ಕತ್ರಿನಾ ಕೈಫ್ (ಸಂಗ್ರಹ ಚಿತ್ರ) 
ಬಾಲಿವುಡ್

ರಿಶಿ ಕಪೂರ್ ಜೀವಂತ ದಂತಕಥೆ: ಕತ್ರಿನಾ ಕೈಫ್

ಬಾಲಿವುಡ್ ನಟಿ ಕತ್ರಿನಾ ಕೈಫ್ ತನ್ನ ಬಾಯ್ ಫ್ರೆಂಡ್ ತಂದೆ, ಭಾವೀ ಮಾವ ರಿಶಿ ಕಪೂರ್ ಬಗ್ಗೆ ಪ್ರಶಂಸೆಯ ಸುರಿಮಳೆಯನ್ನೇ...

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ತನ್ನ ಬಾಯ್ ಫ್ರೆಂಡ್ ತಂದೆ, ಭಾವೀ ಮಾವ ರಿಶಿ ಕಪೂರ್ ಬಗ್ಗೆ ಪ್ರಶಂಸೆಯ ಸುರಿಮಳೆಯನ್ನೇ ಹರಿಸಿದ್ದಾಳೆ. ಹಿರಿಯ ನಟ ರಿಶಿ ಕಪೂರ್ ನನ್ನು ಜೀವಂತ ದಂತಕಥೆ ಎಂದು ಕರೆದಿದ್ದಾಳೆ.

``ನಾನು ರಿಶಿ ಕಪೂರ್ ಅವರ ಜೊತೆ ನಮಸ್ತೆ ಲಂಡನ್ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ಅವರು ತುಂಬಾ ಒಳ್ಳೆಯ ಮನುಷ್ಯ. ಅವರೊಬ್ಬ ಅದ್ಭುತ, ಆಕರ್ಷಣೀಯ ವ್ಯಕ್ತಿತ್ವದ ಮನುಷ್ಯ. ಅವರು ಜೀವಂತ ದಂತಕಥೆ, ಅವರನ್ನು ನೋಡುವಾಗ ಖುಷಿಯಾಗುತ್ತದೆ'' ಎಂದು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೊಗಳಿದ್ದಾಳೆ.

ರಿಶಿ ಕಪೂರ್ ಪುತ್ರ ನಟ ರಣ್ ಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ 2009ರ ಅಜಬ್ ಪ್ರೇಮ್ ಕಿ ಗಜಬ್ ಕಹಾನಿ ಸಿನಿಮಾದಿಂದ ಡೇಟಿಂಗ್ ಮಾಡಲು ಆರಂಭಿಸಿದ್ದರು. 2013ರಲ್ಲಿ ಇಬಿಜಾದ ಸಮುದ್ರ ತೀರದಲ್ಲಿ ತೆಗೆದ ಫೋಟೋ ಅಂತರ್ಜಾಲದಲ್ಲಿ ವೈರಲ್ ಆದ ಮೂಲಕ ಇವರಿಬ್ಬರ ಸಂಬಂಧ ಸಾಬೀತಾಯಿತು. ಅಲ್ಲಿಯವರೆಗೆ ಗುಸುಗುಸು ಸುದ್ದಿಯಾಗಿತ್ತಷ್ಟೆ. ಕೆಲವೆಡೆ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರೂ, ನಿಶ್ಚಿತಾರ್ಥ ಮುಗಿದಿದೆ ಎಂಬ ವಿಷಯ ಹಬ್ಬಿದ್ದರೂ ಇದುವರೆಗೆ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ತುಟಿ ಬಿಚ್ಚಿಲ್ಲ.

''ಪ್ರತಿಯೊಬ್ಬರಂತೆ ನಾವೂ ಕೂಡ ನಮ್ಮ ನಮ್ಮ ಕೆಲಸದಲ್ಲಿ ಮಗ್ನರಾಗಿದ್ದೇವೆ. ಕಪೂರ್ ಮನೆತನದ ಬಗ್ಗೆ ನನಗೆ ತುಂಬಾ ಗೌರವವಿದೆ. ಎಲ್ಲಿ ಹೋದರೂ ಜನ ನಿಮ್ಮಿಬ್ಬರ ಮದುವೆ ಯಾವಾಗ ಎಂದು ಕೇಳುತ್ತಾರೆ. ಜನರು ಇಷ್ಟೊಂದು ಅವಸರ ಯಾಕೆ ಮಾಡುತ್ತಾರೆ ಎಂದು ನನಗೆ ಗೊತ್ತಾಗುತ್ತಿಲ್ಲ. ಮದುವೆ ಯಾವ ಸಮಯದಲ್ಲಿ ಆಗಬೇಕೋ ಆಗಲೇ ಆದರೆ ಚೆಂದ'' ಎಂದು  32 ವರ್ಷದ ಗ್ಲಾಮರಸ್ ನಟಿ ಕತ್ರಿನಾ ಹೇಳುತ್ತಾಳೆ. ಇತ್ತೀಚಿನ ದಿನಗಳಲ್ಲಿ ಆಕೆ ಕಪೂರ್ ಕುಟುಂಬಕ್ಕೆ ಹತ್ತಿರವಾಗಿದ್ದಾಳೆ.

ಕಬೀರ್ ಖಾನ್ ನಿರ್ದೇಶನದ ಸೈಫ್ ಆಲಿ ಖಾನ್ ಜೊತೆ ಫ್ಯಾಂಟಮ್ ಚಿತ್ರದಲ್ಲಿ ಕತ್ರಿನಾ ನಟಿಸಿದ್ದು, ತನ್ನ ವೃತ್ತಿ ಬದುಕಿಗಿಂತ ಖಾಸಗಿ ವಿಷಯಗಳು ಹೆಚ್ಚು ಸುದ್ದಿಯಾಗುತ್ತಿರುವುದು ಬೇಸರವನ್ನುಂಟು ಮಾಡುತ್ತದೆ ಎನ್ನುತ್ತಾಳೆ.

ಇತ್ತೀಚೆಗೆ ನಾನು ಸೆಮಿನಾರ್ ವೊಂದರಲ್ಲಿ ಭಾಗಿಯಾಗಿದ್ದೆ. ಅಲ್ಲಿ ಎಲ್ಲಾ ವೃತ್ತಿಗಳಲ್ಲಿನ ಯಶಸ್ವಿ ವ್ಯಕ್ತಿಗಳು ಬಂದಿದ್ದರು. ಎಲ್ಲರೂ ತಮ್ಮ ತಮ್ಮ ವೃತ್ತಿಯ ಬಗ್ಗೆ ಮಾತನಾಡುತ್ತಿದ್ದರೆ ನನ್ನಲ್ಲಿ ಬಾಯ್ ಫ್ರೆಂಡ್, ಮದುವೆ ಇತ್ಯಾದಿ ಖಾಸಗಿ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಮಹಿಳೆಯ ಬಾಳಿನಲ್ಲಿ ವೃತ್ತಿ, ಕೆಲಸ ಮುಖ್ಯವಾಗುತ್ತದೆಯೇ ಹೊರತು ಬಾಯ್ ಫ್ರೆಂಡ್ ವಿಷಯ ಅಲ್ಲ ಎಂದು ಕತ್ರಿನಾ ಅನುಭವಸ್ಥಳಂತೆ ನುಡಿಯುತ್ತಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT