ಮುಂಬೈ: 'ಕಟ್ಟಿ ಬಟ್ಟಿ' ಸಿನೆಮಾ ನೋಡಿ ಸಿನೆಮಾ ಮಂದಿರದಿಂದ ಕಣ್ಣೀರಿಡೂತ್ತಾ ಹೊರಂಬಂದರು ಅಮೀರ್ ಖಾನ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಹಾಸ್ಯ ಮಾಡುತ್ತಿದ್ದರೆ, ತಮ್ಮ ಮುಂದಿನ ರೊಮ್ಯಾಂಟಿಕ್ ಹಾಸ್ಯ ಚಿತ್ರದ ತೀವ್ರತೆ ಎಷ್ಟಿದೆಯೆಂದರೆ ಅದನ್ನು ಚಿತ್ರೀಕರಿಸುವಾಗ ನಾನು ದಿನ ರಾತ್ರಿ ಅಳುತ್ತಿದ್ದೆ ಎಂದು ಕಂಗನಾ ರನೌತ್ ಹೇಳಿದ್ದಾರೆ.
ಅಮೀರ್ ಖಾನ್ ಅವರಂತೆಯೇ ಜನರು ಸಿನೆಮಾಗಿ ತೀವ್ರ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಕೂಡ ಅವರು ಹೇಳಿದ್ದಾರೆ.
"ಅಮೀರ್ ನಂತೆಯೇ ಜನರು ಕೂಡ ತೀರಾ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. 'ಕಟ್ಟಿ ಬಟ್ಟಿ' ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರದ ರೀತಿ ಕಾಣಿಸುತ್ತದೆ ಆದರೆ ಅದು ಅಷ್ಟೇ ಅಲ್ಲ. ಜನ ಬಂದು ಸಿನೆಮಾ ನೋಡಿದ ಮೇಲೆ ಅದು ಜೀವನಕ್ಕಿಂತಲೂ ದೊಡ್ಡ ಕಥೆ ಎಂದು ತಿಳಿಯಲಿದ್ದಾರೆ. ಸಿನೆಮಾದ ಪಾತ್ರಗಳ ತೀವ್ರತೆ ಅದ್ಭುತ" ಎಂದು ಅವರು ತಿಳಿಸಿದ್ದಾರೆ.
ನಿಖಿಲ್ ಅದ್ವಾನಿ ನಿರ್ದೇಶನದ ಈ ಸಿನೆಮಾ ಆಧುನಿಕ ಯುಗದ ಸಂಬಂಧಗಳ ಕಥಾಹಂದರ ಹೊಂದಿದೆ. ಇದು ರೊಮ್ಯಾಂಟಿಕ್ ಹಾಸ್ಯ ಚಿತ್ರವಾದರೂ ಕೆಲವೊಮ್ಮೆ ಥ್ರಿಲ್ಲಿಂಗ್ ಎನಿಸಿ ಅದ್ಭುತ ಪ್ರೇಮಕಥೆಯನ್ನು ಕೂಡ ಹೇಳುತ್ತದೆ.
ಸೆಪ್ಟಂಬರ್ ೧೮ರಂದು ಸಿನೆಮಾ ಬಿಡುಗಡೆಯಾಗಲಿದೆ.