ಶ್ರೀದೇವಿ-ಬೋನಿ ಕಪೂರ್ ಮಗಳು ಝಾನ್ವಿ ಕಪೂರ್ 
ಬಾಲಿವುಡ್

ಝಾನ್ವಿ ಮೇರಾ ನಾಮ್!

ಇದು ಅಪ್ಪ- ಮಕ್ಕಳ ಇಂಡಸ್ಟ್ರಿ. ಬಾಲಿವುಡ್‍ಗೆ ನೀವಿನ್ನೂ ಹಾಗೆಯೇ ಕರೀಬೇಕು. ಮಹೇಶ್ ಭಟ್ ಮಗಳು ಅಲಿಯಾಭಟ್ ಬಂದು ಮೋಡಿ ಮಾಡಿದ ಬೆನ್ನಲ್ಲೇ ಮಿಕ್ಕ ಸ್ಟಾರ್ ಪೋಷಕರು ತಮ್ಮ ಮಕ್ಕಳನ್ನು ಬಿಲದಿಂದ ನಿಧಾನವಾಗಿ ಹೊರತರುತ್ತಿದ್ದಾರೆ...

ಇದು ಅಪ್ಪ- ಮಕ್ಕಳ ಇಂಡಸ್ಟ್ರಿ. ಬಾಲಿವುಡ್‍ಗೆ ನೀವಿನ್ನೂ ಹಾಗೆಯೇ ಕರೀಬೇಕು. ಮಹೇಶ್ ಭಟ್ ಮಗಳು ಅಲಿಯಾಭಟ್ ಬಂದು ಮೋಡಿ ಮಾಡಿದ ಬೆನ್ನಲ್ಲೇ ಮಿಕ್ಕ ಸ್ಟಾರ್ ಪೋಷಕರು ತಮ್ಮ ಮಕ್ಕಳನ್ನು ಬಿಲದಿಂದ ನಿಧಾನವಾಗಿ ಹೊರತರುತ್ತಿದ್ದಾರೆ. ಈಗಿನ ಸರದಿ ನಟಿ ಶ್ರೀದೇವಿಯದ್ದು. ಶ್ರೀದೇವಿ-ಬೋನಿ ಕಪೂರ್ ಮಗಳು ಝಾನ್ವಿ ಕಪೂರ್ ಶೀಘ್ರದಲ್ಲೇ ಬೆಳ್ಳಿಪರದೆಗೆ ಕಾಲಿಡುತ್ತಿದ್ದಾಳಂತೆ.

ಮಾಮೂಲಿ ಡೈರೆಕ್ಟರ್ ಕೈಗೆ ಸಿಕ್ಕರೆ, ಸಾಮಾನ್ಯ ನಟರೆದುರು ನಟಿಸಿದರೆ ಮಗಳು ಮಿಂಚಲ್ಲ ಅನ್ನೋ ಸತ್ಯ ಇವರಿಗೂ ಗೊತ್ತು.ಹಾಗಾಗಿಯೇ ಮಗಳನ್ನು ಭರ್ಜರಿ ಮಾರ್ಕೆಟ್ ಮಾಡಲು ಈ ಜೋಡಿ ಹೊರಟಿದೆ. ಅಂದಹಾಗೆ, ಝಾನ್ವಿ ಕಪೂರ್ ನಟಿಸುತ್ತಿರುವುದು ಶಾರೂಖ್ ಖಾನ್‍ನ ಮಗನೆದುರು! ಅಂದರೆ, ಆರ್ಯನ್ ಜೊತೆ. ಇಷ್ಟು ದಿನ ಶಾರೂಖ್ ಕೂಡ ಇಂಥದ್ದೇ ಚಾನ್ಸ್ ಗಾಗಿ ಕಾಯುತ್ತಿದ್ದನಂತೆ. ಹೆಚ್ಚು  ಪ್ರಚಾರ ಸಿಗುವ ನಟಿಯೆದುರೇ ಮಗನನ್ನು ಹೀರೋ ಮಾಡ್ಬೇಕು ಅನ್ನೋ ಕಿಂಗ್ ಖಾನ್‍ನ ಆಸೆಯೂ ಈಡೇರಿದಂತಾಗಿದೆ.

