ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ

ಅತ್ಯುತ್ತಮ ನಟ ಪ್ರಶಸ್ತಿ ಬೆನ್ನಲ್ಲೇ ರಿಷಬ್ ಶೆಟ್ಟಿ ಬಿಗ್ ಅನೌನ್ಸ್‌ಮೆಂಟ್; ಪಂಚಭಾಷೆಗಳಲ್ಲಿ ಬರಲಿದೆ Motorcycle Diary's

ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ರಿಷಬ್ ಶೆಟ್ಟಿ ಫಿಲ್ಮ್ಸ್ ಮತ್ತು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಜಂಟಿಯಾಗಿ ಮೋಟಾರ್ ಸೈಕಲ್ ಡೈರೀಸ್ ಎಂಬ ಹೊಸ ಪ್ಯಾನ್-ಇಂಡಿಯಾ ಸಿನಿಮಾವನ್ನು ಘೋಷಿಸಿವೆ. ಆ ಕುರಿತ ವರದಿ ಇಲ್ಲಿದೆ:

ಮೋಟಾರ್ ಸೈಕಲ್ ಡೈರೀಸ್ ಹೊಸ ಸಿನಿಮಾ ಘೋಷಿಸಿದ ರಿಷಬ್ ಶೆಟ್ಟಿ — Online Desk
Hruthin H P
Updated On : 29 Nov 2026, 5:44 pm

Motorcycle Diary's: ಕಾಂತಾರ ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಅವರು ಇದೀಗ ತಮ್ಮ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡ ಬೆನ್ನಲ್ಲೇ, ರಿಷಬ್ ಶೆಟ್ಟಿ ಅವರು ಹೊಸ ಪ್ಯಾನ್-ಇಂಡಿಯಾ ಸಿನಿಮಾವನ್ನು ಘೋಷಿಸಿದ್ದಾರೆ. ಮೋಟಾರ್ ಸೈಕಲ್ ಡೈರೀಸ್ ಎಂಬ ವಿಶಿಷ್ಟ ಶೀರ್ಷಿಕೆಯ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ರಿಷಬ್ ಶೆಟ್ಟಿ ಫಿಲ್ಮ್ಸ್ ಮತ್ತು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮಹಾ ಮೈತ್ರಿ

ಈ ಮಹತ್ವಾಕಾಂಕ್ಷಿ ಸಿನಿಮಾವನ್ನು ರಿಷಬ್ ಶೆಟ್ಟಿ ಅವರ ರಿಷಬ್ ಶೆಟ್ಟಿ ಫಿಲ್ಮ್ಸ್ ಮತ್ತು ಟಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಪ್ರಗತಿ ರಿಷಬ್ ಶೆಟ್ಟಿ ಮತ್ತು ಸೂರ್ಯದೇವರ ನಾಗ ವಂಶಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪ್ರತಿ ಮೈಲಿಗಲ್ಲೂ ಒಂದು ನೆನಪು, ಪ್ರತಿ ತಿರುವಲ್ಲೂ ಒಂದು ಕಥೆ, ಕೆಲವು ಪ್ರಯಾಣಗಳು ನೀವು ಯಾರೆಂಬುದನ್ನೇ ಬದಲಾಯಿಸುತ್ತವೆ ಎಂಬ ಭಾವನಾತ್ಮಕ ಅಡಿಬರಹದೊಂದಿಗೆ ಚಿತ್ರತಂಡ ಪೋಸ್ಟರ್ ಹಂಚಿಕೊಂಡಿದೆ. ಹಳೆಯ ಪುಸ್ತಕದ ಹರಿದ ಪುಟಗಳ ನಡುವೆ ಸಾಗುವ ರಸ್ತೆಯಲ್ಲಿ ಬೈಕ್ ಸವಾರನೊಬ್ಬ ಪ್ರಯಾಣಿಸುತ್ತಿರುವ ಪೋಸ್ಟರ್ ವಿನ್ಯಾಸವು ಇದೊಂದು ಹೃದಯಸ್ಪರ್ಶಿ ರೋಡ್-ಟ್ರಿಪ್ ಕಥೆಯಾಗಿರಲಿದೆ ಎಂಬ ಸುಳಿವು ನೀಡಿದೆ.

Advertisement

Advertisement

ಮುಂದುವರೆದು, ಕಾಂತಾರ ಮತ್ತು ಕಾಂತಾರ ಚಾಪ್ಟರ್ 1 ಚಿತ್ರಗಳಲ್ಲಿ ರಿಷಬ್ ಶೆಟ್ಟಿ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶಿವ ಚಿರಂತನ ಅವರು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಜಿ. ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಲಿದ್ದು, ಐದು ಸುಮಧುರ ಹಾಡುಗಳು ಇರಲಿವೆ. ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಭುವನ್ ರೆಡ್ಡಿ ಛಾಯಾಗ್ರಹಣ, ಧರಣಿ ಗಂಗೆಪುತ್ರ ಕಲಾ ನಿರ್ದೇಶನ, ರಘು ನಿಡುವಳ್ಳಿ ಸಂಭಾಷಣೆ ಹಾಗೂ ಪ್ರಗತಿ ರಿಷಬ್ ಶೆಟ್ಟಿ ಅವರ ವಸ್ತ್ರವಿನ್ಯಾಸ ಈ ಚಿತ್ರಕ್ಕಿದೆ.

Also Read

ಕಿಚ್ಚ ಸುದೀಪ್-ಪ್ರೇಮ್ ಕಾಂಬಿನೇಷನ್ ಚಿತ್ರಕ್ಕೆ 'ದಾದಾ ಆನ್ ಹಾಲಿಡೇ' ಶೀರ್ಷಿಕೆ

ಹಾಗಾದ್ರೆ, ರಿಷಬ್ ಶೆಟ್ಟಿ ಪಾತ್ರವೇನು?

ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ನಾಯಕನಾಗಿ ನಟಿಸುತ್ತಿಲ್ಲ; ಬದಲಾಗಿ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ ಎಂದು ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಚಿತ್ರದ ಮುಖ್ಯ ತಾರಾಗಣದ ವಿವರಗಳನ್ನು ತಂಡ ಇನ್ನೂ ಬಹಿರಂಗಪಡಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement