ಸಿನಿಮಾ

ಕೊರೋನಾ ವೈರಸ್:ಕ್ಯಾನೆ ಚಿತ್ರೋತ್ಸವ ಮುಂದೂಡಿಕೆ, ನಿರಾಶ್ರಿತರಿಗೆ ಆಶ್ರಯ ತಾಣಗಳಾಗಿ ಪರಿವರ್ತನೆ

Sumana Upadhyaya

ಪ್ಯಾರಿಸ್: ಸಿನಿಮೋದ್ಯಮದ ಒಂದು ಪ್ರಮುಖ ಕಾರ್ಯಕ್ರಮವಾದ ಕ್ಯಾನೆ ಚಲನಚಿತ್ರೋತ್ಸವ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಸಾವಿರಾರು ಮಂದಿ ಸೆಲೆಬ್ರಿಟಿಗಳು ನಡೆದಾಡುವ ರೆಡ್ ಕಾರ್ಪೆಟ್ ಕಾರ್ಯಕ್ರಮದ ಸ್ಥಳವನ್ನು ಈಗ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ಆಶ್ರಯ ತಾಣವನ್ನಾಗಿ ಪರಿವರ್ತಿಸಲಾಗಿದೆ.

ನಿರಾಶ್ರಿತರು ಮತ್ತು ಕೊರೋನಾ ವೈರಸ್ ಸೋಂಕು ಹಬ್ಬುವುದನ್ನು ತಡೆಗಟ್ಟಲು ಕ್ಯಾನೆ ನಡೆಯುವ ಸ್ಥಳವನ್ನು ಕೊರೋನಾ ಸೋಂಕಿತರಿಗೆ ನೀಡಲಾಗುತ್ತಿದೆ ಎಂದು ಕ್ಯಾನ್ಸ್ ಮೇಯರ್ ಡೇವಿಡ್ ಲಿಸ್ನಾರ್ಡ್ ತಿಳಿಸಿದ್ದಾರೆ.

ಮನೆಯಿಲ್ಲದವರಿಗೆ ಇಲ್ಲಿ ಸ್ವಚ್ಛವಾದ ಕ್ವಾರ್ಟರ್ಸ್ ಗಳನ್ನು, ಆಹಾರ ಮತ್ತು ವೈದ್ಯಕೀಯ ನೆರವನ್ನು ಪಲೈಸ್ ಕಟ್ಟಡದಲ್ಲಿ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪಲೈಸ್ ನ ನೆಲ ಮಹಡಿಯಲ್ಲಿ ಕ್ಯಾಂಟೀನ್ ಮತ್ತು ಬೆಡ್ ಗಳನ್ನು ನಿರ್ಮಿಸಲಾಗುತ್ತದೆ. ಇಲ್ಲಿಯೇ ಚಲನಚಿತ್ರೋತ್ಸವ ಸಮಯದಲ್ಲಿ ಕ್ಯಾನ್ಸ್ ಫಿಲ್ಮ್ ಮಾರ್ಕೆಟ್ ನಡೆಯುವುದು. ಅಲ್ಲಿ 80 ಮಂದಿಗೆ ವೈದ್ಯಕೀಯ ಸೌಲಭ್ಯಗಳೊಂದಿಗೆ ಆಶ್ರಯ ನೀಡಲಾಗುತ್ತದೆ.

SCROLL FOR NEXT