ಮುಂಬೈ: ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿ ಬಂದ ಧೂಮ್ ಸರಣಿ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದವು. ಇದೀಗ ಧೂಮ್ ಸರಣಿಯ ನಾಲ್ಕನೇ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ.
ಯಶ್ ರಾಜ್ ಫಿಲ್ಮ್ಸ್ ಟ್ವೀಟರ್ ನಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದು, ಚಿತ್ರಕ್ಕೆ 'ಧೂಮ್ ರಿಲೋಡ್' ಎಂದು ಹೆಸರಿಡಲಾಗಿದೆ.
ಮೂಲಗಳ ಪ್ರಕಾರ ನಟ ಸಲ್ಮಾನ್ ಖಾನ್, ಹೃತಿಕ್ ರೋಷನ್ ಮತ್ತು ಅಮಿತಾಬ್ ಬಚ್ಚನ್ ಈಗಾಗಲೇ ಚಿತ್ರಕ್ಕೆ ಸಹಿ ಮಾಡಿದ್ದು, ದಕ್ಷಿಣ ಭಾರತದ ಬಾಹುಬಲಿ ಖ್ಯಾತಿಯ ಪ್ರಭಾಸ್ ಸಹ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಎಲ್ಲಾ ಅಂದುಕೊಂಡಂತೆ ಆದರೆ ಧೂಮ್ ರಿಲೋಡ್ ಭಾರತೀಯ ಚಿತ್ರ ರಂಗದಲ್ಲಿ ಅತೀ ವಿಶೇಷ ಸಿನಿಮಾ ಆಗಲಿದೆ.