ಬಾಲಿವುಡ್ನ 'ಬೊಗಳೆ ಬಿಚ್ಚಮ್ಮ' ಪೂನಂ ಪಾಂಡೆಯ ಬಾಡಿಯಲ್ಲಿ ಭಕ್ತಿಭಾವ ಅದೆಲ್ಲಿ ಸುಪ್ತವಾಗಿತ್ತೋ... ಮೊನ್ನೆ ಅಲಹಾಬಾದ್ನಲ್ಲಿ ಗಂಗೆ- ಯುಮನೆಗೆ ಸಮನಾಗಿ ಅದು ಹೊಳೆಯಾಗಿ ಹರಿದಿತ್ತು.
ಹೌದು, ಕುಂಭಮೇಳದಲ್ಲಿ ಪೂನಂ ಪ್ರತ್ಯಕ್ಷಳಾಗಿದ್ದಳು. ಕುಂಭಮೇಳದಲ್ಲಿ ಸಾಧುಗಳು ಅರೆಬೆತ್ತಲೆಯಾಗಿ ನೀರಿನಲ್ಲಿ ಮುಳುಗೇಳುವುದರಿಂದ ಆಂಗ್ಲ ಮಾಧ್ಯಮಗಳು 'ಅರೆಬೆತ್ತಲೆ ಉತ್ಸವ' ಅಂತಲೇ ಬಣ್ಣಿಸುತ್ತವೆ. ಅಂಥ ಸ್ಥಳದಲ್ಲೂ ಪೂನಂ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿದಿದ್ದು ಹೆಮ್ಮೆಯ ಸಂಗತಿ! ಎಲ್ಲೆಡೆ ತುಂಡು ಬಟ್ಟೆಯಲ್ಲೇ ಕಾಣಿಸಿಕೊಳ್ಳುವ ಈ ಮಾಡೆಲ್, ಪೂರ್ತಿ ಡ್ರೆಸ್ಸಿನಲ್ಲೇ ಗಂಗೆಯಲ್ಲಿ ಮುಳುಗಿದ್ದಳು. ಆ ಕ್ಷಣದ 'ತಾಜಾ' ಚಿತ್ರ ಇದು.
ಆಕೆಯ ಮುಂದಿನ 'ನಶಾ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದಕ್ಕಾಗಿ 6 ಕೆ.ಜಿ. ತೂಕ ಏರಿಸಿಕೊಂಡ ಪೂನಂ, ಇನ್ನು ಸ್ಲಿಮ್ಮಾಗುವತ್ತ ಚಿಂತಿಸುತ್ತಿದ್ದಾಳಂತೆ.