ಇತ್ತೀಚೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ ಎಂಬ ಗಾಳಿಸುದ್ದಿ ಹರಿದಾಡಿದ್ದು ಗೊತ್ತೇ ಇದೆ. ನಮ್ಮ ರಮ್ಯಾ ಮೇಡಂ ಸ್ಯಾಂಡಲ್ ವುಡ್‍ನಿಂದ ನಾಪತ್ತೆಯಾಗಿಲ್ಲವೇ.
ಇದೀಗ ಇದೇ ಹಾದಿಯಲ್ಲಿ ಬಾಲಿವುಡ್ ಸ್ಟಾರ್ ಹೀರೋಯಿನ್ ಕತ್ರಿನಾ ಕೈಫ್ ಸಹ ಕಾಣಿಸುತ್ತಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.
ಆಗಾಗ ಗಾಸಿಪ್ ಕಾಲಂಗಳಲ್ಲಿ ಕಾಣಿಸಿ ಕೊಳ್ಳುತ್ತಿದ್ದ ಕತ್ರಿನಾ ಎಲ್ಲಿ ಹೋದರು, ಸುದ್ದಿಯಿಲ್ಲ ಸುಳಿವಿಲ್ಲ ಎಂದು ಅವರ ಅಭಿಮಾನಿಗಳು ಕಂಗಾಲಾಗಿದ್ದಾರೆ. ಕೆಲವರಂತೂ ಮತ್ತೆ ಭಾರತಕ್ಕೆ ಬರಬೇಡಿ ಎಂದು ಟ್ವೀಟ್ ಮಾಡುತ್ತಿದ್ದಾರೆ. ಇಷ್ಟಕ್ಕೂ ಕತ್ರಿನಾ ಏನಾದರು? ಎಲ್ಲಿ ಹೋದರು? ಎಂಬ ಬಗ್ಗೆ ಮಾತ್ರ ನಿಖರ ಮಾಹಿತಿ ಇಲ್ಲ. ಅವರ ಮೇನೇಜರ್ ಸಹ ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ.
ಒಂದೆರಡು ದಿನ ಕಾದರೆ ಏನಾಗಿದೆ ಎಂದು ತಿಳಿಯಬಹುದು ಎಂದು ಬಾಲಿವುಡ್ ಕಾಯುತ್ತಿದೆ. ಸದ್ಯಕ್ಕೆ ಕತ್ರಿನಾ ಮೂರು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಬಹುಶಃ ಮೂರೂ ಚಿತ್ರಗಳ ಶೂಟಿಂಗ್ ಮುಗಿದ ಮೇಲೆಯೇ ತಮ್ಮ ಅಭಿಮಾನಿಗಳಿಗೆ ದರ್ಶನ ಭಾಗ್ಯ ಕರುಣಿಸಬಹುದೇನೊ?