`ಇಂಗ್ಲಿಷ್ ವಿಂಗ್ಲಿಷ್'ನ ಬಳಿಕ ಶ್ರೀದೇವಿಗೂ ಸೂಕ್ತ ಕಥೆಯುಳ್ಳ ಚಿತ್ರ ಸಿಗಲಿಲ್ಲ. ಇತ್ತ ಶಾರೂಖ್ ಕೂಡ ಮೊದಲಿನ ಫಾರ್ಮ್ ನಲ್ಲಿಲ್ಲ. ಹೀಗಾಗಿ, ಎರಡು ತಾರೆಗಳು ಆಗಸದಲ್ಲಿ ಮಸುಕಾಗುವ ಮುನ್ನವೇ ತಮ್ಮ ಮಿಣುಕು ಹುಳುಗಳನ್ನು ಬಿಟ್ಟು ಪ್ರಕಾಶಮಾನತೆಯನ್ನು ಹೆಚ್ಚಿಸಿಕೊಳ್ಳಲು ಹೊರಟಿವೆ.
ಹಾಗಾದರೆ ಯಾರು ಆ ಡೈರೆಕ್ಟರ್? ಈ ಪ್ರಶ್ನೆಯನ್ನು ಕಿಂಗ್‍ಖಾನ್ ಮತ್ತು ಶ್ರೀದೇವಿ ಬಹುದಿನಗಳವರೆಗೆ ತಲೆಯಲ್ಲಿಟ್ಟುಕೊಂಡು ಕೊರಗಿದ್ದರು. ಕೊನೆಗೆ ಕರಣ್ ಜೋಹಾರ್ ಸೂಕ್ತ ನಿರ್ದೇಶಕ ಎಂದು ಮನದಟ್ಟಾಯ್ತಂತೆ. ಏಕೆಂದರೆ, ಕರಣ್ ಈ ಹಿಂದೆ ಮಹೇಶ್ ಭಟ್ ಮಗಳನ್ನು `ಸ್ಟೂಡೆಂಟ್ ಆಫ್ ದಿ ಇಯರ್'ನಲ್ಲಿ ತುಂಬಾ ಚೆನ್ನಾಗಿ ಫೋಕಸ್ ಮಾಡಿದ್ದರು. ಅಲಿಯಾ ಭಟ್‍ಗೆ ಈ ಚಿತ್ರ ಅತ್ಯದ್ಭುತ ಪ್ಲಾಟ್ ಫಾರಂ ಅನ್ನೂ ನಿರ್ಮಿಸಿ
ಕೊಟ್ಟಿತ್ತು. ನಂತರ ಇದೇ ಸಕ್ಸಸ್ ಫೋಸ್ ಅನ್ನು ಇಟ್ಟುಕೊಂಡು ಕರಣ್ `ಟು ಸ್ಟೇಟ್ಸ್' ಸಿನಿಮಾವನ್ನೂ ತೆಗೆದರು.

ಅಲ್ಲೂ ಅಲಿಯಾ ಬಂಪರ್ ಲಾಟರಿಗೂ ಒಂದು ಕೈ ಜಾಸ್ತಿಯೇ ಅನ್ನೋ ರೀತಿಯಲ್ಲಿ ಅದೃಷ್ಟ ದಯಪಾಲಿಸಿದ್ದಳು. ಇವತ್ತು ಸಕ್ಸಸ್ಸಿನ ಶಿಖರದಲ್ಲಿ ನಿಂತಿರುವ ಅಲಿಯಾಳ ಹಿಂದೆ ಕರಣ್ ಕೃಪೆಯನ್ನು ತಳ್ಳಿಹಾಕುವಂತೆಯೇ ಇಲ್ಲ. ಇದೇ ಕಾರಣಕ್ಕೇ ಶ್ರೀದೇವಿ ಮತ್ತು ಶಾರೂಖ್ ತಮ್ಮ ಮಕ್ಕಳನ್ನು ಕರಣ್‍ನ ಕ್ಯಾಮೆರಾದೆದುರು ನಿಲ್ಲಿಸುತ್ತಿದ್ದಾರೆ. ಅಂದಹಾಗೆ, ಝಾನ್ವಿ ಕಪೂರ್‍ಗೆ ಇನ್ನೂ ಹದಿನೇಳೇ ವರುಷ. ಶ್ರೀದೇವಿ ಇಲ್ಲಿಯ ತನಕ ಈಕೆಯನ್ನು ಹೆಚ್ಚು ಪಾರ್ಟಿಗೆಲ್ಲೂ ಕರಕೊಂಡು ಬಂದಿರಲಿಲ್ಲ. ಆದರೆ, ಈಗ ಮಗಳನ್ನು ಎಲ್ಲ ಕಡೆ ಬಾಲದಂತೆ ಮಾಡಿಕೊಂಡಿದ್ದಾಳೆ.

ಇದು ಮಗಳನ್ನು ನಿಧಾನವಾಗಿ ಫೋಕಸ್ ಮಾಡುವ ತಂತ್ರವಲ್ಲದೇ ಬೇರೇನೂ ಅಲ್ಲ. ಅಪ್ಪ ಬೋನಿ ಕಪೂರ್ ಬಾಲಿವುಡ್‍ನ ಅತ್ಯುತ್ತಮ ನಿರ್ಮಾಪಕ. ಮುಂದಿನ ವರುಷ `ಮಿಸ್ಟರ್ ಇಂಡಿಯಾ-2' ತೆಗೆಯುವ ದೊಡ್ಡ ಪ್ರಾಜೆಕ್ಟನ್ನೂ ಇಟ್ಟುಕೊಂಡವರು. ಮಗಳು ಮೊದಲ ಹೆಜ್ಜೆಯಲ್ಲೇ ಗೆದ್ದರೆ ಅಪ್ಪನ ನಿರ್ಮಾಣದ ಗರಡಿಯಲ್ಲಿ ಇನ್ನೂ
ಮಿಂಚಬಹುದೇನೋ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT