭ್ಯರ್ಥಿಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ (KLPT) ಇರಲಿದೆ.

ಅರ್ಜಿ ಸಲ್ಲಿಕೆ

ಅರ್ಹ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ ಆದ https://cetonline.karnataka.gov.in/kea/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕದ ಜೊತೆ ನೇರ ಮಾತುಕತೆ ಇಲ್ಲ: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಸ್ಪಷ್ಟನೆ

ಬಾರಾಮತಿಯಲ್ಲಿ ಮತ್ತೆ ತರಬೇತಿ ವಿಮಾನ ಪತನ; ಅಜಿತ್ ಪವಾರ್ ದುರಂತದ ಬಳಿಕ 2ನೇ ಘಟನೆ

ಇರಾನ್ ಯುದ್ಧದ ಎಫೆಕ್ಟ್: ಅಮೆರಿಕದ ಶಸ್ತ್ರಾಸ್ತ್ರ ದಾಸ್ತಾನು ಖಾಲಿ? ರಕ್ಷಣಾ ಕಂಪನಿಗಳಿಗೆ ಶಸ್ತ್ರಾಸ್ತ್ರ ಉತ್ಪಾದನೆ ಹೆಚ್ಚಿಸಲು ಪೆಂಟಗನ್ ಸೂಚನೆ

ಕೋಮಾ ಸ್ಥಿತಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ? ವದಂತಿ ಬೆನ್ನಲ್ಲೇ ದಿಢೀರ್ Video ಬಿಡುಗಡೆ ಮಾಡಿದ ಇರಾನ್; ಸತ್ಯ ಮುಚ್ಚಿಡುವ ಯತ್ನವೇ..?

ಜಾರ್ಖಂಡ್ JSSC 2024 ಪ್ರಶ್ನೆಪತ್ರಿಕೆ ಸೋರಿಕೆ: 120 ಉತ್ತರಗಳು, WhatsApp ಮೂಲಕ ಸೋರಿಕೆ; CID ಸ್ಫೋಟಕ ವರದಿ