B.Sc - Engineering ಪದವೀಧರರಿಗೆ ಗುಡ್ ನ್ಯೂಸ್: ಕಂದಾಯ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ; ಭೂಮಾಪಕ ಹುದ್ದೆಗೆ ಅರ್ಜಿ ಆಹ್ವಾನಿಸಿದ KEA

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ವಿಭಾಗದಲ್ಲಿ ಖಾಲಿ ಇರುವ ಒಟ್ಟು 750 ಭೂಮಾಪಕ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ.
Good news for B.Sc. Engineering graduates
B.Sc - Engineering ಪದವೀಧರರಿಗೆ ಗುಡ್ ನ್ಯೂಸ್Online Desk
Updated on

ಬೆಂಗಳೂರು: ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಕಂದಾಯ ಇಲಾಖೆಯು ಭರ್ಜರಿ ಉದ್ಯೋಗಾವಕಾಶವೊಂದನ್ನು ಹೊತ್ತು ತಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ವಿಭಾಗದಲ್ಲಿ ಖಾಲಿ ಇರುವ ಒಟ್ಟು 750 ಭೂಮಾಪಕ (Group-C Surveyor) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ.

ಹುದ್ದೆ ವಿವರ:

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಈ ನೇಮಕಾತಿಯಲ್ಲಿ ಒಟ್ಟು 750 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅದರಲ್ಲಿ,

  • ಸಾಮಾನ್ಯ ವಲಯ: 560 ಹುದ್ದೆಗಳು

  • ಕಲ್ಯಾಣ ಕರ್ನಾಟಕ ವಲಯ: 190 ಹುದ್ದೆಗಳು

ಅರ್ಹತೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಯಾವುದೇ ವಿಭಾಗದಲ್ಲಿ ಬಿ.ಇ (B.E) / ಬಿ.ಟೆಕ್ (B.Tech) ಪದವಿ ಅಥವಾ ಇಂಜಿನಿಯರಿಂಗ್‌ನ ಯಾವುದೇ ವಿಭಾಗದಲ್ಲಿ 3 ವರ್ಷಗಳ ಡಿಪ್ಲೋಮಾ ಪೂರ್ಣಗೊಳಿಸಿರಬೇಕು. ಅಥವಾ B.Sc ಇನ್ ಗಣಿತ, ಭೌತಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಐಟಿ, ಎಲೆಕ್ಟ್ರಾನಿಕ್ಸ್ ಅಥವಾ ಬಿ.ಎಸ್ಸಿ ಕೃಷಿ (B.Sc Agriculture) ವಿಷಯಗಳಲ್ಲಿ ಪದವಿ ಪಡೆದವರಿಗೆ ಅವಕಾಶವಿದೆ.

ವಯೋಮಿತಿ:

ಕನಿಷ್ಠ 18 ವರ್ಷ ತುಂಬಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನು, ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 40 ವರ್ಷ, ಹಿಂದುಳಿದ ವರ್ಗಕ್ಕೆ (2A, 2B, 3A, 3B): 43 ವರ್ಷ, SC / ST ಮತ್ತು ಪ್ರವರ್ಗ-1ಕ್ಕೆ 45 ವರ್ಷಗಳನ್ನು ನಿಗದಿಪಡಿಸಲಾಗಿದೆ.

ಸಂಬಳ:

ತಿಂಗಳಿಗೆ 37,500 ರಿಂದ ರೂ. 76,100 ರೂಪಾಯಿ ರವರೆಗಿನ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಇದರೊಂದಿಗೆ ಸರ್ಕಾರದ ನಿಯಮಾನುಸಾರ ಇತರೆ ಭತ್ಯೆಗಳೂ ಇರಲಿದೆ.

ಅರ್ಜಿ ಶುಲ್ಕ:

  • ಸಾಮಾನ್ಯ ಮತ್ತು ಒಬಿಸಿ ವರ್ಗದ (ಪ್ರವರ್ಗ - 2ಎ 2ಬಿ 3ಎ 3ಬಿ) ಅಭ್ಯರ್ಥಿಗಳಿಗೆ 750 ರೂಪಾಯಿ ಶುಲ್ಕ

  • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಒಬಿಸಿ ವರ್ಗದ (ಪ್ರವರ್ಗ 1) ಅಭ್ಯರ್ಥಿಗಳಿಗೆ 500 ರೂಪಾಯಿ ಶುಲ್ಕ

  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ 250 ರೂಪಾಯಿ ಶುಲ್ಕ

  • ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ (ಉಚಿತ)

ಪ್ರಮುಖ ದಿನಾಂಕ:

  • ಅರ್ಜಿ ಸಲ್ಲಿಕೆ ಆರಂಭ: ಜುಲೈ 11, 2026 (ಈಗಾಗಲೇ ಪ್ರಾರಂಭವಾಗಿದೆ)

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 07, 2026 (ಕೊನೆಯ ದಿನದ ತನಕ ಕಾಯಬೇಡಿ)

  • ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಆಗಸ್ಟ್ 10, 2026

ಲಿಖಿತ ಪರೀಕ್ಷೆ ನಡೆಯುವ ದಿನಾಂಕ:

  • ಸಾಮಾನ್ಯ ವಲಯದ ಪರೀಕ್ಷೆಗಳು: ಅಕ್ಟೋಬರ್ 3 ಮತ್ತು 4, 2026

  • ಕಲ್ಯಾಣ ಕರ್ನಾಟಕ ವಲಯದ ಪರೀಕ್ಷೆಗಳು: ಅಕ್ಟೋಬರ್ 24 ಮತ್ತು 25, 2026

ನೇಮಕಾತಿ ಅಧಿಸೂಚನೆ:

ಸಾಮಾನ್ಯ ವಲಯ: https://cetonline.karnataka.gov.in/keawebentry456/landrpc2026/RPC_landkannada.pdf

ಕಲ್ಯಾಣ ಕರ್ನಾಟಕ ವಲಯ: https://cetonline.karnataka.gov.in/keawebentry456/landkk2026/kk_landkannada.pdf

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ ಆದ https://cetonline.karnataka.gov.in/login ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com