ಕರ್ನಾಟಕ ಜೈಲು ಇಲಾಖೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ AI Image
ವೃತ್ತಿ & ಉದ್ಯೋಗ ಅವಕಾಶಗಳು

SSLC ಪಾಸಾದವರಿಗೆ ಗುಡ್‌ನ್ಯೂಸ್: ಕಾರಾಗೃಹ ಇಲಾಖೆಯಲ್ಲಿ 869 ಹುದ್ದೆಗಳ ಬೃಹತ್ ನೇಮಕಾತಿ, ತಿಂಗಳಿಗೆ ಬರೋಬ್ಬರಿ 76 ಸಾವಿರ ಸಂಬಳ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 869 ಜೈಲರ್, ವಾರ್ಡರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಬೃಹತ್ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

Karnataka Prisons Department Recruitment 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 869 ಜೈಲರ್, ವಾರ್ಡರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಬೃಹತ್ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು, ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಅಕ್ಟೋಬರ್ 15, 2026 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯ ಸಂಪೂರ್ಣ ವರದಿ ಇಲ್ಲಿದೆ:

ಹುದ್ದೆಗಳ ವಿವರ:

  • ಒಟ್ಟು 869 ಹುದ್ದೆಗಳು

    • ವಾರ್ಡರ್ (ಪುರುಷ): 835 ಹುದ್ದೆಗಳು (RPC - 560, KK - 275)

    • ಬೋಧಕ ಗ್ರೇಡ್-2: 24 ಹುದ್ದೆಗಳು (RPC - 16, KK - 8)

    • ಜೈಲರ್: 5 ಹುದ್ದೆಗಳು (KK ವೃಂದ ಮಾತ್ರ)

    • ವಾರ್ಡರ್ ಕಮ್ ನರ್ಸಿಂಗ್: 5 ಹುದ್ದೆಗಳು (KK ವೃಂದ ಮಾತ್ರ)

ಅರ್ಹತೆ:

  • ವಿದ್ಯಾರ್ಹತೆ: ವಾರ್ಡರ್, ಬೋಧಕ ಹಾಗೂ ವಾರ್ಡರ್ ಕಮ್ ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಜೈಲರ್ ಹುದ್ದೆಗೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಕಡ್ಡಾಯವಾಗಿದೆ.

  • ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ತುಂಬಿರಬೇಕು ಮತ್ತು ಗರಿಷ್ಠ 33 ವರ್ಷ ಮೀರಿರಬಾರದು.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 19 ಸೆಪ್ಟೆಂಬರ್ 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಅಕ್ಟೋಬರ್ 2026

  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: 16 ಅಕ್ಟೋಬರ್ 2026

  • ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ: 21 ಮತ್ತು 22 ನವೆಂಬರ್ 2026

ಸಂಬಳ:

  • ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ₹34,100 ರಿಂದ ಹಿಡಿದು ಗರಿಷ್ಠ ₹1,12,900 ರವರೆಗೆ ಅತ್ಯುತ್ತಮ ವೇತನ ಶ್ರೇಣಿ ಸಿಗಲಿದೆ. (ವಾರ್ಡರ್ ಹುದ್ದೆಗೆ ₹37,500 – ₹76,100 ಇರಲಿದೆ)

ಅರ್ಜಿ ಶುಲ್ಕ:

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ₹750

  • SC/ST, ಪ್ರವರ್ಗ-1 ಅಭ್ಯರ್ಥಿಗಳಿಗೆ ₹500

ಅರ್ಜಿ ಸಲ್ಲಿಕೆ ವಿಧಾನ:

  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣ cetonline.karnataka.gov.in/kea ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸ ಬೇಕು.

ಆಯ್ಕೆ ವಿಧಾನ:

  • ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಹಾಗೂ ಸಹಿಷ್ಣುತೆ ಪರೀಕ್ಷೆ, ವೈದ್ಯಕೀಯ ತಪಾಸಣೆ ಮತ್ತು ಮೂಲ ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಿನ್ನಾಭಿಪ್ರಾಯ ಯಾವ ಕಾರಣಕ್ಕೆ? ಸತ್ಯಾಂಶವನ್ನು ದೇಶದ ಮುಂದೆ ಬಹಿರಂಗಪಡಿಸಿ: ಚುನಾವಣಾ ಆಯೋಗಕ್ಕೆ ಕುಮಾರಸ್ವಾಮಿ ಆಗ್ರಹ

CEC ಜ್ಞಾನೇಶ್ ಕುಮಾರ್‌ರನ್ನು ತಕ್ಷಣ ವಜಾಗೊಳಿಸಿ, ಕ್ರಿಮಿನಲ್ ಕೇಸ್ ದಾಖಲಿಸಿ: ರಾಷ್ಟ್ರಪತಿಗೆ ಸಿದ್ದರಾಮಯ್ಯ ಆಗ್ರಹ

‘ಪ್ರಾರ್ಥನೆಯ ದಿನ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ'; ಭಾನುವಾರ ಬ್ಯಾಂಕ್‌ ತೆರೆಯುವ ನಿರ್ಧಾರಕ್ಕೆ ಚರ್ಚ್‌ ಮಂಡಳಿ ವಿರೋಧ!

Asian Games: ಇರಾನ್ ನ್ನು ಮಣಿಸಿ ಚಿನ್ನ ಮುಡಿಗೇರಿಸಿಕೊಂಡ ಭಾರತೀಯ ಪುರುಷರ ಕಬಡ್ಡಿ ತಂಡ

ಕೊನೆಯ ವಿಶ್ವಕಪ್: ಏಕದಿನಕ್ಕೂ ನಿವೃತ್ತಿ ಘೋಷಿಸುವ ಸುಳಿವು ನೀಡಿದ ವಿರಾಟ್ ಕೊಹ್ಲಿ; ಅಭಿಮಾನಿಗಳು ಶಾಕ್!