CRPF Recruitment 2026: ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (CRPF) ಉದ್ಯೋಗದೊಂದಿಗೆ ದೇಶಸೇವೆಯ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಭರ್ಜರಿ ಸುವರ್ಣಾವಕಾಶ ಲಭಿಸಿದೆ. ಅರ್ಹ ಕ್ರೀಡಾಪಟುಗಳಿಗಾಗಿ ಕ್ರೀಡಾ ಕೋಟಾದಡಿ ಒಟ್ಟು 521 ಹೆಡ್ ಕಾನ್‌ಸ್ಟೇಬಲ್ ಮತ್ತು ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ನೇಮಕಾತಿ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ಒಟ್ಟು 521 ಹುದ್ದೆಗಳು
ಹೆಡ್ ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ - GD): 182 ಹುದ್ದೆಗಳು (150 ಪುರುಷರು, 32 ಮಹಿಳೆಯರು)
ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ - GD): 339 ಹುದ್ದೆಗಳು (258 ಪುರುಷರು, 81 ಮಹಿಳೆಯರು)
ಅರ್ಹತೆ:
ಶೈಕ್ಷಣಿಕ ಅರ್ಹತೆ:
ಹೆಡ್ ಕಾನ್‌ಸ್ಟೇಬಲ್ ಹುದ್ದೆಗೆ: ಮಾನ್ಯತೆ ಪಡೆದ ಬೋರ್ಡ್‌ನಿಂದ 12ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಆಗಿರಬೇಕು.
ಕಾನ್‌ಸ್ಟೇಬಲ್ ಹುದ್ದೆಗೆ: 10ನೇ ತರಗತಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಕ್ರೀಡಾ ಅರ್ಹತೆ:
ಅಭ್ಯರ್ಥಿಗಳು ನಿಗದಿಪಡಿಸಲಾದ 22 ಕ್ರೀಡಾ ವಿಭಾಗಗಳಲ್ಲಿ (ಅಥ್ಲೆಟಿಕ್ಸ್, ಈಜು, ಕಬಡ್ಡಿ, ಶೂಟಿಂಗ್, ಹಾಕಿ, ಕುಸ್ತಿ, ಯೋಗ ಇತ್ಯಾದಿ) ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸಾಧನೆ ಹಾಗೂ ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ:
1 ಆಗಸ್ಟ್ 2026 ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 23 ವರ್ಷ ಮೀರಿರಬಾರದು (ಮೀಸಲಾತಿ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ)
ದೈಹಿಕ ಮಾನದಂಡಗಳು:
ಎತ್ತರ (Height):
ಪುರುಷರು: 170 ಸೆಂ.ಮೀ (ST ಅಭ್ಯರ್ಥಿಗಳಿಗೆ 162.5 ಸೆಂ.ಮೀ, ಈಶಾನ್ಯ ರಾಜ್ಯಗಳ ಅಭ್ಯರ್ಥಿಗಳಿಗೆ ನಿಯಮಾನುಸಾರ ಸಡಿಲಿಕೆ ಇದೆ)
ಮಹಿಳೆಯರು: 157 ಸೆಂ.ಮೀ (ST ಅಭ್ಯರ್ಥಿಗಳಿಗೆ 150.0 ಸೆಂ.ಮೀ)
ಎದೆ ಸುತ್ತಳತೆ (ಪುರುಷರಿಗೆ ಮಾತ್ರ):
ಸಾಮಾನ್ಯ/OBC/SC: ಸಾಮಾನ್ಯ ಸ್ಥಿತಿಯಲ್ಲಿ 80 ಸೆಂ.ಮೀ, ಕನಿಷ್ಠ 5 ಸೆಂ.ಮೀ ವಿಸ್ತರಣೆ (80-85 ಸೆಂ.ಮೀ) {ST ಅಭ್ಯರ್ಥಿಗಳಿಗೆ: 76 ಸೆಂ.ಮೀ (5 ಸೆಂ.ಮೀ ವಿಸ್ತರಣೆ)}
ತೂಕ: ಎತ್ತರ ಮತ್ತು ವಯಸ್ಸಿಗೆ ಅನುಗುಣವಾಗಿರಬೇಕು.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಮತ್ತು EWS ವರ್ಗದ ಪುರುಷ ಅಭ್ಯರ್ಥಿಗಳಿಗೆ ₹100 ಶುಲ್ಕ ಇರುತ್ತದೆ. ಎಲ್ಲಾ ಮಹಿಳಾ ಅಭ್ಯರ್ಥಿಗಳು, ಎಸ್‌ಸಿ, ಎಸ್‌ಟಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಸಂಬಳ:
ಹೆಡ್ ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ) - ಪೇ ಲೆವೆಲ್ 4 ರಂತೆ ₹25,500 ರಿಂದ ₹81,100/-
ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ) - ಪೇ ಲೆವೆಲ್ 3 ರಂತೆ ₹21,700 ರಿಂದ ₹69,100/-
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್ 12, 2026 (ಬೆಳಗ್ಗೆ 9:00 ಗಂಟೆಯಿಂದ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 11, 2026 (ರಾತ್ರಿ 11:59 ರವರೆಗೆ)
ತಿದ್ದುಪಡಿ ವಿಂಡೋ: ನವೆಂಬರ್ 12 ರಿಂದ ನವೆಂಬರ್ 14, 2026
ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ!
ಈ ನೇಮಕಾತಿಯ ವಿಶೇಷತೆಯೆಂದರೆ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಾಂಪ್ರದಾಯಿಕ ಸಂದರ್ಶನ ಇರುವುದಿಲ್ಲ. ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:
ದಾಖಲಾತಿಗಳ ಪರಿಶೀಲನೆ (ಕ್ರೀಡಾ ಪ್ರಮಾಣಪತ್ರಗಳ ಸ್ಕ್ರೂಟಿನಿ)
ದೈಹಿಕ ಪ್ರಮಾಣಿತ ಪರೀಕ್ಷೆ
ಕ್ರೀಡಾ ಸಾಮರ್ಥ್ಯದ ಪ್ರಾಯೋಗಿಕ ಪರೀಕ್ಷೆ
ವೈದ್ಯಕೀಯ ತಪಾಸಣೆ