ನವದೆಹಲಿ: ಬಾಲಿವುಡ್ ಆಕ್ಷನ್ ಸಿನೆಮಾ 'ಬ್ರದರ್ಸ್' ಮೊದಲ ವಾರದಲ್ಲೇ ೭೦ ಕೋಟಿಗಿಂತಲೂ ಹೆಚ್ಚಿನ ಗಳಿಕೆ ಕಂಡು ೧೦೦ ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಹಾಕಿದೆ.
ಕರಣ್ ಮಲ್ಹೋತ್ರ ನಿರ್ದೇಶನದ ಈ ಸಿನೆಮಾದಲ್ಲಿ ಅಕ್ಷಯ್ ಕುಮಾರ್ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಕಾದಾಡುವ ಸಹೋದರರಾಗಿ ಕಾಣಿಸಿಕೊಂಡಿದ್ದಾರೆ.
"ಈ ಗಳಿಗೆ ನಮ್ಮ ಸಿನೆಮಾಗಳನ್ನು ಜನ ವೀಕ್ಷಿಸುತ್ತಿರುವುದನ್ನು ತಿಳಿಸುತ್ತದೆ. ಈ ಗಳಿಕೆ ಇನ್ನೂ ಹೆಚ್ಚಾದರೆ ನಾವು ನಮ್ಮ ಪ್ರದರ್ಶನವನ್ನು ಉತ್ತಮಗೊಳಿಸಿಕೊಳ್ಳಲು ಸಹಾಯ ಮಾಡುತ್ತದೆ" ಎಂದು ನಟ ಸಿದ್ಧಾರ್ಥ್ ತಿಳಿಸಿದ್ದರು.
ಫಾಕ್ಸ್ ಸ್ಟಾರ್ ಸ್ಟುಡಿಯೋ ಅರ್ಪಿಸಿರುವ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿರುವ 'ಬ್ರದರ್ಸ್' ಸಿನೆಮಾದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಜಾಕಿ ಶ್ರಾಫ್ ಕೂಡ ನಟಿಸಿದ್ದಾರೆ.