ವನವಾಸದಿಂದ ಹೊರಬಂದು ಬೆಳ್ಳಿತೆರೆಯಲ್ಲಿ ಮೆಲ್ಲಮೆಲ್ಲಗೆ ಒಂದೊಂದೇ ಅವಕಾಶಗಳನ್ನು ಪಡೆಯುತ್ತಿರುವ ರಿಶಿ ಕಪೂರ್ ಥ್ರಿಲ್ ಆಗಿದ್ದಾರೆ. ಏಕೆಂದರೆ ಅವರು ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. 60 ವರ್ಷದ ರಿಶಿ, 60 ಕಲಾವಿದರೊಂದಿಗೆ, ಸುಭಾಷ್ ಘಾಯ್ ನಿರ್ದೇಶನದ 'ಕಾಂಚಿ'ಯಲ್ಲಿ ಕುಣಿದಿದ್ದಾರೆ. ವಿಶೇಷ ಎಂದರೆ ಬಹುತೇಕ ಎರಡು ದಶಕದ ಬಳಿಕ ರಿಶಿ ಸೋಲೋ ಹಾಡಿನಲ್ಲಿ ಕಾಣಿಸಿಕೊಂಡಿರುವುದು. ಸಲೀಮ್- ಸುಲೇಮಾನ್ ಸಂಗೀತ ಸಂಯೋಜನೆಯ ಗೀತೆಯ ಕೊರಿಯೊಗ್ರಫಿ ಮಾಡಿದ್ದು ಗಣೇಶ್ ಆಚಾರ್ಯ. 'ರಿಶಿ ಸರ್ ಉತ್ಸಾಹ ಕಂಡು ನಮಗೂ ಥ್ರಿಲ್ ಆಯಿತು' ಎನ್ನುವುದು ಚಿತ್ರತಂಡದ ಮಾತು.