ಸಾಂದರ್ಭಿಕ ಚಿತ್ರ 
ಸಿನಿಮಾ

ಚಾಮರಾಜನಗರ:ಕೊಲೆ ಪ್ರಕರಣದಲ್ಲಿ ಕೆಜಿಎಫ್ ಸಿನಿಮಾ ಸ್ಟಂಟ್ ಮ್ಯಾನ್ ಬಂಧನ

ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಫ್ ಸಿನಿಮಾದಲ್ಲಿ ಸ್ಟಂಟ್ ಮ್ಯಾನ್ ಆಗಿ ನಟಿಸಿದ್ದ ರಘು ಎಂಬಾತನನ್ನು ಪೊಲೀಸಲು ಬಂಧಿಸಿದ್ದಾರೆ. 

ಚಾಮರಾಜನಗರ: ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಫ್ ಸಿನಿಮಾದಲ್ಲಿ ಸ್ಟಂಟ್ ಮ್ಯಾನ್ ಆಗಿ ನಟಿಸಿದ್ದ ರಘು ಎಂಬಾತನನ್ನು ಪೊಲೀಸಲು ಬಂಧಿಸಿದ್ದಾರೆ.

ಐದು ದಿನಗಳ ಹಿಂದೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ನಿಟ್ರೆಬಳಿ ಕಾರಿನಲ್ಲಿ ಸುಟ್ಟ ಶವವೊಂದು ಪತ್ತೆಯಾಗಿತ್ತು,. ಪ್ರಕರಣ ಬೇಧಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಚಾಮರಾಜನಗರದ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಂಗಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಅಂಬೇಡ್ಕರ್ ಕಾಲೊನಿಯ ಬಸವರಾಜೇಶ್ವರಿ,ಅಣ್ಣೂರ್ ಕೇರಿಯ ರಘು, ಮತ್ತು ಕೆಜಿಎಫ್ ಸೇರಿ 10 ಸಿನಿಮಾಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿದ್ದ  ರಘು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ,

ಈತನೇ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ, ಕೊಲೆಯಾದ ವ್ಯಕ್ತಿ ಬಸವರಾಜೇಶ್ವರಿ ಸೇರಿದಂತೆ ಹಲವು ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಬಸವರಾಜೇಶ್ವರಿಯ ಖಾಸಗಿ ಫೋಟೋಗಳನ್ನು ತೆಗೆದುಕೊಂಡಿದ್ದ ಆತ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಈ ವಿಷಯ ರಘುಗೆ ತಿಳಿಯಿತು, ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದ. ರಂಗಸ್ವಾಮಿ ಮೇಲೆ ಹಲ್ಲೆ ಮಾಡಿ ನಂತರ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ಚಾಮರಾಜನಗರ ಎಸ್ ಪಿ ಆನಂದ್ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bengal polls: ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ರಾಜಕಾರಣಿಗಳಿಗೆ ಸೆಕ್ಯೂರಿಟಿ ವಾಪಸ್, ಚುನಾವಣಾ ಆಯೋಗ ನಿರ್ದೇಶನ!

ಅಮೆರಿಕದ ಬಲಿಷ್ಠ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ವಿಮಾನದಿಂದ ಧುಮುಕಿದ ಪೈಲಟ್‌ ಗಾಗಿ ಶೋಧ; ಬಹುಮಾನ ಘೋಷಣೆ

Iran War: Hormuz ಕುರಿತು ಬಹ್ರೇನ್ ನೇತೃತ್ವದಲ್ಲಿ ಕರಡು ನಿರ್ಣಯ; UNSC ಮತದಾನ ನಾಳೆ!

ಏನಾಗ್ತಿದೆ ಅಮೇರಿಕಾದಲ್ಲಿ?: ಸೇನಾ ಮುಖ್ಯಸ್ಥರನ್ನು ಕಿತ್ತೆಸೆದ ಬೆನ್ನಲ್ಲೇ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಗೆ Fraud Czar ಪಟ್ಟ ಕಟ್ಟಿದ ಟ್ರಂಪ್!

ಚುನಾವಣೆಗೂ ಮುನ್ನವೇ TVK ವಿಜಯ್‌ಗೆ ಸಂಕಷ್ಟ? ಎರಡು ಕಡೆ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತ ಸಾಧ್ಯತೆ!

SCROLL FOR NEXT