ಅಭಿಷೇಕ್ ಬಚ್ಚನ್‌ಗೆ ಪ್ರೀತಿ ಹಂಚಬೇಕಂತೆ. ಅದೂ ಮಿಸ್ ವರ್ಡ್ ಐಶ್ವರ್ಯ ರೈ ಹೆಂಡತಿ ಇರುವಾಗ್ಲೂ ಈತನಿಗೇಕೆ ಇಂತಹ ಬುದ್ಧಿ ಬಂತು ಅಂತ ಅನ್ಕೋಬೇಡಿ. ಆತನ ಹೋಸ ಚಿತ್ರ 'ಮೇರೆ ಅಪ್ನೆ' ಯಲ್ಲಿ ನಟಿಸುವ ಮೊದಲ ದಿನ ತುಂಬಾ ನರ್ವಸ್ ಆಗಿದ್ದರಂತೆ. ಸುಮಾರು ಒಂದು ವರ್ಷದ ಬಿಡುವಿನ ನಂತರ ಈ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಸ್ವಲ್ಪ ಆತಂಕಗೋಂಡಿದ್ದರಂತೆ. ಅದರಿಂದ ಹೊರ ಬರಲು ನಿಮ್ಮ ಪ್ರೀತಿಯ ಮಾತುಗಳನ್ನು ಹಂಚಿ ಅಂತ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಈ ಚತ್ರದ ನಿರ್ದೇಶನವನ್ನು ಉಮೇಶ್ ಶುಕ್ಲಾ ಮಾಡುತ್ತಿದ್ದು, ದಕ್ಷಿಣ ಭಾರತದ ಖ್ಯಾತ ನಟಿ ಆಸಿನ್, ಅಭಿಷೇಕ್ ಜೋಡಿಯಾಗಿ ನಟಿಸುತ್ತಿದ್ದಾರೆ. 2012ರಲ್ಲಿ ಬಿಡುಗಡೆಯಾದ 'ಬೋಲ್ ಬಚ್ಚನ್' ಚಿತ್ರದ ನಂತರ ಅಭಿಷೇಕ್ ಬಾಲಿವುಡ್ ತೆರೆಯಮೇಲೆ ಕಾಣಿಸಿರಲಿಲ್ಲ.