ಒಂದು ಕಡೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತ ಖಾನ್ ಮದುವೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಮದುವೆಗೆ ಯಾವ್ಯಾವ ಸ್ಟಾರ್‌ಗಳು ಬರುತ್ತಾರೇ ಎಂಬ ಕುತೂಹಲ ಹೆಚ್ಚಾಗಿದೆ.
ಬಾಲಿವುಡ್ ಬಾದ್‌ಶಾ ಶಾರೂಖ್ ಖಾನ್ ಅರ್ಪಿತಾ ಮದುವೆಗೆ ಬರ್ತಾರಾ ಎಂಬ ಗೊಂದಲಕ್ಕೆ ಶಾರೂಖ್ ಅವರೇ ತೆರೆ ಎಳೆದಿದ್ದಾರೆ.
ಅರ್ಪಿತಾ ಮದುವೆಗೆ ನನಗೆ ಯಾವುದೇ ಆಹ್ವಾನ ಬೇಕಿಲ್ಲ. ಅವಳು ಚಿಕ್ಕವಳಿದ್ದಾಗಿನಿಂದಲೂ ನಾನು ಬಲ್ಲೆನು. ಆಕೆಯನ್ನು ಆಟವಾಡಿಸಿ ಬೆಳೆಸಿದ್ದೇನೆ. ಹಾಗಾಗಿ, ಆಕೆಯ ಮದುವೆಗೆ ನನಗೆ ಆಹ್ವಾನ ಬೇಕಿಲ್ಲ.
ಮದುವೆಗೆ ಹೋಗಲ್ಲ ಎಂಬ ಪ್ರಶ್ನೆಯೇ ಇಲ್ಲ. ಅರ್ಪಿತಾ ನನ್ನ ತಂಗಿಯು ಕೂಡ. ಅವಳ ಮದುವೆಗೆ ನಾನು ಹೋಗುತ್ತೇನೆ ಎಂದು ಶಾರೂಖ್ ಹೇಳಿದ್ದಾರೆ.
ಅರ್ಪಿತಾ ಮದುವೆಗೆ ಸಲ್ಮಾನ್ ಖಾನ್ ಅವರು ಶಾರೂಖ್ ಅವರನ್ನು ಆಹ್ವಾನಿಸಿದ್ದಾರೆಯೇ ಎಂಬ ಪ್ರಶ್ನೆಗೆ ಶಾರೂಖ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.